ನಿಮ್ಮ ದೂರದರ್ಶನಕ್ಕೆ ಹೊಸ ಲುಕ್

31

ಅತ್ಯಂತ ವಿಶ್ವಾಸಾರ್ಹ ಹಾಗೂ ಹೆಚ್ಚು ಪ್ರಸಾರ ಜಾಲ ಹೊಂದಿರುವ ದೂರದರ್ಶನ ವಾಹಿನಿಗಳು ಹೊಸ ಲುಕ್ ಪಡೆಯಲಿವೆ. ಸದ್ಯದ ಐಕಾನಿಕ್ ಲೋಗೊ ಶೀಘ್ರವೇ ಇತಿಹಾಸ ಸೇರಲಿದ್ದು, ಅದೇ ಜಾಗಕ್ಕೆ ಹೊಸ ಲೋಗೊ ಬರಲಿದೆ.

ಈಗಾಗಲೇ 5 ಲೋಗೊಗಳನ್ನು ಅಂತಿಮಗೊಳಿಸಲಾಗಿದ್ದು, ಅದರಲ್ಲಿ ಒಂದನ್ನೂ ಸದ್ಯದಲ್ಲೇ ಆಯ್ಕೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

2017 ಜುಲೈ ಮತ್ತು ಆಗಸ್ಟ್ ನಡುವೆ ದೂರದರ್ಶನ ಲೋಗೋ ಸ್ಪರ್ಧೆ ನಡೆಸಿತ್ತು. ಈ ಸ್ಪರ್ಧೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಈಗ 5 ಲೋಗೋಗಳನ್ನು ಅಂತಿಮ ಹಂತದ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಪ್ರಸಾರ ಭಾರತಿಯೇ ಟ್ವೀಟ್ ಮೂಲಕ ತಿಳಿಸಿದೆ.

ಪ್ರಸಾರ ಭಾರತಿಯ ಸಿಇಒ ಶಶಿ ಶೇಖರ್ ಟ್ವೀಟ್ ಮಾಡಿ, 10 ಸಾವಿರ ಎಂಟ್ರಿಯಲ್ಲಿ ಟಾಪ್ 5 ಲೋಗೋವನ್ನು ಆಯ್ಕೆ ಮಾಡಲಾಗಿದೆ. ಈ ಲೋಗೋ ಪೈಕಿ ಅಂತಿಮವಾಗಿ ಒಂದನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಡಿಡಿಗೆ ಹೊಸ ಬ್ರಾಂಡ್ ನೀಡಲು ಮತ್ತು ದೂರದರ್ಶನದತ್ತ ಯುವ ಜನರನ್ನು ಸೆಳೆಯಲು ಈ ಲೋಗೋ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದವರಿಗೆ 10 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ.
Leave a Reply

Your email address will not be published. Required fields are marked *