4-11-2020 ಇಂದಿನ ರಾಶಿಫಲ.

291

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ.
ವಾರ: ಬುಧವಾರ, ತಿಥಿ: ಚತುರ್ಥಿ, ನಕ್ಷತ್ರ: ಮೃಗಶಿರಾ,
ರಾಹುಕಾಲ: 12.07 ರಿಂದ 1.35.
ಗುಳಿಕ ಕಾಲ: 10.40 ರಿಂದ 12.07.
ಯಮಗಂಡಕಾಲ: 7.45 ರಿಂದ 9.12.

ಮೇಷರಾಶಿ
ಚಂದ್ರ ಕುಜ ಇರುವುದರಿಂದ ಟೆಕ್ನಿಕಲ್ ಲೈನ್ ಇಂಟೀರಿಯರ್ಸ್ ಮ್ಯಾಕ್ಯಾನಿಕಲ್ ಇಂಜಿನಿಯರಿಂಗ್ ಈ ರೀತಿಯ ವ್ಯವಹಾರಗಳಲ್ಲಿ ಇರುವವರಿಗೆ ಪರಿಶ್ರಮದಿಂದ ಲಾಭವನ್ನು ನೋಡು ವಂತಹ ಅನುಕೂಲಕರವಾದ ದಿನ

ವೃಷಭರಾಶಿ
ಸ್ವಲ್ಪ ಜಾಗ್ರತೆ ಇಂದು ಯಾರೊಂದಿಗಾದರೂ ಸಣ್ಣ ಕಿರಿಕಿರಿ, ವಾಗ್ವಾದ, ಜಗಳ, ಪೆಟ್ಟು, ಇನ್ ಫೆಕ್ಷನ್ ಗಳಾಗುವ ಸಂಭವವಿದೆ. 1 ಬೊಗಸೆ ಬೆಲ್ಲ ಅವಲಕ್ಕಿಯನ್ನ ತೆಗೆದುಕೊಂಡು ಅಶ್ವತ್ಥವೃಕ್ಷದ ಕೆಳಗೆ ಚೆಲ್ಲಿಹೋಗಿ ಒಳ್ಳೆಯದಾಗುತ್ತದೆ.

ಮಿಥುನರಾಶಿ
ಪ್ರಯಾಣ ನಿಷಿದ್ಧ, ವಾದ ನಿಷಿದ್ಧ, ವಾಗ್ವಾದ ನಿಷಿದ್ಧ, ಭೂಮಿಯ ವಿಚಾರದಲ್ಲಿ ಮಾತುಕತೆ ಆಡಲು ಹೋಗಲೇಬೇಡಿ.

ಕರ್ಕಾಟಕರಾಶಿ
ಯಾವ ವಾದಕ್ಕೆ ಹೋದರು ನೀವು ಗೆದ್ದು ಬಿಡುತ್ತೀರ ಆಗೆಂದು ಬಂಡೆಗೆ ತಲೆ ಚಚ್ಚಿಕೊಳ್ಳಲು ಹೋಗಬೇಡಿ.

ಸಿಂಹರಾಶಿ
ಅಧಿಕಾರಸ್ಥ ಜಾತಕ, ಬುದ್ಧಿ, ಜ್ಞಾನ, ವಿಜ್ಞಾನ, ಸುಜ್ಞಾನ, ಮಹಾ ಜ್ಞಾನ, ಉಪಯೋಗಿಸಿ ಗೆಲುವು ಇಂದು ಕಟ್ಟಿಟ್ಟ ಬುತ್ತಿ.

ಕನ್ಯಾರಾಶಿ
ಚೆನ್ನಾಗಿದೆ ತುಂಬಾ ಲೆಕ್ಕಾಚಾರ, ಪ್ಲಾನಿಂಗ್, ತುಂಬ ಅಲರ್ಟ್ ಒಳ್ಳೆಯದಲ್ಲ. ಗಾಬರಿಪಡಿಸುವ ಬಿಡುತ್ತದೆ. ಆಗೋದೆಲ್ಲಾ ಒಳ್ಳೇದಕ್ಕೆ ಅವನಿಗೆ ಗೊತ್ತಿದೆ ಸರಿಯಾದ ದಾರಿಯಲ್ಲೇ ಕರೆದುಕೊಂಡು ಹೋಗುತ್ತಾನೆ.

ತುಲಾರಾಶಿ
ತಿಳಿದವರಿಂದ, ಹತ್ತಿರದವರಿಂದ, ಪುಟ್ಟ ಪೆಟ್ಟು ನೋವು ವ್ಯವಹಾರದಲ್ಲಂಟು ಜಾಗ್ರತೆ.ಮಾಡಿದ ಕೆಲಸಗಳಿಂದ ಪಶ್ಚಾತಾಪ ಪಡುವಿರಿ, ರಾಜಕೀಯ ವ್ಯಕ್ತಿಗಳ ಭೇಟಿ, ಸೇವಕ ವರ್ಗದವರಿಂದ ತೊಂದರೆ.

ವೃಶ್ಚಿಕ ರಾಶಿ
ಚೆನ್ನಾಗಿದೆ ವಕ್ರವಾಗಿಯಾದರೂ ನಿಮಗೊಂದು ಲಾಭವುಂಟು. ಹಾಗೆಂದು ವಕ್ರ ದಾರಿಗೆ ಹೋಗದಿರಿ.

ಧನಸ್ಸುರಾಶಿ
ಅತಿಯಾದ ಧೈರ್ಯ ಮೊಂಡು ಧೈರ್ಯವಾಗಿ ಬಿಡುತ್ತದೆ ಹಾಗೆಂದು ಮೋಸ ಮಾಡಲು ಹೋಗಬೇಡಿ. ಅದರ ಫಲವನ್ನು ಅನುಭವಿಸಬೇಕಾಗುತ್ತದೆ. ಒಂದಲ್ಲ 1ದಿನ ನಾವು ಮಾಡಿದ ಮೋಸ ಹೊರಗೆ ಬಂದೇ ಬರುತ್ತದೆ.

ಮಕರರಾಶಿ
ವಾಹನ ಭೂಮಿ ರಿಯಲ್ ಎಸ್ಟೇಟ್ ಕನ್ಸಲ್ಟೆಂಟ್ ಆರ್ಕಿಟೆಕ್ಟ್ ಡೆವಲಪ್ ಮೆಂಟ್ ಈ ವ್ಯವಹಾರಗಳಲ್ಲಿರುವ ವರೆಗೆ ಚೆನ್ನಾಗಿದೆ.

ಕುಂಭರಾಶಿ
ಮಿಲಿಟರಿ, ಪೋಲಿಸ್, ರಕ್ಷಣಾ ಇಲಾಖೆ, ಡಿಫೆನ್ಸ್, ವಿಮಾನ ಇಲಾಖೆ, ತಾಂತ್ರಿಕ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರೆ ಆಗಮ ಪೂಜಾ ಯಜ್ಞ ಯಾಗ ಮುಂತಾದ ಕೆಲಸಗಳನ್ನು ಮಾಡುತ್ತಿದ್ದರೆ ಅತ್ಯಧಿಕ ಅನುಕೂಲ.

ಮೀನರಾಶಿ
ಸಲ್ಪ ರಿವರ್ಸ್ ಗೇರ್ ನಲ್ಲಿ ಓಡುವಂತಹ ಪ್ರಭಾವವಿರುತ್ತದೆ. ಎಕ್ಸ್ ಪರ್ಟ್ ಆಗಿರುವವರನ್ನು ಕೇಳಿ ತಿಳಿದುಕೊಳ್ಳಿ. ಎಲ್ಲಾ ತಿಳಿದಿದೆ ಎಂಬ ಭಾವವನ್ನು ಬಿಟ್ಟು, ಕೇಳಿ ಮುಂದಕ್ಕೆ ಇಡಿ ಗೆಲುವು ನಿಮ್ಮದೆ.
Leave a Reply

Your email address will not be published. Required fields are marked *