add

16-11-2020 ಇಂದಿನ ದಿನ ಭವಿಷ್ಯ.

476

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ವಾರ: ಸೋಮವಾರ, ತಿಥಿ: ದ್ವಿತೀಯ,
ನಕ್ಷತ್ರ: ಅನುರಾಧ,
ರಾಹುಕಾಲ:7.44 ರಿಂದ 9.14
ಗುಳಿಕಕಾಲ:1.35 ರಿಂದ 3.02
ಯಮಗಂಡಕಾಲ:10.41 ರಿಂದ 12.08

ಮೇಷರಾಶಿ
ಸಂಚಾರದಲ್ಲಿ ಜಾಗೃತೆವಹಿಸಿ, ಉದ್ಯೋಗದಲ್ಲಿ ಬಡ್ತಿ, ಆರೋಗ್ಯದಲ್ಲಿ ಚೇತರಿಕೆ, ಅನ್ಯರಿಗೆ ಉಪಕಾರ ಮಾಡುವಿರಿ, ಋಣ ವಿಮೋಚನೆ, ದ್ರವ್ಯಲಾಭ, ಕಾರ್ಯಕ್ಷೇತ್ರದಲ್ಲಿ ಅದೃಷ್ಟದ ದಿನ, ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ವೃಷಭರಾಶಿ
ದೂರ ಸಂಚಾರ ಲಾಭವನ್ನು ತರಲಿದೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ಮಾತಾ-ಪಿತರಲ್ಲಿ ಪ್ರೀತಿ, ಪತಿ-ಪತ್ನಿಯರಲ್ಲಿ ಪ್ರೀತಿ ಸಮಾಗಮ, ಶೀತ ಸಂಬಂಧ ರೋಗಗಳು, ಶತ್ರು ನಾಶ.

ಮಿಥುನರಾಶಿ
ಸ್ನೇಹಿತರಿಂದ ಸಹಾಯ, ಅನೇಕ ಜನರಿಗೆ ವಿವಾಹಯೋಗ, ಮನಸ್ಸಿನಲ್ಲಿ ಭಯ ಭೀತಿ, ಸ್ತ್ರೀ ಲಾಭ, ಆರ್ಥಿಕವಾಗಿ ಅನುಕೂಲವನ್ನು ತರಲಿದೆ, ವಿದ್ಯಾರ್ಥಿಗಳಿಗೆ ಉತ್ತಮ ದಿನ, ದೂರದ ಬಂಧುಗಳಿಂದ ಸಂತಸ.

ಕಟಕರಾಶಿ
ವ್ಯವಹಾರ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ, ಜೀವನವನ್ನು ಇದ್ದಹಾಗೆಯೇ ಅನುಭವಿಸಿ, ದೃಷ್ಟಿ ದೋಷದಿಂದ ತೊಂದರೆ, ದೂರ ಪ್ರಯಾಣ, ಇಷ್ಟ ವಸ್ತುಗಳ ಖರೀದಿ, ಸಲ್ಲದ ಅಪವಾದ.

ಸಿಂಹರಾಶಿ
ಕುಟುಂಬದಲ್ಲಿ ಅನಾರೋಗ್ಯ ಬಗ್ಗೆ ಹೆಚ್ಚಿನ ಕಾಳಜಿವಹಿಸಿ, ಭಾವೋದ್ವೇಗದಿಂದ ಆದಷ್ಟು ದೂರವಿರುವುದು ಉತ್ತಮ, ಕಾರ್ಯಕ್ಷೇತ್ರದಲ್ಲಿ ಅನುಕೂಲ, ಅಧಿಕ ತಿರುಗಾಟ, ವಿನಾಕಾರಣ ಯೋಚನೆ ಮಾಡುವಿರಿ, ಸ್ತ್ರೀ ಲಾಭ, ಸರ್ಕಾರಿ ಕೆಲಸಗಳಲ್ಲಿ ಜಯ, ಉದ್ಯಮಿಗಳಿಗೆ ಸುದಿನ.

ಕನ್ಯಾರಾಶಿ
ಅನಿರೀಕ್ಷಿತ ಘಟನೆಗಳು ಅಚ್ಚರಿಯನ್ನು ತರಲಿದೆ, ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ, ವ್ಯಾಪಾರದಲ್ಲಿ ಲಾಭ, ಸಹೋದರರಿಂದ ಸಹಾಯ, ನೆಮ್ಮದಿ ಇಲ್ಲದ ಜೀವನ, ಮನಸ್ಸಿನಲ್ಲಿ ಗೊಂದಲ.

ತುಲಾರಾಶಿ
ಯಾರನ್ನು ಹೆಚ್ಚಾಗಿ ನಂಬಬೇಡಿ, ಅನಿರೀಕ್ಷಿತ ದ್ರವ್ಯಲಾಭ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ಯೋಗ್ಯತೆಯ ಆಧಾರದಲ್ಲಿ ಫಲಾಪೇಕ್ಷೆ, ಹಲವು ಘಟನೆಗಳಿಂದ ಚಂಚಲ ಮನಸ್ಸು, ದೃಢ ನಿರ್ಧಾರವನ್ನು ಕೈಗೊಳ್ಳಿ.

ವೃಶ್ಚಿಕರಾಶಿ
ಅಪರಿಚಿತರಿಂದ ಕಲಹ, ಅನಾರೋಗ್ಯ, ಮಾತಿನ ಮೇಲೆ ಹಿಡಿತವಿರಲಿ, ಉದ್ಯೋಗ ಹೀನರಿಗೆ ಉದ್ಯೋಗ ಲಾಭ, ಅವಿವಾಹಿತರಿಗೆ ಕಂಕಣ ಬಲ, ಕುಟುಂಬದಲ್ಲಿ ಉತ್ತಮ ಅಭಿವೃದ್ದಿ, ಮಹಿಳೆಯರಿಗೆ ವಿಶೇಷ ಲಾಭ.

ಧನಸ್ಸುರಾಶಿ
ಸ್ನೇಹಿತರಿಂದ ಸಹಕಾರ, ಉದ್ಯೋಗ ರಂಗದಲ್ಲಿ ಅನುಕೂಲ, ಸಮಸ್ಯೆಗಳು ಮಾನಸಿಕ ದೃಢತೆಯನ್ನು ಕುಗ್ಗಿಸುತ್ತದೆ, ಕುಟುಂಬದ ಹೊರೆ ಹೆಚ್ಚಾಗುವುದು, ಅನ್ಯರಲ್ಲಿ ವೈಮನಸ್ಸು, ಶತ್ರು ಬಾಧೆ, ಎಷ್ಟೇ ಹಣ ಬಂದರೂ ಸಾಕಾಗುವುದಿಲ್ಲ.

ಮಕರರಾಶಿ
ಸ್ವಆರೋಗ್ಯದಲ್ಲಿ ಏರುಪೇರಾಗಲಿದೆ, ಕಾರ್ಯರಂಗದಲ್ಲಿ ಸಮಸ್ಯೆ ತಪ್ಪದು, ಸ್ವಯಂಕೃತ ಕಾರ್ಯದಿಂದ ಕೆಟ್ಟ ಮಾತು ಕೇಳಿಬರಲಿದೆ, ಯಂಕೃತ ಅಪರಾಧ, ವಿಪರೀತ ಹಣವ್ಯಯ, ಅನಾರೋಗ್ಯ, ಅತಿಯಾದ ನಿದ್ರೆ, ಅಪರಿಚಿತರಿಂದ ಕಲಹ ಎಚ್ಚರ.

ಕುಂಭರಾಶಿ
ಆತ್ಮವಿಶ್ವಾಸ ಪ್ರಯತ್ನಬಲದಿಂದ ಲಾಭ, ಹೊಸ ವ್ಯವಹಾರದಲ್ಲಿ ಆಸಕ್ತಿ, ಪ್ರಿಯ ಜನರ ಭೇಟಿ, ಸ್ತ್ರೀ ಸೌಖ್ಯ, ಆಂತರಿಕ ಕಲಹ, ಮನೋವ್ಯಥೆ, ಆಪ್ತರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ.

ಮೀನರಾಶಿ
ಸಂಚಾರದಲ್ಲಿ ಹೆಚ್ಚಿನ ಗಮನಹರಿಸಿ, ವಿದ್ಯಾರ್ಥಿಗಳಿಗೆ ತಕ್ಕ ಮಟ್ಟಿನ ಫಲ, ಅನಾವಶ್ಯಕ ಚಿಂತೆ ನಿಮ್ಮನ್ನು ಕಾಡಲಿದೆ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ತೀರ್ಥಯಾತ್ರೆ, ದೂರ ಪ್ರಯಾಣ, ವಾಸ ಗೃಹದಲ್ಲಿ ತೊಂದರೆ, ಮನಸ್ತಾಪ.

ಸುದ್ದಿ ಮತ್ತು ಜಾಹಿರಾತಿಗೆ ಸಂಪರ್ಕಿಸಿ:- 9741058799.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ