13-07-2019 ದಿನ ಭವಿಷ್ಯ

325

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಅನೂರಾಧ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:16 ರಿಂದ 10:52
ಗುಳಿಕಕಾಲ: ಬೆಳಗ್ಗೆ 6:05 ರಿಂದ 7:40
ಯಮಗಂಡಕಾಲ: ಮಧ್ಯಾಹ್ನ 2:04 ರಿಂದ 3:40

ಮೇಷ: ಈ ದಿನ ಉತ್ತಮವಾಗಿರುವುದು,ಆಗಾಗ ಮನಸ್ಸಿಗೆ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಸ್ಥಿರಾಸ್ತಿ ವಿಚಾರದಲ್ಲಿ ತಗಾದೆ, ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ.ವ್ಯಾಪಾರ ವ್ಯವಹಾರ ಮಧ್ಯಮ ಲಾಭ ಉದ್ಯೋಗಿಗಳಿಗೆ ಅಧಿಕ ಒತ್ತಡ.ಆರೋಗ್ಯ ಉತ್ತಮ.

ವೃಷಭ: ಈ ದಿನ ಮಿಶ್ರ ಫಲ ಕಾಣುವಿರಿ,ದಾಂಪತ್ಯದಲ್ಲಿ ಆಲಸ್ಯ, ಪರಿಚಯಸ್ಥರಿಂದ ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ ಒಲಿಯುವುದು, ನೆಮ್ಮದಿಯ ದಿನ ನಿಮ್ಮದಾಗುವುದು,ವ್ಯಾಪಾರಿಗಳಿಗೆ ಮಧ್ಯಮ ಲಾಭ,ಆರೋಗ್ಯ ಉತ್ತಮ,ಉದ್ಯೋಗಿಗಳಿಗೆ ಅಲ್ಪ ಜಯ.

ಮಿಥುನ: ವ್ಯಾಪಾರ ವ್ಯವಹಾರದಲ್ಲಿ ಎಚ್ಚರದಿಂದಿರಿ,ಅನಿರೀಕ್ಷಿತವಾಗಿ ಸಾಲ ಮಾಡುವ ಪರಿಸ್ಥಿತಿ, ಕುಟುಂಬ ಸಮೇತ ಪ್ರಯಾಣ ಸಾಧ್ಯತೆ, ನೀವಾಡುವ ಮಾತಿನಿಂದ ಅನರ್ಥ, ಶತ್ರುತ್ವ ಹೆಚ್ಚಾಗುವುದು,ವ್ಯಾಪಾರದಲ್ಲಿ ಅಲ್ಪ ನಷ್ಟ ,ಉದ್ಯೋಗಿಗಳಿಗೆ ಕೆಲಸದ ಒತ್ತಡ,ಆರೋಗ್ಯ ಮಧ್ಯಮ.

ಕಟಕ: ಈ ದಿನ ಮಿಶ್ರ ಫಲಗಳಿದ್ದು ಪ್ರೇಮ ವಿಚಾರದಲ್ಲಿ ಅಡೆತಡೆ, ಕೀಲು ನೋವು, ಗ್ಯಾಸ್ಟ್ರಿಕ್ ಸಮಸ್ಯೆ, ಮಕ್ಕಳಿಂದ ಬೇಸರ, ಸ್ನೇಹಿತರಿಂದ ಭಾವನೆಗಳಗೆ ಧಕ್ಕೆಉಂಟಾಗುವುದು,ವ್ಯಾಪಾರಿಗಳಿಗೆ ಅಲ್ಪ ನಷ್ಟ,ಹೊಸ ವ್ಯವಹಾರಕ್ಕೆ ಕೈ ಹಾಕದಿರಿ.

ಸಿಂಹ:ಈ ದಿನ ನಿಮಗೆ ಅಷ್ಟೇನೂ ಶುಭ ವಾಗದು ,ಆಗಾಗ ಹಿತ ಶತ್ರುಗಳಿಂದ ತೊಂದರೆ, ಮನೆ ವಾತಾವರಣದಲ್ಲಿ ತಾಯಿ ಹೆಂಡತಿ ಅಥವಾ ಸಹೋದರ ರಿಂದಾಗಿ ಅಶಾಂತಿ, ದಾಂಪತ್ಯದಲ್ಲಿ ಕಿರಿಕಿರಿ, ಸ್ನೇಹಿತರಿಂದ ದೂರವಾಗಲು ಚಿಂತನೆ, ವಿಕೃತ ಆಸೆ ಆಕಾಂಕ್ಷೆಗಳಿಂದ ತೊಂದರೆ, ಹಣದ ಹರಿವು ಇರುವುದಿಲ್ಲ ಆರೋಗ್ಯ ಉತ್ತಮ ,ವಾಯು ಭಾದೆ.

ಕನ್ಯಾ: ಸೋಮಾರಿತನ ಚಂಚಲ ಮನಸ್ಸಿನಿಂದ ಹೊರಬನ್ನಿ,ನೆರೆಹೊರೆಯವರಿಂದ ಅನುಕೂಲ, ಬಂಧುಗಳಲ್ಲಿ ವೈರತ್ವ, ಮಕ್ಕಳಿಗೆ ಅನುಕೂಲ, ಉನ್ನತ ಸ್ಥಾನಮಾನದ ಯೋಗ,ಆರೋಗ್ಯ ಮಧ್ಯಮ, ಹಣದ ಹರಿವು ಉತ್ತಮ,ಇಚ್ಚಿಕ ಕೆಲಸಗಳನ್ನು ಪೂರೈಸಿ ಗೆಲುವು ನಿಮ್ಮದಾಗುವುದು.

ತುಲಾ: ಈ ದಿನ ಅಲ್ಪ ಶುಭ ಅಲ್ಪ ಅಶುಭ ಫಲಗಳಿವೆ,ದೀರ್ಘಕಾಲದ ಸಮಸ್ಯೆಗೆ ಮುಕ್ತಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸ್ಥಿರಾಸ್ತಿ ಖರೀದಿಗೆ ಸಹಕಾರ, ಸೈಟ್ ಮಾರಾಟದಿಂದ ಧನಾಗಮನ, ಉದ್ಯೋಗ ಪ್ರಾಪ್ತಿ, ಮಾನಸಿಕ ನೆಮ್ಮದಿ ಇದ್ದರೂ ವ್ಯವಹಾರದಲ್ಲಿ ನಷ್ಟ ಕುಟುಂಬ ದಲ್ಲಿ ಕಿರಿಕಿರಿ ಕಾಣಬಹುದು.

ವೃಶ್ಚಿಕ: ಕುಟುಂಬ ನೆಮ್ಮದಿ ,ದಾಂಪತ್ಯದಲ್ಲಿ ಸರಸ,ವಾಹನದಿಂದ ತೊಂದರೆ, ಪೆಟ್ಟಾಗುವ ಸಾಧ್ಯತೆ, ಸ್ವಯಂಕೃತ ಅಪರಾಧದಿಂದ ಅವಕಾಶ ಕೈತಪ್ಪುವುದು, ಬಂಧುಗಳ ಏಳಿಗೆಗೆ ಅಸೂಯೆ, ಮನಸ್ಸಿನಲ್ಲಿ ಅಶಾಂತಿ-ಆತಂಕ ಆಗಾಗ ಕಾಡುವುದು,ವ್ಯಾಪಾರಿಗಳಿಗೆ ಲಾಭ ಇರದು.

ಧನಸ್ಸು: ಆರೋಗ್ಯದಲ್ಲಿ ಆಗಾಗ ಬದಲಾವಣೆ,ವ್ಯಾಪಾರದಲ್ಲಿ ನಷ್ಟ , ಅಧಿಕವಾದ ನಿದ್ರೆ, ಆತ್ಮೀಯರು ದೂರವಾಗುವ ಸಾಧ್ಯತೆ, ಕುಟುಂಬದಲ್ಲಿ ಸಂಕಷ್ಟ, ಆಕಸ್ಮಿಕ ದುರ್ಘಟನೆ, ಮಾನಸಿಕ ವ್ಯಥೆ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಆಸೆಗಳು ಈಡೇರುವ ಸಾಧ್ಯತೆ, ಮಕ್ಕಳಿಂದ ಅನುಕೂಲ, ನೆಮ್ಮದಿ-ಶುಭಕರವಾದ ದಿನ.

ಕುಂಭ: ಅಧಿಕವಾದ ಉಷ್ಣ, ರೋಗ ಬಾಧೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ತೊಂದರೆ, ಈ ದಿನ ನಷ್ಟ ಪ್ರಮಾಣ ಹೆಚ್ಚಾಗುವುದು.

ಮೀನ: ಈ ದಿನ ಮಿಶ್ರ ಫಲ ಅನುಭವಿಸುವಿರಿ,ಮಕ್ಕಳಿಂದ ಸಮಸ್ಯೆ,ತಂದೆ-ಮಕ್ಕಳಲ್ಲಿ ಶತ್ರುತ್ವ, ಬಂಧುಗಳಿಂದ ಅವಕಾಶ ವಂಚನೆ, ಗೌರವಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣ, ಮಾನಸಿಕ ಚಿಂತೆ, ಉದ್ಯೋಗ ವ್ಯವಹಾರದಲ್ಲಿ ಅಲ್ಪ ನಷ್ಟ ,ಆರೋಗ್ಯ ಮಧ್ಯಮ.
Leave a Reply

Your email address will not be published. Required fields are marked *