ಭದ್ರಾವತಿಯಲ್ಲಿ 144 ಜಾರಿ:ಜೈ ಶ್ರೀರಾಮ್,ಭಾರತ್ ಮಾತಾಕಿ ಜೈ ಎಂದವರ ಮೇಲೆ ಹಲ್ಲೆ ಮಾಡಿದ ಕಾಂಗ್ರೆಸ್ ಶಾಸಕ,ಪುತ್ರರು!

902

ಶಿವಮೊಗ್ಗ :- ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಕಬ್ಬಡಿ ಪಂದ್ಯಾವಳಿಯಲ್ಲಿ ನಡೆದ ಹಲ್ಲೆ ಪ್ರಕರಣ ವಿಕೋಪಕ್ಕೆ ಹೋದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಭದ್ರಾವತಿ ನಗರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ನಾಳೆ ಮಧ್ಯ ರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಇರುವುದಾಗಿ ತಹಶೀಲ್ದಾರ್ ಸಂತೋಷ್ ಕುಮಾರ್ ಆದೇಶದ ನಂತರ ತಿಳಿಸಿದ್ದಾರೆ.

ಘಟನೆ ಏನು ?

ಭದ್ರಾವತಿ ಕನಕ ಮಂಟದ ಆವರಣದಲ್ಲಿ ರಾಜ್ಯ ಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಈ ಪಂದ್ಯದಲ್ಲಿ ಬಿಜೆಪಿ ಕಾರ್ಯಕರ್ತರಿದ್ದ ತಂಡ ರನ್ನರ್ ಅಪ್ ಆಗಿ ಆಯ್ಕೆಯಾಗಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾಕಿ ಜೈ ,ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಜೊತೆ ಪಟಾಕಿ ಸಿಡಿಸಿದ್ದರು. ಇದನ್ನು ಸ್ಥಳದಲ್ಲಿ ಇದ್ದ ಕಾಂಗ್ರೆಸ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದೇ ಸ್ಥಳದಲ್ಲಿದ್ದ ಶಾಸಕ ಸಂಗಮೇಶ್ ,ಪುತ್ರ ಗಣೇಶ್ ,ಬಸವೇಶ್ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದರು.

ಹಲ್ಲೆಯಲ್ಲಿ ಬಿಜೆಪಿಯ ನಾಲ್ಕು ಜನರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಇನ್ನು ಘಟನೆ ಕುರಿತು ಶಾಸಕ ಬಿ.ಕೆ.ಸಂಗಮೇಶ್, ಅವರ ಪುತ್ರರಾದ ಗಣೇಶ್, ಬಸವೇಶ್ ವಿರುದ್ದ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲು ಸಹ ಆಗಿದ್ದು ಇಂದು ಬಿಜೆಪಿ ಕಾಂಗ್ರೆಸ್ ಶಾಸಕ ಪುತ್ರನ ದೌರ್ಜನ್ಯದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.

ಇನ್ನು ಶಾಸಕ,ಮಕ್ಕಳ ವಿರುದ್ದ ದೂರು ದಾಖಲಾದ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ 144 ಜಾರಿ ಮಾಡಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

ಇನ್ನು ಪೂರ್ವ ವಲಯ ಐಜಿಪಿ ಎಸ್ . ರವಿ ಶಿವಮೊಗ್ಗದಲ್ಲಿ ಮೊಕ್ಕಾಂ ಹೂಡಿದ್ದು ಶಾಂತಿ ಭಂಗ ಭಾರದಂತೆ ವ್ಯವಸ್ತೆ ಮಾಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!