add

13-11-2020 ರ ದಿನ ಭವಿಷ್ಯ.

282

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ನಿಜ ಆಶ್ವಯುಜ ಮಾಸ,
ಕೃಷ್ಣಪಕ್ಷ, ದ್ವಾದಶಿ, ಶುಕ್ರವಾರ, ಚಿತ್ತಾ ನಕ್ಷತ್ರ,
ರಾಹುಕಾಲ 10:40 ರಿಂದ 12:07
ಗುಳಿಕಕಾಲ 07:46 ರಿಂದ 09:13
ಯಮಗಂಡಕಾಲ 03:01 ರಿಂದ 4:28

ಮೇಷರಾಶಿ : ಕುಜ ಸ್ವಲ್ಪ ವಕ್ರವಾಗಿರುವುದರಿಂದ ದುಡುಕಬೇಡಿ, ಮಾಡುವ ಕೆಲಸ ಕಾರ್ಯಗಳಲ್ಲಿ ನಿಧಾನ ವಿರಲಿ,ಮಕ್ಕಳಿಂದ ಅನುಕೂಲ, ಗರ್ಭದೋಷ ಮತ್ತು ಸಂತಾನ ಸಮಸ್ಯೆ, ಕಾನೂನು ಬಾಹಿರ ಚಟುವಟಿಕೆಗಳು, ದೇವತಾ ಕಾರ್ಯಗಳಲ್ಲಿ ಅಡೆತಡೆ.

ವೃಷಭ ರಾಶಿ : ಗರ್ಭಿಣಿಯರಿಗೆ, ಪುಟ್ಟಮಕ್ಕಳಿಗೆ, ತುಂಬ ಆತುರಗಾರರಿಗೆ ಪೆಟ್ಟು, ಗುರು ಮತ್ತು ಶುಕ್ರ ನೀಚನಾಗಿರುವುದರಿಂದ ನಂದಾದೀಪವನ್ನು ಹಚ್ಚಿಕೊಳ್ಳಿ.

ಮಿಥುನ ರಾಶಿ : ಯಾರೂ ಕಷ್ಟದಿಂದ ಭೂಮಿ ವಾಹನಗಳನ್ನ ಮಾರುತ್ತಿದ್ದರೆ ಅದನ್ನು ಅರ್ಧ ಬೆಲೆಗೆ ತೆಗೆದುಕೊಳ್ಳಲು ಹೋಗಬೇಡಿ ಅದು ನಿಮಗೆ ಉಳಿಯುವುದಿಲ್ಲ. ಬೇರೆಯವರ ಕಷ್ಟವನ್ನು ದುರುಪಯೋಗಪಡಿಸಿಕೊಳ್ಳಬೇಡಿ.

ಕರ್ಕಾಟಕ ರಾಶಿ : ಭೂಮಿ ಮನೆ ಹಣಕಾಸು ವ್ಯವಹಾರ ಹಬ್ಬದ ಸಂಭ್ರಮ. ಯಶಸ್ಸು ಕೀರ್ತಿ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಸೋದರರ ವಿಚಾರದಲ್ಲಿ ವೈಮನಸ್ಸು ಕಿರಿಕಿರಿ ಇರುತ್ತದೆ.

ಸಿಂಹ ರಾಶಿ : ಚೆನ್ನಾಗಿದೆ ಗತ್ತು ತೂಕದ ದಿನ, ಶಾರ್ಟ್ ಕಟ್ ನಲ್ಲಿ ಭೂಮಿ ಮನೆ ವಾಹನಗಳನ್ನು ಮಾಡಿಕೊಳ್ಳುತ್ತಿದ್ದರೆ ದೀಪಾವಳಿಯ ದಿನ ಮಾಡಿಕೊಂಡರೆ ಒಳ್ಳೆಯದು.

ಕನ್ಯಾ ರಾಶಿ : ನಿಮ್ಮ ಮನೆಯಲ್ಲಿ ಇಂದು ಧನ್ವಂತರಿ ತ್ರಯೋದಶಿ, ಇಂದಿನಿಂದಲೇ ಮನೆಯಲ್ಲಿ ಹಬ್ಬದ ಸಡಗರ ಸಂಭ್ರಮ ಶುರು ಆಗುತ್ತದೆ, ಮುಂದಕ್ಕೆ ಹೆಜ್ಜೆ ಇಡಿ.

ತುಲಾ ರಾಶಿ : ಚೆನ್ನಾಗಿದೆ, ವಿಶೇಷವಾದ ದಿನ, ಸೋದರವರ್ಗದಲ್ಲಿ ಸಂಗಾತಿಯ ವಿಚಾರದಲ್ಲಿ, ಸಂಗಾತಿಯ ಸೋದರ ವರ್ಗದ ವಿಚಾರದಲ್ಲಿ ಕಲಹದ ಒತ್ತಡ.

ವೃಶ್ಚಿಕ ರಾಶಿ : ಮನೆಯಲ್ಲಿ ಸಡಗರ ಸಂಭ್ರಮದ ಛಾಯೆ ತುಂಬಾ ದಿನಗಳ ನಂತರ ಅತಿಥಿಗಳ ಆಗಮನ, ಈ ದೀಪಾವಳಿ ಸಂಭ್ರಮ ಅದೃಷ್ಟವನ್ನು ತಂದುಕೊಡುವಂತಹ ದಿನ.

ಧನಸ್ಸು ರಾಶಿ : ಯೋಗಕಾರಕ ದಿನ, ವಿಜ್ಞಾನಿಗಳಿಗೆ, ಸ್ಪೋರ್ಟ್ಸ್ ಮನ್ ಗಳಿಗೆ, ಮಿಲಿಟರಿ, ಡಿಫೆನ್ಸ್, ರಕ್ಷಣಾ ಇಲಾಖೆಗೆ ಅದ್ಭುತವಾದ ದಿನ ಯಶಸ್ಸು ಕಟ್ಟಿಟ್ಟ ಬುತ್ತಿ.

ಮಕರ ರಾಶಿ : ಅತಿಯಾದ ಬಲ ಇರುವುದರಿಂದ ಅದನ್ನು ನಮ್ಮವರ ಮೇಲೆ ಪ್ರಯೋಗಿಸಲು ಹೋಗಬೇಡಿ ಬಡಿಸಿ ಕೊಳ್ಳುತ್ತೀರಾ ಎಚ್ಚರಿಕೆ. ದೊಡ್ಡಪ್ಪ ಚಿಕ್ಕಪ್ಪ ತಾತಾ ಅಣ್ಣಾ ಮುಂತಾದ ಹಿರಿಯರ ಜತೆಗೆ ಬಲಪ್ರಯೋಗಿಸಲು ಹೋಗಬೇಡಿ.

ಕುಂಭ ರಾಶಿ : ಒತ್ತಡದ ದಿನ ನಿಭಾಯಿಸುತ್ತೀರಾ, ಎಂತಹ ಭಾರವಿದ್ದರು ಅದನ್ನು ಜಯಿಸಿ ಕೊಂಡುಬರುವಂಥ ಶಕ್ತಿ ನಿಮಗಿದೆ, ಸಂಗಾತಿಯಿಂದ ಅನುಕೂಲ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಉದ್ಯೋಗ ಲಾಭವಾಗುವ ಲಕ್ಷಣ

ಮೀನ ರಾಶಿ : ಹೊಸದಾಗಿ ಮದುವೆಯಾಗಿರುವವರ ಮನೆಯಲ್ಲಿ ಸಡಗರ ಸಂಭ್ರಮ, ಅದಕ್ಕೆ ಹುಳಿ ಹಿಂಡುವಂತಹ ಪ್ರಮೇಯ ಕೂಡ ಬರುತ್ತದೆ.

ಜಾಹಿರಾತು ಹಾಗೂ ಸುದ್ದಿಗಳಿಗಾಗಿ ವಾಟ್ಸ್ ಅಪ್ ಮಾಡಿ:- 9741058799
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ