ಸೋಮವಾರದ ದಿನ ಭವಿಷ್ಯ|Astrology

395


ರಾಹುಕಾಲ – 7:50 ರಿಂದ 9:22
ಗುಳಿಕಕಾಲ – 1:58 ರಿಂದ 3:30
ಯಮಗಂಡಕಾಲ -10.54 ರಿಂದ 12:26
ವಾರ:-ಸೋಮವಾರ, ನವಮಿ ತಿಥಿ,
ಉತ್ತರಾಷಾಡ ನಕ್ಷತ್ರ
ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ,
ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ.

ಹವಾಮಾನ
ಉಷ್ಟಾಂಶ ದಲ್ಲಿ ವ್ಯತ್ಯಾಸ, ಶುಷ್ಕ ವಾತಾವರಣ.

ಲಾಭ-ನಷ್ಟ.
ಉದ್ಯೋಗಿಗಳಿಗೆ ನಷ್ಟ, ಸರ್ಕಾರಿ ನೌಕರರಿಗೆ ಆರ್ಥಿಕತೆ ಚೇತರಿಕೆ, ಮೀನುಗಾರರಿಗೆ ಲಾಭ, ವ್ಯಾಪಾರಿಗಳಿಗೆ ಮಧ್ಯಮ ಲಾಭ,ವೈದ್ಯರಿಗೆ ಮಧ್ಯಮ ಲಾಭ,ಉದ್ಯಮಿಗಳಿಗೆ ನಷ್ಟ,ಗುತ್ತಿಗೆದಾರರಿಗೆ ಆರ್ಥಿಕತೆ ಚೇತರಿಕೆ, ಕೂಲಿ ಕೆಲಸದವರಿಗೆ ಚೇತರಿಕೆ,ಕೃಷಿಕರಿಗೆ ಲಾಭ-ನಷ್ಟಗಳು ಇರುವುದು.

ಮೇಷ: ಸ್ನೇಹಿತರೇ ಶತ್ರುಗಳಾಗುವರು, ಕುಟುಂಬದಲ್ಲಿ ಅಶಾಂತಿ, ದೂರ ಪ್ರಯಾಣ ಸಾಧ್ಯತೆ, ಶತ್ರು ಭಾದೆ, ಕೋರ್ಟ್ ವ್ಯಾಜ್ಯಗಳಿಂದ ತೊಂದರೆ,ಹಣದ ಕರ್ಚು ಅಧಿಕ, ಆರೋಗ್ಯ ಮಧ್ಯಮ, ಪೊಲೀಸ್ ವೃತ್ತಿಯವರಿಗೆ ಹಾಗೂ ಸರ್ಕಾರಿ ನೌಕರ ವೃತ್ತಿಯವರಿಗೆ ಅಧಿಕ ಶ್ರಮ.

ವೃಷಭ:ನಿಧಾನ ಗತಿಯ ಆರ್ಥಿಕ ಪ್ರಗತಿ, ವಾಹನ ಯೋಗ, ತೀರ್ಥಕ್ಷೇತ್ರ ದರ್ಶನ, ಕಾರ್ಯ ವಿಘಾತ, ಸ್ಥಳ ಬದಲಾವಣೆ, ಆರೋಗ್ಯ ಸುಧಾರಣೆ , ಶೀತ ಭಾದೆ, ಹೊಸ ಕೆಲಸದಲ್ಲಿ ಆಸಕ್ತಿ, ಬ್ಯಾಂಕ್ ನೌಕರರಿಗೆ ಒತ್ತಡದ ಕೆಲಸ.

ಮಿಥುನ: ಈ ದಿನ ಶುಭ ಫಲ ಇರುವುದು, ಕುಟುಂಬ ಸೌಖ್ಯ, ಕೀರ್ತಿ ಲಾಭ, ಬಂಧು-ಮಿತ್ರರ ಭೇಟಿ, ಮಂಗಳ ಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು, ಶೀತ ಭಾದೆ, ಕುಟುಂಬದಲ್ಲಿ ನೆಮ್ಮದಿ.

ಕಟಕ: ಆರ್ಥಿಕ ಪ್ರಗತಿ, ಕುಟುಂಬದಲ್ಲಿ ಬಿನ್ನಾಭಿಪ್ರಾಯ ,ಪತ್ನಿಯಿಂದ ಸಂತೋಷ,ಕಠೋರವಾಗಿ ಮಾತನಾಡುವಿರಿ, ಅನ್ಯರಿಗೆ ಉಪಕಾರ ಮಾಡುವಿರಿ, ಉದ್ಯೋಗದಲ್ಲಿ ಬಡ್ತಿ,ಆರೋಗ್ಯ ಮಧ್ಯಮ.

ಸಿಂಹ: ಮಾತಾಪಿತರ ಸೇವೆ ಯಿಂದ ತೃಪ್ತಿ, ಉದ್ಯೋಗದಲ್ಲಿ ನಾನಾ ರೀತಿಯ ಸಂಪಾದನೆ, ಮನಃ ಶಾಂತಿ, ದೇವರಲ್ಲಿ ಭಕ್ತಿ, ಗುರುಗಳ ಭೇಟಿ, ವ್ಯಾಪಾರದಲ್ಲಿ ಪ್ರಗತಿ,ರಾಜಕಾರಣಿಗಳಿಗೆ ಏಳಿಗೆ.

ಕನ್ಯಾ: ಸಕಲರೊಡನೆ ಪ್ರೀತಿಯಿಂದ ಇರುವಿರಿ, ದುಂದುವೆಚ್ಚದಿಂದ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಕೆಲಸ ಕಾರ್ಯಗಳಲ್ಲಿ ಪರಿಶ್ರಮ ,ಕಾರ್ಯಗಳು ನಿಧಾನ ಪ್ರಗತಿ, ಕಫ ತಲೆ ನೋವು ಅಲ್ಪ ಶೀತಬಾದೆ, ಕುಟುಂಬ ಸೌಖ್ಯ.

ತುಲಾ: ಉದ್ಯೋಗದಲ್ಲಿ ಬಡ್ತಿ, ಮಾತೃವಿನಿಂದ ಧನಸಹಾಯ, ವಿವಾಹ ಯೋಗ, ಇಷ್ಟ ವಸ್ತುಗಳ ಖರೀದಿ, ಬಾಕಿ ವಸೂಲಿ.

ವೃಶ್ಚಿಕ: ಪರರ ಧನ ಪ್ರಾಪ್ತಿ, ಮನಸ್ಸಿನಲ್ಲಿ ಭಯ ಭೀತಿ, ದೈವಿಕ ಚಿಂತನೆ, ವಾಹನ ಅಪಘಾತ, ಕೈ ಕಾಲಿಗೆ ಏಟು.

ಧನಸ್ಸು: ಸಮಾಜದಲ್ಲಿ ಗೌರವ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯರ್ಥ ಧನಹಾನಿ, ಇಲ್ಲಸಲ್ಲದ ತಕರಾರು.

ಮಕರ: ಕುಟುಂಬದಲ್ಲಿ ಕಲಹ, ದುಷ್ಟಬುದ್ಧಿ, ಸ್ಥಿರಾಸ್ತಿ ಮಾರಾಟದಿಂದ ಲಾಭ, ದಾನ ಧರ್ಮದಲ್ಲಿ ಆಸಕ್ತಿ, ಭೂಲಾಭ.

ಕುಂಭ: ಸ್ಥಗಿತ ಕಾರ್ಯಗಳು ಮುಂದುವರೆಯುತ್ತವೆ, ಆಪ್ತರಿಂದ ಸಹಾಯ, ಮಹಿಳೆಯರಿಗೆ ಶುಭ, ಮಾತಿನ ಚಕಮಕಿ.

ಮೀನ: ಈ ದಿನ ಮಿಶ್ರ ಫಲ, ಯತ್ನ ಕಾರ್ಯ ಅನುಕೂಲ, ಋಣಭಾದೆ, ಅಧಿಕ ಕೋಪ, ರೋಗಭಾದೆ, ಇತರರ ಮಾತಿಗೆ ಮರುಳಾಗಿ ತೊಂದರೆ, ಶೀತ,ಕಫ ಬಾದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ