ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರತ್ ಋತು, ನಿಜ ಆಶ್ವಯುಜ ಮಾಸ, ಕೃಷ್ಣ ಪಕ್ಷ.
ವಾರ:ಬುಧವಾರ, ತಿಥಿ :ಏಕಾದಶಿ, ನಕ್ಷತ್ರ: ಪುಬ್ಬಾ,
ರಾಹುಕಾಲ: 12.07 ರಿಂದ 1.34
ಗುಳಿಕಕಾಲ: 10.40 ರಿಂದ 12.07
ಯಮಗಂಡಕಾಲ: 7.46 ರಿಂದ 9.13
ಮೇಷರಾಶಿ : ಅತ್ಯದ್ಭುತವಾಗಿರುವ ದಿನ, ಚಂದ್ರ ಗುರು ಮೂಲ ತ್ರಿಕೋನದಲ್ಲಿದ್ದಾರೆ. ಸೂರ್ಯ ಗುರು ಸಾರದಲ್ಲಿ ಇರುವುದರಿಂದ ಗುರು ದೃಷ್ಟಿಯಿಂದ ಅಂದುಕೊಂಡಿರುವ ಕೆಲಸ ಕಾರ್ಯಗಳಲ್ಲಿ ಗೌರವ ಸನ್ಮಾನ ಹೆಸರು ಪ್ರಗತಿಯನ್ನು ಕಾಣುತ್ತೀರ.
ವೃಷಭ ರಾಶಿ : ಮಕ್ಕಳು ಮನೆಯ ಚಿಂತೆಯಿಂದ ಒದ್ದಾಡುತ್ತೀರ, ಏಕಾದಶಿಯಾಗಿರುವುದರಿಂದ ರಾಮರ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿ, ಮುನ್ನೂರು ಗ್ರಾಂ ನಷ್ಟಾದರು ಕಾಬೂಲ್ ಚೆನ್ನಾ ವನ್ನ ದಾನ ಮಾಡಿ ಒಳ್ಳೇದಾಗತ್ತೆ.
ಮಿಥುನ ರಾಶಿ : ಮಕ್ಕಳಿರುವವರಿಗೆ ಮಕ್ಕಳ ಚಿಂತೆ, ಮಕ್ಕಳಾಗದವರಿಗೆ ಮಕ್ಕಳಾಗಲಿಲ್ಲವೆಂಬ ಚಿಂತೆ. ಎಂಬ ಬಾಧೆಯ ಬೇಗುದಿಯಲ್ಲಿ ಬೇಯುತ್ತೀರ. ಇಂದು ಶಿವನ ದೇವಸ್ಥಾನಕ್ಕೆ ಹೋಗಿ ಬಿಲ್ವಾರ್ಚನೆ ಮಾಡಿಸಿ ಮನಸ್ಸಿಗೆ ಶಾಂತಿ ಸಿಗುತ್ತದೆ ಶುಭ ಸುದ್ದಿಯೊಂದನ್ನು ಕೇಳುತ್ತೀರ.
ಕರ್ಕಾಟಕ ರಾಶಿ : ಚಂದ್ರ ಸೂರ್ಯನ ಸಾರದಲ್ಲಿರೋದರಿಂದ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ವಿಶೇಷ ಪ್ರಗತಿ. ಗುರು ಸ್ವರೂಪದ ವ್ಯಕ್ತಿಯಿಂದ ಸಹಕಾರ.
ಸಿಂಹ ರಾಶಿ : ವಿಶೇಷ ಅನುಕೂಲವನ್ನು ನೋಡುವಂತಹಅದ್ಭುತವಾದ ದಿನ. ಚಂದ್ರ ಸೂರ್ಯನ ಸಾರದಲ್ಲಿ ಇರುವುದರಿಂದ ತೊಂದರೆ ಏನೂ ಇಲ್ಲ ಆದರೆ ಅಳುಕಿನ ಭಾವವಿರುತ್ತದೆ. ಜಗನ್ಮಾತೆಯ ದರ್ಶನ ಮಾಡಿ ಧೈರ್ಯವನ್ನು ತಟ್ಟಿ ಎಬ್ಬಿಸುತ್ತದೆ.
ಕನ್ಯಾ ರಾಶಿ : ಖರ್ಚು ಜಾಸ್ತಿ ದೊಡ್ಡವರ ವಿಚಾರ, ದೊಡ್ಡ ಕಾರ್ಯ, ದೊಡ್ಡ ಜವಾಬ್ದಾರಿಯ ಸ್ಥಾನದಲ್ಲಿದ್ದರೆ ದೊಡ್ಡದಾದ ಖರ್ಚಾಗುತ್ತದೆ ಒಳ್ಳೆಯದೇ ಆಗುತ್ತದೆ.
ತುಲಾ ರಾಶಿ : ಲಾಭಕರ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಲಾಭ ಬರುತ್ತದೆ ಜೊತೆಗೆ ಖರ್ಚು ಕೂಡ ಆಗುತ್ತದೆ. ಕೋರ್ಟಿನ ಸಮಸ್ಯೆಗಳೇನಾದರೂ ಇದ್ದರೆ ಒದ್ದಾಡುತ್ತೀರ.
ವೃಶ್ಚಿಕ ರಾಶಿ : ದಳಪತಿ ದಂಡನಾಯಕನಾಗಿ ಮುಂದಕ್ಕೆ ಹೆಜ್ಜೆ ಹಾಕಿ ಸ್ವಲ್ಪ ಅಭದ್ರತಾ ಭಾವನೆ ಇರುತ್ತದೆ ವಿನಾಯಕನ ಪೂಜೆ ಮಾಡಿ ಮುಂದಕ್ಕೆ ಹೆಜ್ಜೆ ಹಾಕಿ.
ಧನಸ್ಸು ರಾಶಿ : ಅದೃಷ್ಟ ಕೆಲಸಕಾರ್ಯ ನ್ಯಾಯಬದ್ಧವಾಗಿ ಸತತ ಪ್ರಯತ್ನದಿಂದ ಮುಂದಕ್ಕೆ ಹೆಜ್ಜೆ ಇಟ್ಟರೆ ಗೆಲುವು ಕಟ್ಟಿಟ್ಟ ಬುತ್ತಿ.
ಮಕರ ರಾಶಿ : ತಂದೆ ತಾಯಿ ಹಿರಿಯರ ಜೊತೆ ವಾದ ವಿವಾದಕ್ಕೆ ಇಳಿದು ಬಿಡುತ್ತೀರಾ ಅವರ ಆರೋಗ್ಯದ ಕಡೆ ಗಮನ ಕೊಡಿ, ವಾದ ಮಾಡಲು ಹೋಗಬೇಡಿ.
ಕುಂಭ ರಾಶಿ : ತಿಳಿದವರ ಜೊತೆ ಚರ್ಚೆ ಮಾಡುವುದು ಒಳ್ಳೆಯದು ಆದರೆ ಅವರ ವಿಚಾರಗಳನ್ನು ತೆಗೆದು ಕೊಳ್ಳದೆ ನಿಮಗೆ ನೀವೇ ದೊಡ್ಡವರು ಎಂದುಕೊಳ್ಳುವುದು ತಪ್ಪು. ದೊಡ್ಡವರ ಹಿರಿಯರ ಮಾತುಗಳನ್ನು ಕೇಳಿ ಅದಕ್ಕೆ ತಕ್ಕಂತೆಯೇ ಹೆಜ್ಜೆ ಹಾಕಿ ಒಳ್ಳೆಯದು.
ಮೀನ ರಾಶಿ : ಹೊಟ್ಟೆ ನೋವಿನ ಸಮಸ್ಯೆಯಿಂದ ಒದ್ದಾಡುತ್ತೀರ. ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಒದ್ದಾಡುತ್ತೀರ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ 1 ಚಿಟಿಕೆಯಷ್ಟು ಶುದ್ಧ ಬೇವಿನ ಎಣ್ಣೆಯನ್ನು ಸೇವಿಸಿ.