ಭಾನುವಾರದ ದಿನ ಭವಿಷ್ಯ

324

ಶ್ರೀವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಭಾನುವಾರ, ಜ್ಯೇಷ್ಠ ಮಾಸ,

ರಾಹುಕಾಲ: ಸಂಜೆ 5:16 ರಿಂದ 6:52
ಗುಳಿಕಕಾಲ: ಮಧ್ಯಾಹ್ನ 3:40 ರಿಂದ 5:16
ಯಮಗಂಡಕಾಲ: ಮಧ್ಯಾಹ್ನ 12:28 ರಿಂದ 2:04

ದಿನದ ವಿಶೇಷ :-
ಈ ದಿನ ಕರಾವಳಿ ಭಾಗದಲ್ಲಿ ಉತ್ತಮ ಮಳೆ ಆಗಲಿದೆ,ಸಮುದ್ರದಲ್ಲಿ ಮೀನಿನ ಉತ್ಪತ್ತಿ ಏರಿಕೆಯಾಗಲಿದೆ,ಮಲೆನಾಡಿನಲ್ಲಿ ಮಿಶ್ರ ಮಳೆ ಯಿದೆ,ಕೃಷಿಕರಿಗೆ ಅಲ್ಪ ಹಿನ್ನಡೆ ಆಗಲಿದೆ,ವ್ಯಾಪಾರಸ್ಥರಿಗೆ ಮಧ್ಯಮ ಫಲ ವಿದೆ.

ಮೇಷ: ಈ ದಿನ ಶುಭವಾಗಿರಲಿದೆ,ಅನಿರೀಕ್ಷಿತಪ್ರಯಾಣ, ಸಮಾಜದಲ್ಲಿ ಗೌರವ, ದಾನ-ಧರ್ಮದಲ್ಲಿ ಆಸಕ್ತಿ, ಆರೋಗ್ಯ ಉತ್ತಮ,ವಾಹನ ಖರೀದಿ, ಇಷ್ಟಾರ್ಥ ಸಿದ್ಧಿ, ಸುಖ ಭೋಜನ ಪ್ರಾಪ್ತಿ, ಮಾನಸಿಕ ನೆಮ್ಮದಿ,ಬಂಧುಗಳಲ್ಲಿ ಆಗಾಗ ವೈಮನಸ್ಸು ಉಂಟಾಗಬಹುದು.

ವೃಷಭ: ವ್ಯಾಸಂಗಕ್ಕೆ ತೊಂದರೆ,ಆರೋಗ್ಯ ಉತ್ತಮ ಮನಃಸ್ತಾಪ, ಅಲ್ಪ ಧನಹಾನಿ, ಶತ್ರುಗಳ ಬಾಧೆ, ಮಿತ್ರರಿಂದ ಸಹಾಯ, ಅಕಾಲ ಭೋಜನ, ಆಸ್ತಿ ವ್ಯಾಜ್ಯಗಳು ನಿಮ್ಮ ಪರವಾಗಿ ಬರವುದು. ಸಾಮಾಜಿಕವಾಗಿ ಗೌರವ ಸಂಪಾದಿಸಲಿದ್ದೀರಿ. ಧನಾಗಮನ ಸಕಾಲ ಆಗುವುದರಿಂದ ಚಿಂತೆ ಬೇಡ.

ಮಿಥುನ: ದ್ರವ್ಯ ಲಾಭ, ತಂದೆ-ತಾಯಿಯ ಸೇವೆ ಮಾಡುವಿರಿ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರ ವ್ಯವಹಾರದಲ್ಲಿ ಮಂದಗತಿ, ಕುಲದೇವರ ಪೂಜೆಯಿಂದ ಶುಭ ಫಲ, ಸಾಂಸಾರಿಕವಾಗಿ
ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಮೂಡಿಬರಲಿದೆ. ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಖರ್ಚು ವೆಚ್ಚಗಳಾಗಲಿವೆ, ಎಚ್ಚರಿಕೆ ಅಗತ್ಯ. ಅವಿವಾಹಿತರಿಗೆ ಕಂಕಣ ಬಲ ಕೂಡಿಬರಲಿದೆ.

ಕಟಕ: ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಫಲಿತಾಂಶ ಸಿಗುವುದು. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿತ ಮುನ್ನಡೆ ಸಾಧಿಸುವಿರಿ. ಸಂಗಾತಿಯ ಆರೋಗ್ಯ ಹದಗೆಡಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ.
ಮನಸ್ಸಿನಲ್ಲಿ ಆತಂಕ, ನಂಬಿಕಸ್ಥರಿಂದ ಮೋಸ, ಯಾರನ್ನೂ ಹೆಚ್ಚು ನಂಬಬೇಡಿ, ಚಂಚಲ ಮನಸ್ಸು, ಹಿತ ಶತ್ರುಗಳಿಂದ ತೊಂದರೆ, ಮಕ್ಕಳಲ್ಲಿ ದ್ವೇಷ, ಋಣ ಬಾಧೆ, ಅನಿರೀಕ್ಷಿತ ದ್ರವ್ಯ ಲಾಭ, ಮಾನಸಿಕ ನೆಮ್ಮದಿ,

ಸಿಂಹ: ಬಂಧುಗಳಲ್ಲಿ ನಿಷ್ಠೂರ, ಮಾನಸಿಕ ವೇದನೆ, ಬುದ್ಧಿ ಕ್ಲೇಷ, ದೂರದ ಆಲೋಚನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ, ದೈವಿಕ ಚಿಂತನೆ, ಧನ ಲಾಭ,ಕೆಲವೊಂದು ವಾಗ್ವಾದಗಳಲ್ಲಿ ಅನಿವಾರ್ಯವಾಗಿ ತಲೆತೂರಿಸುವ ಪರಿಸ್ಥಿತಿ ಎದುರಾಗಲಿದೆ. ಆಪ್ತರ ಜತೆಗೆ ನಿಷ್ಠುರವಾಗಿ ನಡೆದುಕೊಳ‍್ಳುವ ಸಂದಿಗ್ಧ ಪರಿಸ್ಥಿತಿ ನಿಮ್ಮದಾಗಲಿದೆ. ವೃತ್ತಿರಂಗದಲ್ಲಿ ಹೆಚ್ಚಿನ ಜವಾಬ್ಧಾರಿ ಹೊರಬೇಕಾಗುತ್ತದೆ.

ಕನ್ಯಾ: ವಿದ್ಯಾಭ್ಯಾಸದಲ್ಲಿ ಅಡಚಣೆ, ಪರರ ಧನ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ, ಗೌರವ ಸನ್ಮಾನ ಪ್ರಾಪ್ತಿ, ವಿವಾಹ ಯೋಗ, ಅಲ್ಪ ಆದಾಯ, ಅಧಿಕವಾದ ಖರ್ಚು, ಸ್ತ್ರೀಯರಿಗೆ ಲಾಭ, ಅಧಿಕ ತಿರುಗಾಟದಿಂದ ಆಯಾಸ,
ಕಷ್ಟದ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಲಾಗದೇ ಅಸಹಾಯಕತೆ ಕಾಡುವುದು. ವ್ಯಾಪಾರ, ವಾಣಿಜ್ಯೋದ್ಯಮ ನಡೆಸುವವರಿಗೆ ಲಾಭವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ.

ತುಲಾ: ಯತ್ನ ಕಾರ್ಯದಲ್ಲಿ ವಿಳಂಬ, ಮಾಡೋ ಕೆಲಸಕ್ಕೆ ಅಡೆತಡೆ, ಮಿತ್ರರಿಂದ ಮೋಸ, ಅಧಿಕವಾದ ಹಣವ್ಯಯ, ವಾದ-ವಿವಾದಿಂದ ಮನೆಯಲ್ಲಿ ಕಲಹ, ಮಹಿಳೆಯರಿಗೆ ತೊಂದರೆ,ಸರಕಾರಿ ಅಧಿಕಾರಿಗಳಿಗೆ ವರ್ಗಾವಣೆ ಭೀತಿಯಿದೆ, ವೃತ್ತಿರಂಗದಲ್ಲಿ ಗಮನಾರ್ಹ ಬದಲಾವಣೆಯಾಗಲಿದೆ,ದಾಂಪತ್ಯ ಜೀವನದಲ್ಲಿ ಸಂಗಾತಿಯ ಸಹಕಾರದಿಂದ ನೆಮ್ಮದಿ ಮೂಡಲಿದೆ.

ವೃಶ್ಚಿಕ: ಕುಟುಂಬ ಸೌಖ್ಯ, ಬಂಧು-ಮಿತ್ರರ ಸಮಾಗಮ, ಆತ್ಮೀಯರಲ್ಲಿ ಮನಃಸ್ತಾಪ, ಆಂತರಿಕ ಕಲಹ, ಪರರಿಂದ ಮೋಸ ಸಾಧ್ಯತೆ, ಅಲ್ಪ ಕಾರ್ಯ ಸಿದ್ಧಿ, ಆಸ್ತಿ ವಿಚಾರದಲ್ಲಿ ಕಿರಿಕಿರಿ,ಸಂತಾನ ಯೋಗ,ಕಷ್ಟ ಬಂದರೂ ದೃಢ ನಿರ್ಧಾರದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುವುದು. ಆರ್ಥಿಕವಾಗಿ ನಿಧಾನವಾಗಿ ಚೇತರಿಕೆ ಕಾಣುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರಕುವುದು. ಚಿಂತೆ ಬೇಡ

ಧನಸ್ಸು: ವ್ಯಾಪಾರದಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಮಾರಾಟ, ಸ್ತ್ರೀಯರಿಗೆ ಅನುಕೂಲ, ನಾನಾ ರೀತಿಯ ಚಿಂತೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣದಿಂದ ತೊಂದರೆ, ಶತ್ರುಗಳ ಬಾಧೆ,
ಹಣಕಾಸಿನ ವಿಚಾರದಲ್ಲಿ ಹಿಡಿತವಿರುವುದು ಮುಖ್ಯ. ವೃತ್ತಿರಂಗದಲ್ಲಿ ಅತಿಯಾಗಿ ಯಾರನ್ನೂ ನಂಬಲು ಹೋಗಬೇಡಿ. ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ಮಕರ: ಆರ್ಥಿಕವಾಗಿ ಚೇತರಿಕೆ ಕಂಡುಬಂದು ವ್ಯವಹಾರದಲ್ಲೂ ಲಾಭ ಗಳಿಸುವಿರಿ. ಉದ್ಯೋಗಿಗಳಿಗೆ ಸ್ಥಾನ ಪಲ್ಲಟವಾಗುವ ಸಾಧ್ಯತೆಯಿದೆ. ದೇಹಾರೋಗ್ಯದ ಬಗ್ಗೆ ಗಮನ ಕೊಡಬೇಕು. ಅನಿರೀಕ್ಷಿತ ಧನಾಗಮನ ಸಾಧ್ಯತೆ,ದೇವತಾ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ತೊಂದರೆ, ರೋಗ ಬಾಧೆ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಪಲ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಇತರರ ಮಾತಿಗೆ ಮರುಳಾಗಬೇಡಿ, ಅಧಿಕವಾದ ಕೋಪ.

ಕುಂಭ: ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಯತ್ನ ಕಾರ್ಯದಲ್ಲಿ ಅನುಕೂಲ, ಚಂಚಲ ಮನಸ್ಸು, ಗೆಳೆಯರಿಗಾಗಿ ಖರ್ಚು, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಏರುಪೇರು, ಕೃಷಿಯಲ್ಲಿ ಅಲ್ಪ ಲಾಭ,ಕೌಟುಂಬಿಕವಾಗಿ ಭಿನ್ನಾಭಿಪ್ರಾಯಗಳು ದೂರವಾಗಿ ನೆಮ್ಮದಿ ಮೂಡಲಿದೆ,ಕಾರ್ಯಗಳನ್ನು ನೆರವೇರಿಸಲು ಓಡಾಟ ನಡೆಸಬೇಕಾಗುತ್ತದೆ. ಖರ್ಚು ವೆಚ್ಚದ ಬಗ್ಗೆ ಕಾಳಜಿ ಅಗತ್ಯ. ದೇವತಾ ಪ್ರಾರ್ಥನೆ ಮಾಡಿ.

ಮೀನ: ಮಾಡುವ ಕೆಲಸದಲ್ಲಿ ವಿಘ್ನ,ಕಾರ್ಯ ಕ್ಷೇತ್ರದಲ್ಲಿ ಕಠಿಣ ಪರಿಶ್ರಮಕ್ಕೆ ತಕ್ಕ ಬೆಲೆಯಿದೆ. ಆರೋಗ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಹಿರಿಯರೊಂದಿಗೆ ವಾಗ್ವಾದವಾಗದಂತೆ ಎಚ್ಚರಿಕೆ ವಹಿಸಿ. ದಿನದಂತ್ಯಕ್ಕೆ ಶುಭ ವಾರ್ತೆಯಿದೆ,ಹಣಕಾಸು ತೊಂದರೆ, ದೇಹದಲ್ಲಿ ಆಲಸ್ಯ, ಆರೋಗ್ಯದಲ್ಲಿ ವ್ಯತ್ಯಾಸ, ಷೇರು ವ್ಯವಹಾರಗಳಲ್ಲಿ ಎಚ್ಚರ, ವಾಹನದಿಂದ ತೊಂದರೆ.

ಲೇಕನ:-ಪಂಡಿತ್ ತಿರುಮಲ ಶರ್ಮ.ಬೆಂಗಳೂರು.
Leave a Reply

Your email address will not be published. Required fields are marked *