ನಿಮ್ಮ ದೂರದರ್ಶನಕ್ಕೆ ಹೊಸ ಲುಕ್

22

ಪಾಕಿಸ್ತಾನ್ ಒಂದಿಲ್ಲೊಂದು ಅಕ್ರಮಗಳನ್ನು ಎಸಗುತ್ತ ಕುತಂತ್ರ ಬುದ್ದಿ ತೋರಿಸುತ್ತಿದೆ. ಈಗ ಅದೇ ದೇಶದ ಹಡಗಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 500 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಭಾರತದ ಕೋಸ್ಟಲ್ ಗಾರ್ಡ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ. ಆ ಮೂಲಕ ಪಾಕಿಸ್ತಾನದ ಕಳ್ಳ ಸಾಗಣೆ ಜಾಲವೊಂದು ಬಟಾ ಬಯಲಾಗಿದೆ.

ಪಾಕಿಸ್ತಾನದ “ಅಲ್ ಮದಿನಾ” ಹೆಸರಿನ ಹಡಗು ಗುಜರಾತಿನ ಜಾಕೌ ಕರಾವಳಿಯ ಭಾಗದಲ್ಲಿ ಮಾದಕ ವಸ್ತುಗಳನ್ನು ರಫ್ತು ಮಾಡಲು ಬಂದು ನಿಂತಿದೆ ಎಂದು ಗುಪ್ತಚರ ಇಲಾಖೆ, ಕೋಸ್ಟಲ್ ಗಾರ್ಡ್ಗೆ ಖಚಿತ ಮಾಹಿತಿ ನೀಡಿತ್ತು. ಅದೇ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ್ದ ಕೋಸ್ಟಲ್ ಗಾರ್ಡ್ ಸಿಬ್ಬಂದಿ, ಎರಡು ವೇಗದ ಬೋಟ್ ಮೂಲಕ ಸಮುದ್ರದಲ್ಲಿ ಸುತ್ತಾಡಿ ಹಡಗನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ.

ಭಾರತದ ಬೋಟ್‍ಗಳು ತಮ್ಮ ಕಡೆ ಬರುತ್ತಿರುವುದನ್ನು ಗಮನಿಸಿದ್ದ ಪಾಕ್ ಹಡಗು ವಾಪಸ್ ತಿರುಗಿಸಿ ಪಾಕ್ ಕರಾವಳಿಯತ್ತ ಮುನ್ನುಗ್ಗಿದೆ. ಈ ವೇಳೆ ಭಾರತದ ಬೋಟ್‍ಗಳು ಚೇಸ್ ಮಾಡಿ ಆ ಹಡಗನ್ನು ತಡೆದು ನಿಲ್ಲಿಸಿವೆ.

ಈ ವೇಳೆ ಆ ಹಡಗಿನಲ್ಲಿದ್ದ ವ್ಯಕ್ತಿಗಳು ಕೆಲವು ಚೀಲಗಳನ್ನು ಸಮುದ್ರಕ್ಕೆ ಎಸೆದಿದ್ದಾರೆ. ಸಮುದ್ರಕ್ಕೆ ಎಸೆದಿದ್ದ 7 ಚೀಲಗಳನ್ನು ಕೋಸ್ಟಲ್ ಗಾರ್ಡ್ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಡಗಿನಿಂದ ವಶಪಡಿಸಿಕೊಂಡ ವಸ್ತುಗಳನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ ಈ ಮಾದಕ ವಸ್ತುಗಳ ಸುಮಾರು 400 ರಿಂದ 500 ಕೋಟಿ ಬೆಲೆ ಬಾಳುತ್ತದೆ ಎಂದು ಅಂದಾಜಿಸಲಾಗಿದೆ. ಹಡಗಿನಲ್ಲಿದ್ದ ವ್ಯಕ್ತಿಗಳನ್ನು ಕೋಸ್ಟಲ್ ಗಾರ್ಡ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.

 ಮೂರು ತಿಂಗಳಲ್ಲಿ 2 ಬಾರಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಮಾರ್ಚ್‍ನಲ್ಲಿ 100 ಕಿಲೋಗ್ರಾಮ್ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು.

2017ರ ಜುಲೈನಲ್ಲಿ ಪನಾಮ ಎಂಬ ಹಡಗಿನಿಂದ 3,500 ಕೋಟಿ ಬೆಲೆ ಬಾಳುವ 1,500 ಕಿಲೋಗ್ರಾಮ್ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು. ಇದು ಗುಜರಾತ್ ಕರಾವಳಿ ಪ್ರದೇಶದಲ್ಲಿ ವಶಪಡಿಸಿಕೊಂಡ ದೊಡ್ಡ ಮೊತ್ತದ ಮಾದಕ ವಸ್ತು ಎಂಬುದಾಗಿ ವರದಿಯಾಗಿದೆ.
Leave a Reply

Your email address will not be published. Required fields are marked *