02-11-2020- ಇಂದಿನ ರಾಶಿ ಫಲ.

494

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ.
ವಾರ: ಸೋಮವಾರ, ತಿಥಿ: ದ್ವಿತೀಯ, ನಕ್ಷತ್ರ: ಕೃತಿಕಾ,
ರಾಹುಕಾಲ: 7.45 ರಿಂದ 9.12
ಗುಳಿಕಕಾಲ: 1.35 ರಿಂದ 3.02
ಯಮಗಂಡಕಾಲ: 10.40 ರಿಂದ 12.07

ಮೇಷರಾಶಿ
ಚೆನ್ನಾಗಿದೆ, ಸೂರ್ಯ ವಿಶೇಷವಾಗಿ ಕೇಂದ್ರದಲ್ಲಿರುವುದರಿಂದ ಸ್ವಂತ ನಿರ್ಧಾರಗಳಿಗೆ ಸ್ವಲ್ಪ ಎಳೆದಾಟ ವಾದರೂ ತಕ್ಕಮಟ್ಟಿಗೆ ಪರಿಶ್ರಮಕ್ಕೆ ತಕ್ಕಂತೆ ಫಲ ದೊರೆಯುವ ದಿನ.

ವೃಷಭರಾಶಿ
ಸ್ವಲ್ಪ ಎಚ್ಚರಿಕೆ ಭೂಮಿ ಮನೆ ಆಳು ಕಾಳು ತೆಗೆದುಕೊಳ್ಳುವುದು ಕೊಡುವುದು ಸ್ವಲ್ಪ ಒತ್ತಡದ ಛಾಯೆ ಇಲ್ಲೊ ಒಂದು ಕಲಬೆರಕೆ ಕೂಡ ಉಂಟು. ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ

ಮಿಥುನರಾಶಿ

ಬಾಕಿ ವಸೂಲಿ, ಚಂಚಲ ಮನಸ್ಸು, ಕೆಲಸ ಕಾರ್ಯಗಳಲ್ಲಿ ಜಯ, ಸಮಾಜದಲ್ಲಿ ಉತ್ತಮ ಹೆಸರು.
ಚೆನ್ನಾಗಿದೆ ತಂದೆ ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ಇಂದು ವೈರಾಗ್ಯದ ಭಾವ ಶಿವನ ನಾಮಸ್ಮರಣೆ ಮಾಡಿಕೊಳ್ಳಿ.

ಕರ್ಕಾಟಕರಾಶಿ
ಚೆನ್ನಾಗಿದೆ ಮುನ್ನುಗ್ಗಿ ಅಂದುಕೊಳ್ಳುವ ಕೆಲಸ ಕಾರ್ಯಗಳಲ್ಲೆಲ್ಲಾ ಪ್ರಗತಿ.ಹಳೆಯ ಗೆಳೆಯರ ಭೇಟಿ, ಮನೆಯಲ್ಲಿ ಶುಭಕಾರ್ಯ, ಮನಃಶಾಂತಿ, ಪ್ರತಿಷ್ಠಿತ ಜನರ ಪರಿಚಯ.

ಸಿಂಹರಾಶಿ
ಚೆನ್ನಾಗಿದೆ ಅಂದ್ರೆ ಸೂರ್ಯ ನೀಚನಾಗಿರುವುದರಿಂದ ಮುಂದೆ ಹೋಗಲು ಹಿಂಜರಿಯುತ್ತೀರ. ನಿಮ್ಮಿಂದ ಇನ್ನೊಬ್ಬರಿಗೆ ಉಪಯೋಗ.

ಕನ್ಯಾರಾಶಿ
ಸೂರ್ಯ ಭಾವದಲ್ಲಿ ಚಂದ್ರನಿದ್ದು, ನಿಮಗೆ ಮಿತ್ರ ಕಾರಕ. ಮಿತ್ರರಿಂದ, ಆತ್ಮೀಯರಿಂದ, ಸ್ನೇಹಿತರಿಂದ, ನಿಮಗೆ ಸಹಕಾರ.

ತುಲಾರಾಶಿ
ತುಂಬ ಪರಿಶ್ರಮದ ದಿನ ಎಂದೆನಿಸುತ್ತದೆ ಅಂಥದ್ದೇನೂ ಇಲ್ಲ ಅದು ನಿಮ್ಮ ಬರೀ ಯೋಚನೆ ಅಷ್ಟೆ.

ವೃಶ್ಚಿಕರಾಶಿ

ಪರಿಶ್ರಮದಿಂದ ಅಧಿಕಾರವನ್ನು ಪಡೆಯುವಂತಹ ದಿನ.ಕೋರ್ಟ್ ವ್ಯಾಜ್ಯಗಳಿಂದ ತೊಂದರೆ, ವಾಹನ ರಿಪೇರಿ, ಋಣಭಾದೆ, ಕುಟುಂಬದಲ್ಲಿ ಅಹಿತಕರ ವಾತಾವರಣ.

ಧನಸ್ಸುರಾಶಿ
ಚೆನ್ನಾಗಿದೆ, ತೊಂದರೆಯೇನು ಇಲ್ಲ, ಎಂತಹ ಶತ್ರುವನ್ನಾದರೂ ಕೂಡ ಮಣಿಸುವಂತಹ ದಿನ, ಲಾಭಕರವಾದ ದಿನ.

ಮಕರರಾಶಿ
ಉದ್ಯೋಗದಲ್ಲಿ ಎಳೆದಾಟ, ಸ್ವಂತ ವ್ಯವಹಾರದಲ್ಲಿ ಪರಿಶ್ರಮ.ಹಣ ಬಂದವರು ಉಳಿಯುವುದಿಲ್ಲ, ನಂಬಿಕೆದ್ರೋಹ, ಶಾಂತಿ, ವ್ಯಾಪಾರದಲ್ಲಿ ಮಂದಗತಿ.

ಕುಂಭರಾಶಿ
ಸ್ನೇಹಿತರು, ಬಂಧುಗಳು, ಆತ್ಮೀಯರು, ಗೊತ್ತಿರುವವರ ಮುಖೇನ ಮಾಡುತ್ತಿರುವ ವ್ಯವಹಾರಗಳಲ್ಲಿ ಯಶಸ್ಸು. ಸೂರ್ಯ ನೀಚನಾದ ಕಷ್ಟ ನಿಮಗೆ ಬಲ ಜಾಸ್ತಿ.

ಮೀನರಾಶಿ
ಸರ್ಪ್ರೈಸ್ ಗುಡ್ ನ್ಯೂಸ್ ಒಂದನ್ನು ಕೇಳುವಂತಹ ಅದ್ಭುತವಾದ ದಿನ. ಶತ್ರುಗಳ ಶತ್ರು ಮಿತ್ರ ಎಂಬ ಬದಲಾವಣೆಯನ್ನು ಕೇಳುವಂತಹ ದಿನ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ