05-06-2019- ಇಂದಿನ ದಿನ ಭವಿಷ್ಯ

224

ಮೇಷ
ಕೈಗೆತ್ತಿಕೊಂಡ ಕೆಲಸಗಳು ಆರಂಭದಲ್ಲಿ
ವಿಫಲವಾದರೂ ಸಂಜೆ ವೇಳೆಗೆ ಮುಕ್ತಾಯ
ವಾಗಲಿವೆ. ಅಪ್ಪ, ಆರೋಗ್ಯ ಉತ್ತಮ, ಹಣಕಾಸಿನ ಅಡೆತಡೆಗಳು ದೂರವಾಗಲಿದೆ.

ವೃಷಭ
ಈ ದಿನ ಮಿಶ್ರ ಫಲ ಹೊಂದುವಿರಿ,
ಸ್ನೇಹಿತರೊಂದಿಗೆ ದೂರದ ಪ್ರವಾಸ
ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.ಕೋಪ ದಿಂದ ಕಲಹ, ಆರೋಗ್ಯ ಮಧ್ಯಮ ,

ಮಿಥುನ
ನಿಮ್ಮ ಆರೋಗ್ಯದಲ್ಲಿ ಸುಧಾರಣೆ , ಕುಟುಂಬ ಸೌಖ್ಯ
ನಿಮ್ಮ ಬಹು ಕಾಲದ ಕುತೂಹಲ ಇಂದು
ತಣಿಯಲಿದೆ. ಮನಸ್ಸಿಗೆ ಬಂದ ಹಾಗೆ ಖರ್ಚು
ಮಾಡುವುದು ಬೇಡ. ನಿರೀಕ್ಷೆ ಹುಸಿಯಾಗಲಿದೆ

ಕಟಕ
ಈ ದಿನ ಶುಭ ಸಿನವಾಗಿದೆ, ಆಪ್ತ ಸ್ನೇಹಿತೆಯ ಭೇಟಿಯಾಗಲಿದ್ದೀರಿ.
ಕುಟುಂಬ ಸದಸ್ಯರೊಂದಿಗೆ ಇಡೀ ದಿನ
ಕಳೆಯಲಿದ್ದೀರಿ. ಮಕ್ಕಳ ಆರೋಗ್ಯ ವೃದ್ಧಿ, ಹಣಕಾಸು ವ್ಯವಹಾರದಲ್ಲಿ ವೃದ್ದಿ .

ಸಿಂಹ
ಪ್ರತಿ ಬಾರಿ ಸಮಸ್ಯೆಗಳನ್ನು ಎದುರಿಸುತಿದ್ದೀರ , ಹಲವರ ವಿಶ್ವಾಸ ನಂಬಿಕೆ ಕಳೆದುಕೊಳ್ಳುವಿರಿ,ಕೆಲಸದ ಒತ್ತಡದಿಂದ ಹೊರಗೆ ಬರುವುದಕ್ಕೆ ಇಂದು ಹೆಣಗಾಡಲಿದ್ದೀರಿ. ಮಾತಿಗಿಂತ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿ. ಆರ್ಥಿಕ ಮಧ್ಯಮ ಪ್ರಗತಿ, ಆರೋಗ್ಯ ಉತ್ತಮ ‌.

ಕನ್ಯಾ
ಕೆಲಸ ಕಾರ್ಯಗಳಲ್ಲಿ ಅಸಡ್ಡೆ , ದೈಹಿಕ ಆಲಸ್ಯ,ಕೆಲಸ ಕಾರ್ಯಗಳು ನಿಧಾನ ಪ್ರಗತಿ, ನಿಮ್ಮನ್ನು ಗೌರವದಿಂದ ಕಾಣುವವರ ಸಂಖ್ಯೆ ಹೆಚ್ಚಾಗಲಿದೆ. ಬಯಸಿದ ಭಾಗ್ಯ ಇಂದು ನಿಮ್ಮ ಪಾಲಿಗೆ ಇದೆ. ಆದಾಯ ಹೆಚ್ಚಾಗಲಿದೆ.

ತುಲಾ
ಕುಟುಂಬದಲ್ಲಿ ಆಗಾಗ ತೊಂದರೆ , ಮಾನಸಿಕ ವೇಧನೆ ನಿಮ್ಮ ಆಪ್ತ ವಲಯದಲ್ಲಿ ಇರುವ ವ್ಯಕ್ತಿಗಳ
ಬಗ್ಗೆ ಎಚ್ಚರಿಕೆಯಿಂದ ಇರಿ. ಧರ್ಮ ಕಾರ್ಯಗಳಲ್ಲಿ ಮನಸಾರೆ ತೊಡಗಿಕೊಳ್ಳುವಿರಿ, ಆರೋಗ್ಯ ಉತ್ತಮ.

ವೃಶ್ಚಿಕ
ಕೊಟ್ಟ ಸಾಲಗಳನ್ನು ವಾಪಸ್ ಪಡೆಯಲು
ಸಾಕಷ್ಟು ಸರ್ಕಸ್ ಮಾಡಬೇಕಾದೀತು. ನಿಮ್ಮ
ಮಾತಿಗೆ ಇಂದು ಹೆಚ್ಚು ಬೆಲೆ ಬರಲಿದೆ, ಆರ್ಥಿಕ ಪ್ರಗತಿ, ಕುಟುಂಬ ಸೌಖ್ಯ , ದೇಹಾಲಸ್ಯ ಕಾಡುವುದು.

ಧನುಸ್ಸು
ಕುಟುಂಬಸ್ಥರ ಆರೋಗ್ಯದಲ್ಲಿ ಸುಧಾರಣೆ
ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ
ಹೆಚ್ಚಿನ ನಿಗಾ ವಹಿಸಲಿದ್ದೀರಿ. ಋಣ ತೀರಲಿದೆ.

ಮಕರ
ನಿಮ್ಮ ಕಷ್ಟಗಳು ಮತ್ತೊಬ್ಬರ ಮುಂದೆ
ಮಂಡಿಯೂರುವಂತೆ ಮಾಡುತ್ತವೆ. ನಿಮ್ಮ
ಸಹಾಯಕ್ಕೆ ಸಾಕಷ್ಟು ಸ್ನೇಹಿತರು ನಿಲ್ಲಲಿದ್ದಾರೆ.

ಕುಂಭ
ಮಕ್ಕಳ ಭವಿಷ್ಯಕ್ಕಾಗಿ ದೀರ್ಘಾವಧಿ
ಉಳಿತಾಯಕ್ಕೆ ಮುಂದಾಗಲಿದ್ದೀರಿ. ನಿಮ್ಮ
ಗೆಳೆಯರ ಸಮಸ್ಯೆಗೆ ಇಂದು ನೆರವಾಗಲಿದ್ದೀರಿ.

ಮೀನ
ಯಾರದೋ ಲಾಭಕ್ಕೆ ನೀವು ಬೆವರು
ಹರಿಸಬೇಕಾದೀತು. ಸಮಯಕ್ಕೆ ಸರಿಯಾಗಿ
ಕೆಲಸ ಕಾರ್ಯ ಮುಗಿಸಿಕೊಳ್ಳಿ. ಶುಭಫಲ.
Leave a Reply

Your email address will not be published. Required fields are marked *

error: Content is protected !!