ಭಾನುವಾರದ ದಿನ ಭವಿಷ್ಯ! ಯಾವ ರಾಶಿಗೆ ಲಾಭ-ನಷ್ಟ ತಿಳಿಯಿರಿ

294

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ಪಾಡ್ಯ ತಿಥಿ,
ಭಾನುವಾರ, ಅನುರಾಧ ನಕ್ಷತ್ರ

ರಾಹುಕಾಲ: ಸಂಜೆ 5:06 ರಿಂದ 6:41
ಗುಳಿಕಕಾಲ: ಮಧ್ಯಾಹ್ನ 3:30 ರಿಂದ 5:05
ಯಮಗಂಡಕಾಲ: ಮಧ್ಯಾಹ್ನ 12:19 ರಿಂದ 1:55

ಮೇಷ: ಇಂದಿನಿಂದ ನಿಮ್ಮ ರಾಶಿಯಲ್ಲಿ ಮಿಶ್ರ ಫಲ ಕಾಣುತ್ತೀರ ಕೆಲಸ ಕಾರ್ಯಗಳಲ್ಲಿ ಹೆಚ್ಚಿದ ಏಕಾಗ್ರತೆ ವಹಿಸಿ, ದಾಂಪತ್ಯದಲ್ಲಿ ಪ್ರೀತಿ, ವೈಯುಕ್ತಿಕ ಕಾರ್ಯಗಳಲ್ಲಿ ಯಶಸ್ಸು, ದುಷ್ಟರಿಂದ ದೂರವಿರಿ, ಶತ್ರುಗಳ ಬಾಧೆ, ಮನಃಕ್ಲೇಷ ಕಾಣಲಿದೆ, ಆರೋಗ್ಯ ಉತ್ತಮ ,ಆರ್ಥಿಕ ಹರಿವು ಮಧ್ಯಮ.

ವೃಷಭ: ಈ ದಿನ ನಿಮಗೆ ಮನಸ್ಸಿನಲ್ಲಿ ಗೊಂದಲ , ತಳಮಳ ಇದ್ದರೂ ,ಅಲ್ಪ ನೆಮ್ಮದಿ ಕಾಣುವಿರಿ,ಅಧಿಕ ತಿರುಗಾಟ, ಹಳೇ ಸಾಲ ಮರುಪಾವತಿ, ಮಿತ್ರರ ಭೇಟಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಕಾಲ ಭೋಜನ, ಆಕಸ್ಮಿಕ ಖರ್ಚು ನಿಮ್ಮನ್ನು ಕಾಡುತ್ತದೆ.ಆರೋಗ್ಯ ದಲ್ಲಿ ಅಲ್ಪ ಬದಲಾವಣೆ ಇರಲಿದೆ.

ಮಿಥುನ: ಸ್ನೇಹಿತರೇ ಬೆನ್ನಿಗೆ ಚೂರಿ ಹಾಕಲಿದ್ದಾರೆ,ಜಾಗೃತರಾಗಿರಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ತಾಳ್ಮೆಯಿಂದ ವರ್ತಿಸುವುದು ಉತ್ತಮ, ಟ್ರಾವೆಲ್ಸ್‍ನವರಿಗೆ ಅನುಕೂಲ, ಪ್ರಭಾವಿ ವ್ಯಕ್ತಿಗಳ ಭೇಟಿ, ಸಹೋದರರಿಂದ ಸಹಾಯ, ಯಾರನ್ನೂ ಹೆಚ್ಚು ನಂಬಬೇಡಿ, ಆರ್ಥಿಕ ಸ್ಥಿತಿ ಏರಿಳಿತ ಕಾಣಲಿದೆ, ಆರೋಗ್ಯ ಸ್ಥಿರವಾಗಿದ್ದು ವಾಯು ಬಾದೆ ಕಾಡಲಿದೆ.

ಕಟಕ: ಇಂದಿನಿಂದ ಹಣದ ಕರ್ಚು ಅಧಿಕವಾಗಲಿದೆ , ಆರೋಗ್ಯದಲ್ಲಿ ಆಗಾಗ ವ್ಯತ್ಯಾಸ ಕಾಣುವ ಸಾಧ್ಯತೆಗಳಿವೆ, ಆಲಸ್ಯ ಮನೋಭಾವ, ಶತ್ರುಗಳ ಏನೇ ತೊಂದರೆ ಕೊಟ್ಟರೂ ಅದರಿಂದ ಗೆಲುವು ಕಾಣುವಿರಿ,ಅತಿಯಾದ ಕೋಪ, ಎಲ್ಲರ ಮನಸ್ಸು ಗೆಲ್ಲುವಿರಿ, ದಾಂಪತ್ಯದಲ್ಲಿ ವಿರಸ, ದೂರ ಪ್ರಯಾಣ ಇರಲಿದೆ,ಆರ್ಥಿಕ ನಷ್ಟ ವನ್ನು ಹಂತ ಹಂತವಾಗಿ ಅನುಭವಿಸುವಿರಿ.

ಸಿಂಹ: ನಿಮ್ಮ ಅಧಿಕ ಪ್ರಸಂಗತನ ನಿಮಗೆ ಮುಳುವಾಗಲಿದೆ,ಯಾರೂ ನಿಮ್ಮನ್ನು ನಂಬದ ಸ್ಥಿತಿ ಈಗಿನದ್ದಾಗಿದೆ,ಸಹೋದ್ಯೋಗಿಗಳ ಜೊತೆ ಸ್ನೇಹದಿಂತ ವರ್ತಿಸಿ, ಆರೋಗ್ಯದಲ್ಲಿ ಚೇತರಿಕೆ, ಗುರಿ ಸಾಧನೆಯತ್ತ ಪರಿಶ್ರಮ, ಮಾನಸಿಕ ನೆಮ್ಮದಿ ಅಲ್ಪ ದೊರೆಯಲಿದೆ,ಕುಟುಂಬ ಸೌಖ್ಯ , ಕೆಲಸ ಕಾರ್ಯಗಳಲ್ಲಿ ಯಶಸ್ಸು, ಈ ದಿನ ದಿಂದ ನೀವು ಅಲ್ಪ ಶುಭ ಫಲ ಅನುಭವಿಸುವಿರಿ.

ಕನ್ಯಾ: ಇಂದಿನ ದಿನ ಮಧ್ಯಮ ಶುಭಫಲ ನೀಡಲಿದೆ, ಹಣ ವಿಫರೀತ ಕರ್ಚು ಮಾಡುವುದಕ್ಕೆ ಕಡಿವಾಣ ಹಾಕಿ , ಕೈ ಬರಿದಾಗುವುದು,ದೇಹಾಲಸ್ಯ ,ವಾಯುಬಾದೆ ಕಾಡುತ್ತದೆ,ನಾನಾ ವಿಚಾರಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಆಗಾಗ ಅಶಾಂತಿ, ದಿನದ ಮಧ್ಯಭಾಗದಲ್ಲಿ ಧನಾಗಮನ, ವಸ್ತ್ರ ವ್ಯಾಪಾರಿಗಳಿಗೆ ಲಾಭ, ಖರ್ಚು, ದೂರ ಪ್ರಯಾಣ, ಶತ್ರುಗಳ ಬಾಧೆ ಕಾಡಲಿದೆ, ಉಳಿದಂತೆ ಈ ದಿನ ವಿಶ್ರ ಫಲ ಅನುಭವಿಸುವಿರಿ.

ತುಲಾ: ಈ ದಿನ ದಿಂದ ಒಂದು ವಾರ ನಿಮಗೆ ಪ್ರಗತಿ ಕುಂಟಿತವಾಗಲಿದೆ,ಹಿತ ಶತ್ರುಗಳು ಕಾಡಲಿದ್ದಾರೆ, ಎಚ್ಚರಿಕೆಯಿಂದ ಕೆಲಸಕಾರ್ಯ ಪ್ರಾರಂಭಿಸಿ ,ವಾಸ ಗೃಹದಲ್ಲಿ ತೊಂದರೆ, ಅಧಿಕ ತಿರುಗಾಟ, ತೀರ್ಥಯಾತ್ರೆ ದರ್ಶನ, ನೆಮ್ಮದಿ ಇಲ್ಲದ ಜೀವನ, ಉದ್ಯೋಗಸ್ಥರಿಗೆ ಅಧಿಕ ಒತ್ತಡ, ಮಾಡುವ ಕೆಲಸದಲ್ಲಿ ಹಿನ್ನಡೆ ಮುಂತಾದ ಮಿಶ್ರ ಫಲ ಕಾಣುವಿರಿ, ಆರೋಗ್ಯ ಮಧ್ಯಮ ಇರಲಿದೆ.

ವೃಶ್ಚಿಕ: ಹಣದ ಕರ್ಚು ವಿಪರೀತವಾಗಲಿದೆ,ಸ್ವಯಂಕೃತ ಅಪರಾಧಗಳಿಂದ ನಷ್ಟ ಹೊಂದುವಿರಿ,ಅನ್ಯರಲ್ಲಿ ವೈಮನಸ್ಸು, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ, ಕುಟುಂಬದಲ್ಲಿ ಹೊರೆ ಹೆಚ್ಚಾಗುವುದು, ಆರೋಗ್ಯದಲ್ಲಿ ವ್ಯತ್ಯಾಸ ಮುಂತಾದ ಮಿಶ್ರಫಲ ವಿದೆ.

ಧನಸ್ಸು: ಆತ್ಮೀಯರೊಂದಿಗೆ ಸಂಕಷ್ಟ ಹೇಳಿಕೊಳ್ಳುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಶತ್ರುಗಳ ನಾಶ, ಸ್ತ್ರೀಯರಿಗೆ ಅನುಕೂಲ, ಆಂತರಿಕ ಕಲಹ, ಪ್ರಿಯ ಜನರ ಭೇಟಿ, ಉದ್ಯೋಗದಲ್ಲಿ ಪ್ರಗತಿ, ಸುಖ ಬೋಜನ ಪ್ರಾಪ್ತಿ.

ಮಕರ: ಇತರರ ಮಾತಿನಿಂದ ಕಲಹ, ಈ ವಾರದಲ್ಲಿ ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಹಿರಿಯರಲ್ಲಿ ಭಕ್ತಿ, ಸಣ್ಣ ವಿಚಾರಗಳಿಂದ ಮನಃಸ್ತಾಪ, ಮಾತಿನ ಚಕಮಕಿ, ಆರೋಗ್ಯದಲ್ಲಿ ಏರುಪೇರು, ಹಣದ ಕರ್ಚು ,ಇಡೀ ದಿನ ಮಿಶ್ರ ಫಲ ನಿಮ್ಮದಾಗಲಿದೆ.

ಕುಂಭ: ಮಹಿಳೆಯರಿಗೆ ವಿಶೇಷವಾದ ಲಾಭ, ವಿಪರೀತ ಖರ್ಚು, ಮಾತಿನ ಮೇಲೆ ಹಿಡಿತ ಅಗತ್ಯ, ಸ್ವಂತ ಪರಿಶ್ರಮದಿಂದ ಅಭಿವೃದ್ಧಿ, ಅಮೂಲ್ಯ ವಸ್ತುಗಳ ಖರೀದಿ, ಮಾನಸಿಕ ನೆಮ್ಮದಿ.

ಮೀನ: ಈ ವಾರದ ಅಂತ್ಯದೊಳಗೆ ಭೂ ಲಾಭ ಪಡೆಯಲಿದ್ದೀರಿ, ವಾಹನ ಖರೀದಿ ಯೋಗ, ರಾಜಕಾರಣಿಗಳೊಂದಿಗೆ ಕಲಹ, ಗೊಂದಲದ ವಾತಾವರಣ, ದಾನ-ಧರ್ಮದಲ್ಲಿ ಆಸಕ್ತಿ, ಕಾರ್ಯಗಳಲ್ಲಿ ವಿಳಂಬ, ಚಂಚಲ ಮನಸ್ಸು, ಋಣ ಬಾಧೆ,ಆರೋಗ್ಯ ಆಗಾಗ ಬದಲಾವಣೆ ,ದೇಹಾಲಸ್ಯ ಕಾಡುತ್ತದೆ.

ಈ ವಾರ ಯಾವ ವೃತ್ತಿಯವರಿಗೆ ನಷ್ಟ ಲಾಭ!
ನಿಮ್ಮ ರಾಶಿಗಣುಗುಣವಾಗಿ ಈ ಕೆಳಗಿನ ವೃತ್ತಿಯವರಿಗೆ ಈ ವಾರವಿಡೀ ಮಧ್ಯಮ ಫಲವಿರುವುದು.
ತಾಂತ್ರಿಕ ವಿಭಾಗ , ವಾಹನ ಚಾಲಕರು, ಸರ್ಕಾರಿ ,ಅರೆ ಸರ್ಕಾರಿ ನೌಕರರು,ವಾಣಿಜ್ಯ ವ್ಯಾಪಾರಿಗಳು ಮಿಶ್ರಫಲ ಹೊಂದಿದ್ದಾರೆ.
ಇವರಿಗೆ ಒತ್ತಡ ಹೆಚ್ಚು ಲಾಭ ಅಲ್ಪ,ಕುಟುಂಬದಿಂದ ಹಾನಿ, ದೂರ ಸಂಚಾರದಿಂದ ನಷ್ಟ , ಆಗಾಗ ಹಣದ ಕರ್ಚು ಹೆಚ್ಚು ಈ ವಾರವಿಡೀ ಮಿಶ್ರ ಫಲ ಕಾಣುವಿರಿ.
ಮೀನುಗಾರ ವೃತ್ತಿ ,ಸಾಪ್ಟವೇರ್ ,ರೈತರು ಹಾನಿ ಅನುಭವಿಸುವರು ,ಇವರಿಗೆ ಈ ವಾರವಿಡೀ ನಷ್ಟವೇ ಹೆಚ್ಚು ಲಾಭ ಅಲ್ಪ .
ಬಂಗಾರ ಕೆಲಸಗಾರರು,ನೇಕಾರರು ಹಾಗೂ ಇದಕ್ಕೆ ಸಂಬಂಧಿಸಿದ ವ್ಯಾಪಾರಿಗಳು, ಹೋಟಲ್ ಉದ್ಯಮದವರು,ಜಿನಸಿ ವ್ಯಾಪಾರಿಗಳು , ಮೀನಿನ ವ್ಯಾಪಾರಿಗಳು ಲಾಭ ಹೊಂದುತ್ತಾರೆ.

ಲೇಖನ-ವಿದ್ವಾನ್ ತಿರುಮಲ ಶರ್ಮ,ಬೆಂಗಳೂರು.

ನಿಮ್ಮ ಸಮಸ್ಯೆ ಗಳಿಗೆ ಉಚಿತ ಪರಿಹಾರ ಪಡೆಯಲು ನಿಮ್ಮ ರಾಶಿ, ಜನ್ಮದಿನಾಂಕದೊಂದಿಗೆ Kannadavaninewsportel@gmail.com ಗೆ ಮೇಲ್ ಮಾಡಿ
Leave a Reply

Your email address will not be published. Required fields are marked *

error: Content is protected !!