16-05-2019 ಇಂದಿನ ದಿನ ಭವಿಷ್ಯ

322

ಮೇಷ:ಈ ದಿನ ಶುಭದಾಯಕವಾಗಿದೆ,ಕೌಟುಂಬಿಕವಾಗಿ ಸಂತೋಷದ ಸಮಯ ನಿಮ್ಮದಾಗಿರುತ್ತದೆ. ಇಷ್ಟ ಪಾತ್ರರೊಂದಿಗೆ ಸುಂದರ ಕ್ಷಣ ಕಳೆಯುವಿರಿ. ಆರ್ಥಿಕವಾಗಿ ಧನಾಗಮನಕ್ಕೆ ಕೊರತೆಯಾಗದು. ಆದರೆ ದಾಯಾದಿಗಳ ಅಸಮಾಧಾನಕ್ಕೆ ಕಾರಣರಾಗುವಿರಿ.ಈ ವಾರ ನಿಮಗೆ ತುಸು ನೆಮ್ಮದಿ ತರಲಿದೆ.

ವೃಷಭ: ಈ ಹಿಂದೆ ಪಟ್ಟ ಕಷ್ಟಗಳು ನಿಧಾನಗತಿಯಲ್ಲಿ ಕಮ್ಮಿಯಾಗುವುದು ,ಸಾಂಸಾರಿಕವಾಗಿ ಮನಸ್ಸಿಗೆ ನೆಮ್ಮದಿ ಇರುತ್ತದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಇರಲಿದೆ.ಆರ್ಥಿಕ ಸ್ಥಿತಿ ಅಲ್ಪ ಏರಿಕೆಯಾಗುವುದು ,ಅಲ್ಪ ಕರ್ಚು ಹೆಚ್ಚಾಗಲಿದೆ.

ಮಿಥುನ: ಅಧಿಕ ಮಾನಸಿಕ ವೇದನೆ ಕಾಡಲಿದೆ, ಕಾರ್ಯ ಕ್ಷೇತ್ರದಲ್ಲಿ ಅಧಿಕ ಕಾರ್ಯದೊತ್ತಡವಿರುತ್ತದೆ. ಇದರಿಂದ ದೇಹಾಯಾಸವಾಗಲಿದೆ. ಮನೆಯಲ್ಲಿ ಶುಭಮಂಗಲ ಕಾರ್ಯ ನಡೆಸಲು ತಯಾರಿ ನಡೆಸುತ್ತೀರಿ. ವ್ಯವಹಾರದಲ್ಲಿ ನಿವ್ವಳ ಲಾಭ ಗಳಿಸುವಿರಿ.ಕರ್ಚು ಅಧಿಕ,ಆರೋಗ್ಯ ಮಧ್ಯಮ.

ಕರ್ಕಟಕ: ಕೆಲಸಕಾರ್ಯಗಳು ನಿಧಾನಗತಿಯಲ್ಲಿ ಸಾಗುವುದು ದೈವಾನುಕೂಲದಿಂದ ಇದುವರೆಗೆ ಕೈಗೆಟುಕದ ಕಾರ್ಯ ಹಂತ ಹಂತವಾಗಿ ನೆರವೇರಲಿದೆ. ಕುಲದೇವರ ದರ್ಶನ ಭಾಗ್ಯ ಸಿಗಲಿದೆ. ಶೀತ ಸಂಬಂಧೀ ಆರೋಗ್ಯ ಸಮಸ್ಯೆ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗುವುದು.ಅಲ್ಪ ನೆಮ್ಮದಿ ಅಲ್ಪ ಕಿರಿಕಿರಿ ದಿನ ನಿಮ್ಮದಾಗಲಿದೆ.

ಸಿಂಹ: ಕೌಟುಂಬಿಕ ಸಮಸ್ಯೆ ಆಗಾಗ ತಲೆದೂರುವುದು,ಮಾನಸಿಕ ನೆಮ್ಮದಿ ಇರುವುದಿಲ್ಲ , ದಾಯಾದಿಗಳೊಂದಿಗೆ ಮುನಿಸು ಮರೆತು ಸಂಧಾನಕ್ಕೆ ಮುಂದಾಗುವಿರಿ. ಶುಭ ಕಾರ್ಯಕ್ಕೆ ಸಹಕಾರಿಯಾಗುವಿರಿ, ಅನಿರೀಕ್ಷಿತವಾಗಿ ಬಂಧು ಮಿತ್ರರ ಆಗಮನವಾಗಲಿದೆ. ಕೌಟುಂಬಿಕವಾಗಿ ಕೆಲವೊಂದು ಜವಾಬ್ಧಾರಿ ಹೊರಬೇಕಾಗುತ್ತದೆ. ಅನಿರೀಕ್ಷಿತ ಖರ್ಚುಗಳಿಗೆ ಸಿದ್ಧರಾಗಿ.

ಕನ್ಯಾ: ಮಾನಸಿಕ ನೆಮ್ಮದಿ ಇದ್ದರೂ ಆರ್ಥಿಕ ಸ್ಥಿತಿ ಬದಲಾಗಲಿದೆ,ಹಣದ ಕರ್ಚು ಅಧಿಕವಾಗಲಿದೆ,ವ್ಯಾಪಾರಿ ವರ್ಗದವರು ವಂಚನೆಗೊಳಗಾದಂತೆ ಎಚ್ಚರಿಕೆ ವಹಿಸಬೇಕು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಯಾಗಬಹುದು. ಆದರೆ ಸಾಲಗಾರರು ಹಣ ಮರುಪಾವತಿ ಮಾಡುತ್ತಾರೆ. ದಿನದಂತ್ಯಕ್ಕೆ ಶುಭ ಸುದ್ದಿಯಿದೆ.ಆರೋಗ್ಯ ಉತ್ತಮವಿರುವುದು,ಆದರೂ ಆಲಸ್ಯ ನಿಮ್ಮನ್ನು ಕಾಡಲಿದೆ.

ತುಲಾ: ಈ ದಿನ ಮಿಶ್ರ ಫಲ ಅನುಭವಿಸುವಿರಿ, ಅವಿವಾಹಿತರ ವಿವಾಹ ಪ್ರಯತ್ನಕ್ಕೆ ಕೊಂಚ ಹಿನ್ನಡೆಯಾದೀತು. ಸಹಣ ಖರ್ಚು ಮಾಡಬೇಕಾಗುತ್ತದೆ. ಖರ್ಚು ವೆಚ್ಚಗಳ ಬಗ್ಗೆ ಹಿಡಿತವಿರಲಿ. ಭೂ, ಗೃಹ ಖರೀದಿಗೆ ಮುಂದಾಗುವಿರಿ.ವ್ಯವಹಾರದಲ್ಲಿ ಮಧ್ಯಮ ಫಲ,ಆರೋಗ್ಯ ಉತ್ತಮ.

ವೃಶ್ಚಿಕ: ದೈಹಿಕ ಆಲಸ್ಯ ಕಾಡುತ್ತದೆ, ಆಗಾಗ ಖರ್ಚು ವೆಚ್ಚಗಳು ಅಧಿಕವಾಗಲಿದೆ. ನೌಕರ ವರ್ಗಕ್ಕೆ ಉದ್ಯೋಗದಲ್ಲಿ ವರ್ಗಾವಣೆ, ಬದಲಾವಣೆಯಾಗಬಹುದು. ಕೃಷಿಕರಿಗೆ ನಿವ್ವಳ ಲಾಭಾಗುವುದು. ಶುಭಮಂಗಲ ಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ.

ಧನು: ನೀವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಅನುಭವಿಸಬೇಕಾದೀತು. ಗೃಹ ಸಂಬಂಧೀ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಉದ್ಯೋಗ ನಿಮಿತ್ತ ದೂರ ಸಂಚಾರ ಮಾಡಬೇಕಾಗುತ್ತದೆ.

ಮಕರ: ವಿವಾಹ ಸಂಬಂಧೀ ಮಾತುಕತೆಗಳಲ್ಲಿ ಆಸಕ್ತಿ ತೋರುವಿರಿ. ಹೊಸ ವ್ಯವಹಾರಗಳಿಗೆ ಕೈ ಹಾಕುವುದಿದ್ದರೆ ಕೂಲಂಕುಷವಾಗಿ ಚಿಂತನೆ ಮಾಡುವುದು ಒಳ್ಳೆಯದು. ಆರೋಗ್ಯದಲ್ಲಿ ಏರುಪೇರಾಗಬಹುದು.

ಕುಂಭ: ಮನೆ ಮಾಲಿಕರಿಂದ ಕಿರಿ ಕಿರಿಯಾಗಬಹುದು. ಮನೆ ಬದಲಾವಣೆ ಬಗ್ಗೆ ಚಿಂತನೆ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳು ನಿಮ್ಮ ಏಳಿಗೆಗೆ ಅಸೂಯೆ ಪಡಬಹುದು. ದೈವತಾ ಪ್ರಾರ್ಥನೆಯಿಂದ ಎಲ್ಲವೂ ಶುಭವಾಗುತ್ತದೆ.

ಮೀನ: ಮಹಿಳೆಯರಿಂದ ಅಪವಾದದ ಭೀತಿಯಿದೆ. ಅನಗತ್ಯ ವಿಚಾರಗಳಿಗೆ ಮೂಗು ತೂರಿಸಲು ಹೋಗಬೇಡಿ. ಹೆಚ್ಚಿನ ಹಣ ಸಂಪಾದನೆಗೆ ನಾನಾ ಮಾರ್ಗ ಹುಡುಕುವಿರಿ. ಉದ್ಯೋಗ ಕ್ಷೇತ್ರದಲ್ಲಿ ಮುನ್ನಡೆ ಸಿಗಲಿದೆ.ಆರೋಗ್ಯ ಮಧ್ಯಮ.

“ಯಾರಿಗೆ ಲಾಭ ಯಾರಿಗೆ ನಷ್ಟ”

ಕರಾವಳಿ ಭಾಗದಲ್ಲಿರುವ ವಾಣಿಜ್ಯ ವ್ಯಾಪಾರಿಗಳು ಅವರ ರಾಶಿ ಹಾಗೂ ಜನ್ಮ ದಿನಗಣುಗುಣವಾಗಿ ಲಾಭ ಹೊಂದುತ್ತಾರೆ , ಮೀನುಗಾರರಿಗೆ ಸಂಕಷ್ಟದ ದಿನ ಎದುರಾಗಲಿದೆ,ಹೋಟಲ್ ಉದ್ಯಮಿಗಳು ಆರ್ಥಿಕ ಅಭಿವೃದ್ಧಿ ಹೊಂದಲಿದ್ದಾರೆ.ಕೃಷಿಕರಿಗೆ ಮಧ್ಯಮ ಫಲ.

ಇನ್ನು ಮಲೆನಾಡು ಬಯಲುಸೀಮೆ ಪ್ರದೇಶದ ಜನರ ರಾಶಿಗಳಿಗನುಗುಣವಾಗಿ ಮಿಶ್ರ ಫಲಗಳು ಇದ್ದು ವ್ಯಾಪಾರಿಗಳು ಲಾಭ ನಷ್ಟಗಳೆರಡನ್ನೂ ಹೊಂದುವರು, ವ್ಯಾಪಾರಿಗಳಿಗೆ ಮಿಶ್ರ ಫಲ ಆರ್ಥಿಕ ಏರಿಳಿತವಿದೆ. ಕೃಷಿಕರಿಗೆ ವಾಣಿಜ್ಯ ಬೆಳೆಗಳಿಂದ ಲಾಭ ಸಿಗಲಿದೆ,ಬಂಗಾರ ಕೆಲಸಗಾರರು ಅಲ್ಪ ನಷ್ಟ ಅನುಭವಿಸುವರು,ವಾಹನ ಉದ್ಯಮಿಗಳಿಗೆ ಅಲ್ಪ ಆರ್ಥಿಕ ಪ್ರಗತಿ ಕಾಣಲಿದೆ.

ಹೋಟೆಲ್ ಉದ್ಯಮದವರು ಸ್ಥಿರ ಆರ್ಥಿಕ ಪ್ರಗತಿ ಇರಲಿದೆ.ಛಾಯಾಗ್ರಾಹಕ ವೃತ್ತಿಯವರಿಗೆ ಪ್ರಗತಿ.
ಲೇಖನ :- ಜ್ಯೋತಿಷ್ಯ ವಿದ್ವಾನ್ ತಿರುಮಲ ಶರ್ಮ ,ಬೆಂಗಳೂರು.

  • ನಿಮ್ಮ ಸಮಸ್ಯೆಗಳಿಗೆ ಉಚಿತ ಪರಿಹಾರ ಪಡೆಯಬಹುದು . ಈ ಕೆಳಗಿನ ಮೇಲ್ ಗೆ ನಿಮ್ಮ ರಾಶಿ ,ಜನ್ಮ ದಿನಾಂಕ ,ಜನ್ಮ ಸಮಯಯವನ್ನು ಬರೆದು ಸಮಸ್ಯೆ ಅಥವಾ ಜ್ಯೋತಿಷ್ಯ ಪ್ರಶ್ನೆಗಳನ್ನು ಕೇಳಬಹುದು.ಕಡ್ಡಾಯವಾಗಿ ಕನ್ನಡದಲ್ಲಿ ಬರೆದು ಕಳುಹಿಸತಕ್ಕದ್ದು .

Kannadavaninewsportal@gmail.com
Leave a Reply

Your email address will not be published. Required fields are marked *

error: Content is protected !!