ಮಗಳ ಮೇಲೆಯೇ ಅತ್ಯಾಚಾರ

15

ಸ್ವಂತ ಮಗಳ ಮೇಲೆಯೇ ಅತ್ಯಾಚಾರ ನಡೆಸಿ ನಂತರ ಆಕೆಯ ಬಾಯಿ ಮುಚ್ಚಿಸಲು ತಂದೆಯೇ ಹಣ ನೀಡುತ್ತಿದ್ದ  ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಅಪ್ರಾಪ್ತ ಮಗಳ ಮೇಲೆಯೇ ಹೆತ್ತ ತಂದೆಯೇ ನಾಲ್ಕು ವರ್ಷಗಳಿಂದ ನಿರಂತರ ಅತ್ಯಾಚಾರವೆಸಗಿದ್ದಾನೆ. ಪರಿಣಾಮ  ಬಾಲಕಿ ಗರ್ಭಿಣಿಯಾಗಿದ್ದು, ಆಕೆಗೆ ಗರ್ಭಪಾತವನ್ನೂ ಕೂಡ ಪಾಪಿ ತಂದೆ ಮಾಡಿಸಿದ್ದಾನೆ. ತಾಯಿ ವಿದೇಶಕ್ಕೆ ತೆರಳಿದ ಬಳಿಕ ಬಾಲಕಿ 7 ವರ್ಷದವಳಾಗಿದ್ದಾಗ ತಂದೆ ಜೊತೆ ವಾಸಿಸಲು ಶುರು ಮಾಡಿದ್ದಾಳೆ. ಆದರೆ ಮಗಳಿಗೆ 11 ವರ್ಷವಾಗುತ್ತಿದ್ದಂತೆ ಕಾಮುಕ ತಂದೆ ಮಗಳ ಮೇಲೆಯೇ ವಿಕೃತಿ ಮೆರೆದಿದ್ದಾನೆ. ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದನು.

ಮಗಳಿಗೆ ಪೋರ್ನ್ ಚಿತ್ರಗಳನ್ನು ತೋರಿಸಿ ಅತ್ಯಾಚಾರ ನಡೆಸುತ್ತಿದ್ದನು. ಅಲ್ಲದೆ ಅತ್ಯಾಚಾರದ ನಂತರ ಮಗಳಿಗೆ ಹಣ ನೀಡಿ ಬಾಯಿ ಮುಚ್ಚಿಸುತ್ತಿದ್ದನು. ಆದರೆ ಬಾಲಕಿಗೆ 15 ವರ್ಷ ತುಂಬಿ ತಿಳುವಳಿಕೆ ಬಂದ ನಂತರ ತಂದೆ ನೀಡುತ್ತಿದ್ದ ಲೈಂಗಿಕ ಕಿರುಕುಳದ ಅರಿವಾಗಿದೆ. ಆಗ ಆಕೆ ತನ್ನ ಸ್ನೇಹಿತರಿಗೆ ತಂದೆ ಕ್ರೌರ್ಯವನ್ನು ಹೇಳಿದ್ದಾಳೆ. ಈ ಬಗ್ಗೆ ಪೊಲೀಸರಿಗೂ ಕೂಡ ಬಾಲಕಿ ದೂರು ನೀಡಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.




Leave a Reply

Your email address will not be published. Required fields are marked *