BREAKING NEWS
Search

05-11-2020 ರ ದಿನ ಭವಿಷ್ಯ

438

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ನಿಜ ಆಶ್ವಯುಜ ಮಾಸ, ಕೃಷ್ಣಪಕ್ಷ,
ವಾರ: ಗುರುವಾರ, ತಿಥಿ: ಪಂಚಮಿ, ನಕ್ಷತ್ರ: ಆರಿದ್ರ
ರಾಹುಕಾಲ: 1: 35 ರಿಂದ 03:02
ಗುಳಿಕಕಾಲ: 9 :12 ರಿಂದ 10:40
ಯಮಗಂಡಕಾಲ: 6:17 ರಿಂದ 7:45

ಮೇಷರಾಶಿ
ಚಂದ್ರ ರಾಹು ನಕ್ಷತ್ರದಲ್ಲಿದ್ದು ರಾಹು ಕುಜನ ಸಾರದಲ್ಲಿ ಇರುವುದರಿಂದ ಗಡಿಬಿಡಿ ಮಾಡಿಕೊಳ್ಳುತ್ತೀರಾ ಸ್ವಲ್ಪ ನಿಧಾನವಾಗಿ ಓಡಾಡಿ. ಸಣ್ಣ ಪುಟ್ಟ ಗಾಯ ವಾದ ವಿವಾದ ಗಳಿರುತ್ತವೆ. ಸ್ವಯಂಕೃತ ಅಪರಾಧಗಳು, ಸ್ವಂತ ವ್ಯವಹಾರದಲ್ಲಿ ಮೋಸಗಳು, ಆರ್ಥಿಕ ನಷ್ಟ, ಅಧಿಕ ಉಷ್ಣ, ಉಸಿರಾಟ ಸಮಸ್ಯೆ, ದಾಯಾದಿ ಕಲಹಗಳು, ಮಾತಿನಿಂದ ಸಮಸ್ಯೆಗಳು

ವೃಷಭರಾಶಿ
ಸಾಮಾನ್ಯವಾಗಿ ಪರಿಶ್ರಮ ದಿಂದ ಲಾಭ ದೊರೆಯುತ್ತದೆ ಮತ್ತೆ ಕೆಲವೊಮ್ಮೆ ಏನೇ ಪರಿಶ್ರಮ ವಿಲ್ಲದಿದ್ದರೂ ಕೂಡ ಪ್ರತಿಫಲ ದೊರೆಯುತ್ತದೆ ಅಂತಹ ದಿನ ಇಂದು. ಆದ್ದರಿಂದ ತುಂಬಾ ಫಾಸ್ಟ್ ಆಗಿ ಹೋಗಬೇಡಿ ಪ್ರತಿಫಲ ದೊರೆಯುತ್ತದೆ ಎಂದು.

ಮಿಥುನರಾಶಿ
ಯೋಗ್ಯತೆಗೆ ತಕ್ಕಂತೆ ಕೆಲಸ ಕೆಲಸಕ್ಕೆ ತಕ್ಕಂತೆ ಪರಿಶ್ರಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ, ರಕ್ತದೋಷ, ಅಧಿಕ ಉಷ್ಣ, ಸಾಲಗಾರರಿಂದ ಸಂಕಷ್ಟ, ಹಣಕಾಸಿನ ದುಸ್ಥಿತಿ, ಒತ್ತಡಗಳಿಂದ ನಿದ್ರಾ ಭಂಗ

ಕರ್ಕಾಟಕರಾಶಿ
ಯೋಗ್ಯತೆ ಇದೆ ಯೋಗ್ಯತೆಗೆ ತಕ್ಕಂತಹ ಪ್ರತಿಫಲ ವಿಲ್ಲಾ ಎಂಬ ಭಾವ ಇರುತ್ತದೆ ಆದ್ದರಿಂದ ಶಿವನಿಗೆ ಬಿಲ್ವಪತ್ರೆ ಅರ್ಚನೆ ಮಾಡಿಸಿ. ಬಿಲ್ವಪತ್ರೆಯಿಂದ ಹನ್ನೊಂದು ದಿನಗಳ ಕಾಲ ಬಾಯಿಗೆ ಹಾಕಿಕೊಳ್ಳಿ.

ಸಿಂಹರಾಶಿ
ಅನಗತ್ಯ ವಾದ ವಿವಾದಗಳಿಗೆ ಸಿಲುಕಿ ಹಾಕಿಕೊಳ್ಳುವಂತಹ ಸಂಭವವಿದೆ ಜಾಗ್ರತೆ. ಇಂದು ನೀವು ಸೋತು ಗೆಲ್ಲುವಿರಿ.

ಕನ್ಯಾರಾಶಿ
ಗುರು, ಕುಜ, ಚಂದ್ರ, ಶುಕ್ರ ಕೇಂದ್ರದಲ್ಲಿರುವುದರಿಂದ ದಾಂಪತ್ಯದಲ್ಲಿ ಹುಳಿ ಸಿಹಿ ಕಹಿ ಭೂಮಿ ಹಣ್ಣು ಎಲ್ಲದರ ಪ್ರಭಾವ ನಡೆಯುತ್ತದೆ. ಯೋಚಿಸಬೇಡಿ ಆದರೆ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ತುಲಾರಾಶಿ
ಚೆನ್ನಾಗಿದೆ ಭಾಗ್ಯಸ್ಥಾನದಲ್ಲಿ ದಶಮಾಧಿಪತಿಯಾದ ಚಂದ್ರನಿರುವುದು ಉತ್ತಮವೇ. ಭಾಗ್ಯವೃದ್ಧಿ ವೃತ್ತಿಯ ಪರವಾಗಿ ಹೆಸರು ಕೀರ್ತಿಯನ್ನು ಪಡೆಯುತ್ತೀರಿ.

ವೃಶ್ಚಿಕರಾಶಿ
ದೂರದಿಂದ ನಿಮಗೊಂದು ಶುಭ ಸುದ್ದಿ, ಎಕ್ಸ್ ಪೋರ್ಟ್, ಇಂಪೋರ್ಟ್, ಚರ್ಮ ,ಮಾಂಸ ,ಮೀನು ಆರ್ಟಿಕಲ್ಚರ್, ಕಲ್ಲು ಗಣಿಗಾರಿಕೆ , ಮೈನಿಂಗ್ ಈ ರೀತಿಯ ಕೆಲಸ ಕಾರ್ಯಗಳಲ್ಲಿ ದ್ದರೆ ಪರಿಶ್ರಮದಿಂದ ಲಾಭ ದೊರೆಯುತ್ತದೆ.

ಧನಸ್ಸುರಾಶಿ
ಕೊಡುವುದು ತೆಗೆದುಕೊಳ್ಳುವ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ನಿಮಗೆ ಯಾರಾದರೂ ಟೋಪಿ ಹಾಕುತ್ತಾರೆ ಇಲ್ಲವೇ ನೀವೇ ಬೇರೆಯವರಿಗೆ ಹಾಕುತ್ತೀರ ಎಚ್ಚರಿಕೆ, ದುಡುಕಬೇಡಿ.

ಮಕರರಾಶಿ
ಆರೋಗ್ಯದ ಕಡೆ ಗಮನಕೊಡಿ ಗೂರು ನೀಚನಾಗಿ ನಿಮ್ಮ ಮನೆಗೆ ಬರುವುದರಿಂದ ಅಡ್ಡ ಸಂಪಾದನೆ ಕಡೆ ಗಮನ ಹರಿಸಬೇಡಿ ಎಚ್ಚರಿಕೆಯಿಂದ ಇರಿ.

ಕುಂಭರಾಶಿ
ಯೋಗ್ಯತೆಗೆ ತಕ್ಕಂತ ಹೆಸರು, ಹೆಸರಿಗೆ ತಕ್ಕಂಥ ಗೌರವ ದೊರೆಯುತ್ತದೆ. ನೀವು ಹೆಸರು ಅಧಿಕಾರ ಕೀರ್ತಿ ದುಡ್ಡಿನ ಹಿಂದೆ ಹೋಗಬಾರದು. ನಿಮ್ಮ ಪಾಡಿಗೆ ನೀವು ನಿಮ್ಮ ಕರ್ತವ್ಯವನ್ನು ಮಾಡಿ ಅದೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಮೀನರಾಶಿ
ತಾಯಿಯ ಆರೋಗ್ಯದ ಕಡೆ ಗಮನ ಕೊಡಿ. ತಾಯಿಯ ಜೊತೆ ವಾದ ವಿವಾದಕ್ಕಿಳಿಯಬೇಡಿ. ಸಣ್ಣಪುಟ್ಟ ಪೆಟ್ಟಾಗುವ ಸಂಭವವಿದೆ, ಸ್ಥಿರಾಸ್ತಿ ವಾಹನದಿಂದ ಲಾಭ, ಧೈರ್ಯದಿಂದ ಮುನ್ನುಗ್ಗುವಿರಿ, ಆರ್ಥಿಕ ಅನುಕೂಲ, ಕುಟುಂಬದ ಏರುಪೇರುಗಳಿಂದ ಒತ್ತಡ, ನೆರೆಹೊರೆಯವರಿಂದ ನೀಚ ಕಾರ್ಯಗಳು
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ