04-04-2021 ಇಂದನಿನ ರಾಶಿಫಲ.

425

ಪಂಚಾಂಗ .
ಸಂವತ್ಸರ : ಶಾರ್ವರಿ
ಋತು : ಶಿಶಿರ
ಮಾಸ : ಫಾಲ್ಗುಣ
ಪಕ್ಷ : ಕೃಷ್ಣ
ತಿಥಿ : ಅಷ್ಟಮಿ
ನಕ್ಷತ್ರ : ಪೂರ್ವಾಷಾಢ
ವಾರ : ರವಿವಾರ
ರಾಹುಕಾಲ:05:11-06:43pm
ಆಧಾರ : ಬಗ್ಗೋಣ ಪಂಚಾಂಗ

ಹವಾಮಾನ.
ಉಷ್ಣತೆ,ಶುಷ್ಕ ವಾತಾವರಣ, ರಾತ್ರಿ ತಂಪಿನ ವಾತಾವರಣ.

ಲಾಭ-ನಷ್ಟ.
ಹೋಟಲ್, ವಸತಿ ಗೃಹಗಳಿಗೆ ಅಲ್ಪ ಲಾಭ ,ವ್ಯಾಪಾರಿಗಳಿಗೆ ಲಾಭದ ಪ್ರಮಾಣದಲ್ಲಿ ಇಳಿಕೆ,ಕೃಷಿಕರಿಗೆ ಕರ್ಚು ಅಧಿಕ, ಮಾವು ಬೆಳೆಗಾರರಿಗೆ ಲಾಭ,ಉದ್ಯೋಗಿಗಳಿಗೆ ಅಧಿಕ ಕರ್ಚು.ಮೀನು ವ್ಯಾಪಾರಿಗಳಿಗೆ ಲಾಭ.

ಮೇಷ: ಅನಾವಶ್ಯಕ ಕರ್ಚು ಮಹಿಳೆಯರಲ್ಲಿ ತಾಳ್ಮೆ ಅತ್ಯಗತ್ಯ,ಕುಟುಂಬದಲ್ಲಿ ಗಲಾಟೆ, ಮಾನಸಿಕ ಗೊಂದಲ, ನೌಕರರಿಗೆ ಅಧಿಕ ಒತ್ತಡ, ಆತ್ಮೀಯರ ಭೇಟಿ,ಆರೋಗ್ಯ ಸುಧಾರಣೆ.

ವೃಷಭ: ಈ ದಿನ ಶುಭ ಫಲ, ವ್ಯಾಪಾರದಲ್ಲಿ ಧನಲಾಭ, ಆರೋಗ್ಯ ಸುಧಾರಣೆ, ಶತ್ರುಗಳ ಧ್ವಂಸ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಿರಿ,ಆಯಾಸ, ಅಧಿಕ ಶ್ರಮ.

ಮಿಥುನ: ಇಂದು ಮಧ್ಯಮ ಫಲ ನಿಮ್ಮದಾಗಲಿದೆ, ಆದಾಯಕ್ಕಿಂತ ಖರ್ಚು ಹೆಚ್ಚು, ನೂತನ ಉದ್ಯೋಗ ದಲ್ಲಿ ತೃಪ್ತಿ ,ಕೈಹಾಕಿದ ಕೆಲಸದಲ್ಲಿ ಪ್ರಗತಿ, ಆರೋಗ್ಯ ಸುಧಾರಣೆ.

ಕಟಕ: ದ್ರವ್ಯಲಾಭ, ವಿದ್ಯಾಭ್ಯಾಸದಲ್ಲಿ ಅಡಚಣೆ, ಅನ್ಯ ಜನರಲ್ಲಿ ವೈಮನಸ್ಸು, ಅಗ್ನಿಯಿಂದ ಭೀತಿ, ಕೈ ಕಾಲಿಗೆ ಪೆಟ್ಟಾಗುವ ಸಾಧ್ಯತೆ, ವ್ಯಾಪಾರಿಗಳಿಗೆ ಲಾಭ ಚೇತರಿಕೆ.

ಸಿಂಹ: ಮಾತಿನಿಂದ ಕಲಹ, ಅಕಾಲ ಭೋಜನ, ಮಾನಹಾನಿ, ಸಾಲ ಮಾಡುವ ಸಾಧ್ಯತೆ, ಇಲ್ಲ ಸಲ್ಲದ ಅಪವಾದ, ಕಾರ್ಯ ಬದಲಾವಣೆ ಮನಸ್ಸು, ಆರೋಗ್ಯ ಮಧ್ಯಮ.

ಕನ್ಯಾ: ಆರೋಗ್ಯ ಮಧ್ಯಮ ಶೀತ ಭಾದೆ, ಅಧಿಕ ಕರ್ಚು, ಪರಸ್ತ್ರೀ ಸಹವಾಸದಿಂದ ತೊಂದರೆ, ದಾಯಾದಿಗಳ ಕಲಹ, ವಿವಾಹಕ್ಕೆ ಅಡಚಣೆ, ಶತ್ರುಭಾದೆ, ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶ ಪ್ರಯಾಣ.

ತುಲಾ:ಹಿಡಿದವಕೆಲಸಗಳು ನಿಧಾನ ಪ್ರಗತಿ, ವ್ಯಾಸಂಗಕ್ಕೆ ತೊಂದರೆ, ಮನೆಯಲ್ಲಿ ಸಮಸ್ಯೆ, ಪ್ರಯಾಣದಲ್ಲಿ ಆಯಸ, ದ್ರವ್ಯಲಾಭ, ನೌಕರರಿಗೆ ನಾಳೆಯಿಂದ ಒತ್ತಡ ಹೆಚ್ಚಾಗಲಿದೆ.

ವೃಶ್ಚಿಕ: ಷೇರು ವ್ಯವಹಾರಗಳಲ್ಲಿ ನಷ್ಟ, ಕೆಟ್ಟ ಆಲೋಚನೆ, ದುಷ್ಟಬುದ್ಧಿ, ನಾನಾ ರೀತಿಯ ತೊಂದರೆ, ಹಿತಶತ್ರುಗಳಿಂದ ಸಮಸ್ಯೆ, ಆರೋಗ್ಯ ಮಧ್ಯಮ.

ಧನಸ್ಸು: ಸಮಾಜದಲ್ಲಿ ಗೌರವ, ದಾನ ಧರ್ಮಗಳಲ್ಲಿ ಆಸಕ್ತಿ, ಸ್ಥಿರಾಸ್ತಿ ಮಾರಾಟ, ಇಷ್ಟಾರ್ಥಗಳು ಸಿದ್ಧಿ, ಪುತ್ರರಲ್ಲಿ ಪ್ರೀತಿ-ವಾತ್ಸಲ್ಯ.

ಮಕರ: ಮಾಡಿದ ಕೆಲಸಗಳಲ್ಲಿ ಯಶಸ್ಸು, ಊರೂರು ಸುತ್ತಾಟ, ಸುಖ ಭೋಜನ ಪ್ರಾಪ್ತಿ, ಶತ್ರುಗಳು ನಾಶ, ಹೊಸ ಕೆಲಸಗಳಲ್ಲಿ ಭಾಗಿ.

ಕುಂಭ: ಈ ದಿನ ಮಿಶ್ರಚಫಲ, ಕಾರ್ಯಸಿದ್ಧಿ, ನಂಬಿಕೆ ದ್ರೋಹ, ಪ್ರತಿಭೆಗೆ ತಕ್ಕ ಫಲ, ಆಪ್ತರಿಂದ ಸಹಾಯ, ಶೀತ ಸಂಬಂಧಿತ ರೋಗ.

ಮೀನ: ಗಣ್ಯ ವ್ಯಕ್ತಿಗಳ ಭೇಟಿ, ದ್ರವ್ಯಲಾಭ, ಶರೀರದಲ್ಲಿ ತಳಮಳ, ಸಕಾಲಕ್ಕೆ ಭೋಜನ ಇರುವುದಿಲ್ಲ, ವಯುಕ್ತಿಕ ವಿಚಾರದತ್ತ ಗಮನಹರಿಸಿ, ಮಾನಸಿಕ ವ್ಯಥೆ.

ಜ್ಯೋತಿಷ್ಯ ಲೇಕನ:- ತಿರುಮಲ ಶರ್ಮ .ಜ್ಯೋತಿಷಿ.ಬೆಂಗಳೂರು.

ಗೀತಗಂಗಾ ೦೯-೧೧

ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ |
ಪರಂ ಭಾವಮಜಾನಂತೋ ಮಮ ಭೂತಮಹೇಶ್ವರಮ್ ||

ಇಡೀ ಜೀವಕೋಟಿಗೆಲ್ಲಾ ಮಹೇಶ್ವರನಾದ ನನ್ನ ಪರಮ ಭಾವವನ್ನು ತಿಳಿಯದ ಮೂಢರು ಮನುಷ್ಯ ರೂಪನ್ನು ಅರ್ಥಾತ್ ಮಾನವ ಶರೀರವನ್ನು ಧರಿಸಿರುವ ಪರಮಾತ್ಮನಾದ ನನ್ನನ್ನು ಕೀಳಾಗಿ ಕಾಣುತ್ತಾರೆ. ಅಂದರೆ ತನ್ನ ಯೋಗಮಾಯೆ‌ಯಿಂದ ಜಗತ್ತಿನ ಉದ್ಧಾರಕ್ಕಾಗಿ ಮನುಷ್ಯ‌ರೂಪದಲ್ಲಿ ನಡೆದುಕೊಳ್ಳುವ ನನ್ನನ್ನು ಸಾಧಾರಣ ಮನುಷ್ಯನೆಂದು ಭಾವಿಸುತ್ತಾರೆ ||11||

ಲೇಖನ:- ಮಾಧವ ಭಟ್ ಮತ್ತಿಘಟ್ಟ
ಪರಿವೀಕ್ಷಣೆ ಪ್ರಸರಣ: ಶ್ರೀಸ್ವರ್ಣವಲ್ಲೀ ಭಕ್ತವೃಂದ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ