ಇಂದಿನ ರಾಶಿ ಫಲ

453

ಮೇಷ ರಾಶಿ

ನಿಮ್ಮ ಕೆಲವು ಪ್ರಯತ್ನಗಳು ಇಂದು ಫಲಿತಾಂಶ ಕೊಡದೆ ವ್ಯರ್ಥವಾಗಬಹುದು. ಹಣಕಾಸಿನಲ್ಲಿ ಅಥವಾ ಆರ್ಥಿಕ ವಿಚಾರವಾಗಿ ಹಿನ್ನಡೆ ಕಾಣಬಹುದಾಗಿದೆ. ಕುಟುಂಬದಲ್ಲಿನ ಆರೋಗ್ಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ.

ನಿಮ್ಮಲ್ಲಿನ ಸ್ಫುಟವಾದ ಮಾತುಗಳು ಉದ್ಯೋಗದಲ್ಲಿ ಅಧಿಕಾರಿ ವರ್ಗದವರಿಂದ ಪ್ರಶಂಸೆ ಪಡೆಯುತ್ತೀರಿ, ಹಾಗೂ ಉತ್ತಮ ಸ್ಥಾನದಲ್ಲಿ ಮುಂದುವರೆಯುವ ಸಾಧ್ಯತೆ. ನೀವು ನೀಡಿರುವ ವಾಗ್ದಾನ ಕಾರ್ಯರೂಪಕ್ಕೆ ತರುವುದು ಒಳ್ಳೆಯದು.

ಕೆಲವು ವಿಷಯಗಳು ವಿಷಯಾಂತರವಾಗಿ ನಿಮ್ಮ ವಿರುದ್ಧ ಕೆಟ್ಟ ಅಭಿಪ್ರಾಯವನ್ನು ಸೃಷ್ಟಿಸಬಹುದು ಎಚ್ಚರವಿರಲಿ
ಅದೃಷ್ಟ ಸಂಖ್ಯೆ 4

ವೃಷಭ ರಾಶಿ

ಹಳೆಯ ಮತ್ತು ಅಪರೂಪದ ವಸ್ತುಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕಚೇರಿ ಕೆಲಸಗಳಲ್ಲಿ ಉತ್ಸಾಹ ಹೆಚ್ಚಿರುತ್ತದೆ ಹಾಗೂ ಹಿಡಿದ ಕೆಲಸ ಜಯ ಸಾಧನೆ ಆಗಲಿದೆ. ಕೆಲವು ಗಣ್ಯವ್ಯಕ್ತಿಗಳ ಭೇಟಿ ಸಾಧ್ಯತೆ ಇದರಿಂದ ವರ್ಚಸ್ಸು ಮತ್ತು ಅವಕಾಶಗಳು ಸಿಗಲಿದೆ. ಹೊಸ ವಿಷಯ ಸಂಗ್ರಹಣೆ ಹಾಗೂ ಹೆಚ್ಚಿನ ತಾಂತ್ರಿಕತೆ ಬೆಳೆಸಿಕೊಳ್ಳುವುದು ಉತ್ತಮವಾಗಿದೆ. ಆರ್ಥಿಕ ವ್ಯವಸ್ಥೆಯಲ್ಲಿ ನಿಮ್ಮ ನಿರೀಕ್ಷೆ ಮೀರಿ ಹಣಕಾಸು ಸಂಪಾದನೆ ಆಗಲಿದೆ. ಪತ್ನಿಯ ಮನೆತನದಿಂದ ಸಿಗುವ ಸವಲತ್ತುಗಳು ಇಂದು ಸಫಲಗೊಂಡಗೊಳ್ಳುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ 9

ಮಿಥುನ ರಾಶಿ

ವಿನಾಕಾರಣ ವಾದದಲ್ಲಿ ಮುಂದುವರೆಯ ಬೇಡಿ, ಸತ್ಯ ಸಾರ್ವತ್ರಿಕವಾದುದು ಅದನ್ನು ಒಪ್ಪಿಕೊಳ್ಳುವುದು ಸೂಕ್ತ. ನಿಮ್ಮ ಕೆಲವು ಪ್ರಯತ್ನಗಳು ಇಂದು ವಿಫಲ ಆಗಬಹುದು ಆದರೆ ಇನ್ನೊಮ್ಮೆ ಪ್ರಯತ್ನಿಸಿದರೆ ಖಂಡಿತ ಗೆಲುವಿನ ನಗೆ ಮೂಡಲಿದೆ. ನಿಮ್ಮಲ್ಲಿ ಇರುವಂತಹ ದುಃಖದ ವಿಷಯಗಳು ಅಂತ್ಯವಾಗುವ ಲಕ್ಷಣಗಳು ಗೋಚರವಾಗುತ್ತದೆ. ಮಹತ್ವದ ಕೆಲಸದಲ್ಲಿ ಕೆಲವಷ್ಟು ಬದಲಾವಣೆ ಮಾಡಿಕೊಂಡು ಮುನ್ನಡೆಯಿರಿ. ವೃತ್ತಿಪರ ಕರ್ಮಿಗಳ ಸಲಹೆ ಮತ್ತು ಸಹಾಯ ಪಡೆಯಲು ಸಿದ್ದರಾಗಿ. ಆರ್ಥಿಕವಾಗಿ ಬಳಲುತ್ತಿರುವ ನಿಮಗೆ ಇಂದು ಸಂಜೆ ಹೊತ್ತಿಗೆ ಯಾವುದೋ ಒಂದು ಆಶಾಭಾವನೆ ಮೂಡಲಿದೆ ಖಂಡಿತ ಇದು ಸಫಲತೆಗೆ ದಾರಿ ಮಾಡಿಕೊಡುತ್ತದೆ. ಕೆಲವು ಜಂಜಾಟಗಳಿಂದ ಹೈರಾಣಾಗಿರುವ ನೀವು ಎಲ್ಲವನ್ನೂ ಮರೆತು ಕುಟುಂಬದೊಂದಿಗೆ ಬೆರೆಯುವುದನ್ನು ರೂಡಿಸಿಕೊಳ್ಳಿ, ಕುಟುಂಬವೇ ನಿಮ್ಮ ಶಕ್ತಿ ಎಂಬುದನ್ನು ಮನಗಾಣಿ.

ಅದೃಷ್ಟ ಸಂಖ್ಯೆ 2

ಕರ್ಕಾಟಕ ರಾಶಿ

ಮುನಿಸಿಕೊಳ್ಳುವುದು ಅಷ್ಟು ಚೆಂದ ಕಾಣುವುದಿಲ್ಲ, ಏನಾದರೂ ಇದ್ದರೆ ಅದನ್ನು ಹೇಳಿ ಸಮಸ್ಯೆ ಪರಿಹರಿಸಿಕೊಳ್ಳಿ, ಇಂತಹ ಸಣ್ಣ ವಿಷಯಗಳಿಂದ ಕುಟುಂಬದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು. ಮಾತುಗಳು ನಮ್ಮ ಯೋಗ್ಯತೆಯನ್ನು ಪ್ರತಿನಿಧಿಸುತ್ತದೆ ಅದನ್ನು ಯಾವ ರೀತಿ ಯಾವ ಸಂದರ್ಭದಲ್ಲಿ ಬಳಸಿಕೊಳ್ಳುತ್ತೇವೆ ಅದು ಮುಖ್ಯ ವಿಷಯ ಎಂಬುದನ್ನು ನೆನಪಿಡಿ. ಕುಟುಂಬದಿಂದ ಕೆಲವು ವಿಷಯಗಳು ನಿಮಗೆ ಅನುಕೂಲ ತಂದುಕೊಡುವಂತಹದ್ದಾಗಿದೆ ಇವುಗಳನ್ನು ಇಂದು ಸೂಕ್ತವಾಗಿ ಬಳಸಿಕೊಳ್ಳಿ. ವ್ಯವಹಾರದಲ್ಲಿ ಉತ್ತಮ ಆದಾಯವಿದ್ದರೂ ಸಹ ದುಂದು ವೆಚ್ಚ ನಿಮಗೆ ಸಮಸ್ಯೆ ತಂದೊಡ್ಡಬಹುದು. ಪತ್ನಿಯನ್ನು ಪ್ರೇಮಭರಿತ ಮಾತುಗಳಿಂದ ಸಂತೈಸಿ.

ಅದೃಷ್ಟ ಸಂಖ್ಯೆ 2

ಸಿಂಹ ರಾಶಿ

ನಿರೀಕ್ಷಿತ ಯೋಜನೆಗೆ ಹಣಕಾಸು ಅಡ್ಡಿ ಬರಲಿದೆ ಧೈರ್ಯಗುಂದದೆ ಮುನ್ನಡೆಯಿರಿ, ಬಂಧು-ಮಿತ್ರರಿಂದ ಸಹಕಾರ ದೊರೆಯುತ್ತದೆ. ನಯವಂಚಕರ ಜಾಲದಲ್ಲಿ ಬೀಳಬೇಡಿ ಇಂತಹವರು ನಿಮ್ಮ ಹಣಕ್ಕಾಗಿ ಹಿಂದೆ ಬೀಳಬಹುದು ಎಚ್ಚರವಿರಿ. ಗೆಲುವಿನ ಲೆಕ್ಕಾಚಾರ ಸರಿಯಾಗಿ ಮಾಡಿ ಯಾವುದೇ ಕಾರಣಕ್ಕೂ ಯೋಜನೆಗಳಿಂದ ಹಿಂದೆ ಸರಿಯಬೇಡಿ. ಚತುರತೆ, ಜಾಣ್ಮೆ ಹೆಚ್ಚಿಸಿಕೊಳ್ಳಿ ಕುಟುಂಬದಲ್ಲಿ ಸೌಖ್ಯದ ವಾತಾವರಣ ಇದೆ.

ಅದೃಷ್ಟ ಸಂಖ್ಯೆ 4

ಕನ್ಯಾ ರಾಶಿ

ನಿಮ್ಮ ಯೋಜನೆಗೆ ಹಾಗೂ ಅಗತ್ಯಕ್ಕೆ ತಕ್ಕ ಹಾಗೆ ಹಣ ಸಂದಾಯ ಮಾಡಿ ಹೆಚ್ಚು ಕಳೆದುಕೊಳ್ಳುವುದರಿಂದ ಪರಿಸ್ಥಿತಿ ಕೆಟ್ಟದಾಗಿ ನಿರ್ಮಾಣವಾಗಲಿದೆ. ಕೆಲಸಗಳಲ್ಲಿ ತಾಳ್ಮೆ ಅವಶ್ಯಕ ಬೇಕಾಗಿದೆ ಇದು ನಿಮ್ಮ ಕಾರ್ಯವನ್ನು ಸುಭದ್ರವಾಗಿ ನಿರ್ಮಿಸಿಕೊಡುತ್ತದೆ. ಆತುರದಿಂದ ಕಾರ್ಯ ಹಾನಿ ಆಗುವ ಸಾಧ್ಯತೆ ಉಂಟು ಎಚ್ಚರವಿರಿ. ಹಿರಿಯರ ಕೃಪೆಯಿಂದ ನಿಮಗೆ ಬಂದಿರುವ ಜಮೀನು ಜಾಗವನ್ನು ಉಳಿಸಿಕೊಳ್ಳಿ ಇದು ನಿಮಗೆ ಹೆಚ್ಚು ಲಾಭ ತಂದುಕೊಡಬಹುದು ಅನ್ಯರ ಮಾತುಗಳನ್ನು ಕೇಳಿ ಇದ್ದಿದ್ದನ್ನು ಕಳೆದುಕೊಳ್ಳಬೇಡಿ. ವ್ಯಾಪಕವಾಗಿ ಸಮಸ್ಯೆ ಕೊಡುತ್ತಿರುವ ವಿಚಾರವು ಕುಟುಂಬಸ್ಥರ ನೆರವಿನೊಂದಿಗೆ ಪರಿಹಾರವಾಗಲಿದೆ. ಕೆಲವು ತಗಾದೆಗಳು ಇತ್ಯರ್ಥವಾಗುವ ಲಕ್ಷಣಗಳಿವೆ. ನಿಮ್ಮ ಮಾತುಗಾರಿಕೆ ಬಂಡವಾಳವನ್ನು ಕ್ರೂಢಿಕರಿಸುವ ಶಕ್ತಿ ಹೊಂದಿದೆ.

ಅದೃಷ್ಟ ಸಂಖ್ಯೆ 4

ತುಲಾ ರಾಶಿ

ಸಹೋದರರಿಂದ ಮನೆಯಲ್ಲಿ ಕಲಹ ಶುರುವಾಗಬಹುದು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಿಮ್ಮ ಕಡೆಯಿಂದ ಸ್ನೇಹದ ಹಸ್ತ ಚಾಚುವುದು ಒಳಿತು. ಕೆಲವು ವಿಷಯಗಳಲ್ಲಿ ಸೋತು ಗೆಲ್ಲುವುದು ಹೆಚ್ಚು ಉಪಯೋಗವಾಗುತ್ತದೆ. ಇಂದು ನಿಮ್ಮ ಕೆಲವು ತಪ್ಪಿಗೆ ಕ್ಷಮೆ ಕೇಳುವ ಪರಿಸ್ಥಿತಿ ಬರಬಹುದು ಇದರಿಂದ ನೀವೇನು ಸಣ್ಣವರು ಆಗುವುದಿಲ್ಲ ಇನ್ನು ಬಲಿಷ್ಠರಾಗಿ ಬೆಳೆಯುವಿರಿ. ಭವಿಷ್ಯದ ದೃಷ್ಟಿಯಿಂದ ಹೊಸದಾದ ಆರ್ಥಿಕ ದಾರಿಯನ್ನು ನೀವೇ ಸೃಷ್ಟಿ ಮಾಡಿಕೊಳ್ಳುವ ಸಾಧ್ಯತೆ ಇದೆ.

ಅದೃಷ್ಟ ಸಂಖ್ಯೆ 8

ವೃಶ್ಚಿಕ ರಾಶಿ

ಅತಿ ಹೆಚ್ಚು ಕೆಲಸಗಳು ನಿಮಗೆ ಇಂದು ಪ್ರಾಪ್ತಿಯಾಗಲಿದೆ, ಇದು ದೇಹದಲ್ಲಿ ಆಯಾಸವನ್ನು ಹೆಚ್ಚು ಮಾಡಬಹುದು. ಆರ್ಥಿಕವಾಗಿ ಸದೃಢವಾಗಿರುವ ದಿನ. ಅನಿರೀಕ್ಷಿತ ಮೂಲಗಳಿಂದ ಹಣಕಾಸಿನಲ್ಲಿ ಉಪಯುಕ್ತ ಬದಲಾವಣೆಯಾಗಲಿದೆ. ನಿಮ್ಮ ಕೆಲವು ನಿರೀಕ್ಷಿತ ಕಾರ್ಯಗಳಿಗೆ ಸಹಜವಾಗಿ ಅಡ್ಡಿ-ಆತಂಕಗಳು ಎದುರಾಗಬಹುದು ಭಯಪಡುವ ಅಗತ್ಯವಿಲ್ಲ. ಭೂಮಿಯ ವಿಷಯವಾಗಿ ಕ
ಹೊಡಿಕೆಯಿಂದ ಸಮೃದ್ಧ ಕಾಣಬಹುದು. ಕೌಟುಂಬಿಕವಾಗಿ ಶುಭಕಾರ್ಯಕ್ಕೆ ಮುಹೂರ್ತ ನಿಗದಿ ಮಾಡುವ ಸಾಧ್ಯತೆ. ಕೆಲವು ಅವಕಾಶಗಳು ಮುಕ್ತವಾಗಿ ನಿಮ್ಮನ್ನು ಸ್ವಾಗತಿಸುತ್ತದೆ. ಪತ್ನಿಯ ಪ್ರೇಮ ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ.

ಅದೃಷ್ಟ ಸಂಖ್ಯೆ 7

ಧನಸ್ಸು ರಾಶಿ

ಸಂಗಾತಿಯ ನೋಟವು ಹೃದಯದಲ್ಲಿ ಪ್ರೀತಿ-ಪ್ರೇಮವನ್ನು ಹೆಚ್ಚಿಸುತ್ತದೆ. ಒಂದು ಬಲುದೊಡ್ಡ ಯೋಜನೆ ನಿಮ್ಮ ಗಮನ ಸೆಳೆಯುತ್ತದೆ ಆದರೆ ಅದರ ವಿಶ್ವಾಸರ್ಹ ಪ್ರಶ್ನಿಸುವುದು ಸೂಕ್ತ. ನಿಮ್ಮ ನಡತೆ ಇತರರಿಗೆ ದಾರಿದೀಪವಾಗಿದೆ. ದೀರ್ಘಕಾಲದ ಹೂಡಿಕೆಗಳು ಲಾಭ ಹೆಚ್ಚು ಮಾಡಬಹುದು. ಅನಿರೀಕ್ಷಿತವಾಗಿ ಭೇಟಿಯಾಗುವ ಮಿತ್ರರು ನಿಮ್ಮನ್ನು ತಡರಾತ್ರಿ ಮನೆಗೆ ಕಳಿಸಬಹುದು ಎಚ್ಚರವಿರಿ. ಯೋಜನೆಯ ನಿಮಿತ್ತವಾಗಿ ಪ್ರಯಾಣ ಮಾಡಬಹುದಾದ ಸಾಧ್ಯತೆ ಕಾಣಬಹುದು. ಮಕ್ಕಳ ವಿದ್ಯೆಯಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆ ನೋಡಬಹುದಾಗಿದೆ.

ಅದೃಷ್ಟ ಸಂಖ್ಯೆ 6

ಮಕರ ರಾಶಿ

ನಗುಮುಖದಿಂದ ಉದ್ಯೋಗ ಸ್ಥಳದಲ್ಲಿ ಕಾರ್ಯ ಪ್ರಾರಂಭ ಮಾಡಿ ಇದು ನಿಮಗೆ ನೀಡಿರುವ ಹೆಚ್ಚುವರಿ ಜವಾಬ್ದಾರಿಯನ್ನು ಒತ್ತಡವಿಲ್ಲದೆ ಪೂರ್ಣಗೊಳಿಸುತ್ತದೆ. ಸಾಲಕೊಡುವ ಪ್ರಮೇಯ ಬಂದರೆ ವ್ಯಕ್ತಿಯ ನಿಷ್ಠೆಯನ್ನು ವಿಚಾರ ಮಾಡಿ. ಕೆಲವು ಹಣಕಾಸಿನ ಹಾಗೂ ಭೂಮಿಯ ಸಂಬಂಧಪಟ್ಟ ಕಿರಿಕಿರಿ ವಿಷಯವನ್ನು ಹಿರಿಯರ ಜೊತೆ ಸಂವಾದ ನಡೆಸಿ ಬಗೆಹರಿಸಲು ಪ್ರಯತ್ನಿಸಿ. ಮನಸ್ಸಿನಲ್ಲಿರುವ ಹಣಕಾಸಿನ ಯೋಜನೆ ಬಗ್ಗೆ ಆದಷ್ಟು ಗೋಪ್ಯತೆ ಕಾಪಾಡಿ. ಪತ್ನಿಯ ಪ್ರೇಮವನ್ನು ಕಡೆಗಣಿಸದೆ ಸಂತೋಷದ ವಾತಾವರಣ ಮನೆಯಲ್ಲಿ ನೀವೇ ಸೃಷ್ಟಿಸುವುದು ಒಳ್ಳೆಯದು.

ಅದೃಷ್ಟ ಸಂಖ್ಯೆ 9

ಕುಂಭ ರಾಶಿ

ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ನಿರೀಕ್ಷಿತವಾಗಿ ನಿಮ್ಮ ಯೋಜನೆಗೆ ಸಹಕಾರ ದೊರೆಯಲಿದೆ. ಆರೋಗ್ಯದ ಕಡೆ ಗಮನವಹಿಸಿ. ಮಕ್ಕಳಲ್ಲಿನ ವಿದ್ಯೆಯ ಜ್ಞಾನ ಅಗಾಧವಾದದ್ದು ಹಾಗೆಯೇ ಅದು ಕುತೂಹಲಭರಿತ ವಾದದ್ದು ನಿಮ್ಮ ಸಹಕಾರ ಅವರಿಗೆ ದೊರೆಯುವಂತೆ ವ್ಯವಸ್ಥೆ ಮಾಡಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಇಂದು ಕುಲದೇವತಾರಾಧನೆ ಮನಸ್ಸು ಮಾಡುವಿರಿ. ಬಂಧುಮಿತ್ರರೊಡನೆ ಸಂಜೆಯ ವಾತಾವರಣ ಉತ್ತಮವಾಗಿರುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ.

ಅದೃಷ್ಟ ಸಂಖ್ಯೆ 2

ಮೀನ ರಾಶಿ

ಹಳೆಯ ಹೂಡಿಕೆಗಳು ಲಾಭಾಂಶ ತಂದು ಕೊಡುತ್ತದೆ, ಆದರೆ ಬಂದಂತಹ ಹಣಕಾಸು ಉಳಿತಾಯ ಮಾಡುವುದು ಕಡಿಮೆ. ಆರ್ಥಿಕ ವ್ಯವಹಾರಗಳು ನಿಮ್ಮ ನಿರೀಕ್ಷೆ ತಲುಪುವುದಿಲ್ಲ. ಸ್ನೇಹಿತರೊಡನೆ ಅಪನಂಬಿಕೆ ಹೆಚ್ಚಾಗುವ ಸಾಧ್ಯತೆ. ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲು ಹರಸಾಹಸ ಪಡುವಿರಿ. ಗೃಹ ಕಾಮಗಾರಿಗಳಲ್ಲಿ ವಿಳಂಬ ಹೆಚ್ಚಾಗುವ ಸಾಧ್ಯತೆ. ನಿಮ್ಮ ಆದಾಯದ ಮಾರ್ಗಗಳು ಸಂಕುಚಿತಗೊಳ್ಳುತ್ತದೆ ಅದರ ಬಗ್ಗೆ ಗಮನ ನೀಡಿ. ವೃತ್ತಿಯಲ್ಲಿ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಉದ್ಯೋಗ ಜಾಗದಲ್ಲಿ ಕೆಲವು ಸುಧಾರಣೆಗೆ ಆದ್ಯತೆ ನೀಡಿ.

ಅದೃಷ್ಟ ಸಂಖ್ಯೆ 4
Leave a Reply

Your email address will not be published. Required fields are marked *

error: Content is protected !!