ಪ್ರಿಯಕರನ ಸಂಗಕ್ಕಾಗಿ ಪತಿಯನ್ನೇ ಕೊಂದಳು

3

ಪ್ರಿಯಕರನ ಜೊತೆಗಿನ ಅಕ್ರಮ ಸಂಬಂಧವನ್ನು ಮುಂದುವರಿಸುವುಕ್ಕಾಗಿ, ಆತನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಉತ್ತರ ಪ್ರದೇಶದ ಶಾಮಲಿ ಪೊಲೀಸರು ಬಂಧಿಸಿದ್ದಾರೆ.

ಖೇಡಿ ಕೆಮ್ರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹರೀಶ್ ಅಲಿಯಾಸ್ ಸೋನು (31) ಮೃತ ವ್ಯಕ್ತಿ. ಈತನ ಪತ್ನಿ ಶಿವಾನಿ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರೀಶ್ ಮೃತ ದೇಹವು ಮೇ 15 ರಂದು ಕಾಲುವೆಯಲ್ಲಿ ಪತ್ತೆಯಾಗಿತ್ತು. ಮೃತ ಸೋನು ತಾಯಿ ನೀಡಿದ ದೂರಿನ ಮೇಲೆ ಪೊಲೀಸರು ತನಿಖೆ ಶುರುಮಾಡಿದ್ದರು. ಹರೀಶ್ ತಾಯಿ ನೀಡಿದ್ದ ದೂರಿನಲ್ಲಿ ಆತನ ಸಂಬಂಧಿಗಳಾದ ಶಿವಂ ಮತ್ತು ಮೋಹಿತ್ ಹೆಸರನ್ನು ಉಲ್ಲೇಖಿಸಿದ್ದರು. ಜೊತೆ ಹರೀಶ್ ಪತ್ನಿ ಶಿವಾನಿಯ ಹೆಸರು ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಶಿವಾನಿ ಶಿಬ್ಬು ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪತ್ನಿಯ ಅಕ್ರಮ ಸಂಬಂಧದ ವಿಚಾರ ಪತಿ ಹರೀಶ್‍ಗೆ ಗೊತ್ತಾಗಿದೆ. ಆಗ ಹರೀಶ್ ಮತ್ತು ಶಿಬ್ಬು ನಡುವೆ ಜಗಳ ಕೂಡ ನಡೆದಿದ್ದು, ಅವರಿಬ್ಬರ ಸಂಬಂಧಕ್ಕೆ ಹರೀಶ್ ವಿರೋಧ ವ್ಯಕ್ತಪಡಿಸಿದ್ದಾನೆ. ಇದರಿಂದ ತಮ್ಮಿಬ್ಬರ ಪ್ರೀತಿಗೆ ಪತಿ ಅಡ್ಡ ಬರುತ್ತಾನೆಂದು ಪ್ರಿಯಕರ ಜೊತೆ ಸೇರಿಕೊಂಡು ಕೊಲೆ ಮಾಡಲು ಪ್ಲಾನ್ ಮಾಡಿದ್ದಳು  ಎಂದು ಪೊಲೀಸರು ಹೇಳುತ್ತಾರೆ.




Leave a Reply

Your email address will not be published. Required fields are marked *