ಮೋದಿ ಬಜೆಟ್ ಹೈಲೆಟ್ಸ್!

320

* ರೈತರ ನೆರವಿಗಾಗಿ ೭೫ ಸಾವಿರ ಕೋಟಿ ಮೊತ್ತದ ಯೋಜನೆ. ದೇಶದ ೧೨ ಕೋಟಿ ರೈತರಿಗೆ ಈ ಯೋಜನೆಯ ಲಾಭ

* ೨ ಹೆಕ್ಟೇರ್‌ಗಿಂತ ಕಡಿಮೆ ಜಮೀನು ಹೋದಿರುವ ರೈತರಿಗೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸೌಲಭ್ಯ

* ೨ ಹೆಕ್ಟೇರಿ ಭೂಮಿ ಇರುವ ರೈತರಿಗೆ ವರ್ಷಕ್ಕೆ ೬ ಸಾವಿರ ಪ್ರೋತ್ಸಾಹ ಧನ – ೩ ಕಂತುಗಳಲ್ಲಿ ನೇರವಾಗಿ ರೈತರ ಅಕೌಂಟ್‌ಗೆ ನಗದು ವರ್ಗಾವಣೆ

* ರಾಷ್ಟ್ರೀಯ ಕಾಮಧೇನು ಯೋಜನೆಯಡಿ ಗೋ ತಳಿಗಳ ಅಭಿವೃದ್ಧಿಗೆ ಕ್ರಮ

* ರೈತರ ಸಾಲಗಳ ಮೇಲೆ ಶೇ.೨ರಷ್ಟು ಬಡ್ಡಿ ವಿನಾಯಿತಿ

* ರಕ್ಷಣಾ ಬಜೆಟ್ ೩ ಲಕ್ಷ ಕೋಟಿಗೆ ಹೆಚ್ಚಳ – ಅಗತ್ಯ ಬಿದ್ದರೆ ಮತ್ತಷ್ಟು ಅನುದಾನ

* ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿಗೆ ಒತ್ತು

* ಮುದ್ರಾ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ
* ೧೫.೬ ಲಕ್ಷ ಕೋಟಿ ಸಾಲ ಮುದ್ರಾ ಯೋಜನೆಯಡಿ ಹಂಚಿಕೆ

* ಉಜ್ವಲ್ ಯೋಜನೆಯಡಿ ೮ ಕೋಟಿಯಷ್ಟು ಉಚಿತ ಗ್ಯಾಸ್ ಸಂಪರ್ಕ ಗುರಿ

* ಗ್ರಾಮ ಸಡಕ್ ಯೋಜನೆಗೆ ೧೯ ಸಾವಿರ ಕೋಟಿ ಹಣ
* ನರೇಗಾ ಯೋಜನೆಗೆ ೬೦ ಸಾವಿರ ಕೋಟಿ ಮೀಸಲು
* ೫ ವರ್ಷಗಳಲ್ಲಿ ೧ ಲಕ್ಷ ಡಿಜಿಟಲ್ ಗ್ರಾಮಗಳ ನಿರ್ಮಾಣ

* ಕಾರ್ಮಿಕ ಪಿಂಚಿಣಿ ಪ್ರಮಾಣದಲ್ಲಿ ಏರಿಕೆ
* ಗ್ರಾಚ್ಯುಟಿ ಮೊತ್ತ ೧೦ ಲಕ್ಷದಿಂದ ೨೦ ಲಕ್ಷಕ್ಕೆ ಏರಿಕೆ
* ಕೆಲಸ ವೇಳೆ ಕಾರ್ಮಿಕ ಮೃತಪಟ್ಟರೆ ೬ ಲಕ್ಷದ ವರೆಗೆ ಪರಿಹಾರ

* ಉದ್ಯೋಗ ಖಾತ್ರಿ ಯೋಜನೆಗೆ ೬೦ ಸಾವಿರ ಕೋಟಿ ಮೀಸಲು, ಅಗತ್ಯ ಎನಿಸಿದರೆ ಮೊತ್ತ ಇನ್ನಷ್ಟ ಹೆಚ್ಚಳ
* ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್’ ಪಿಂಚಣಿ ಯೋಜನೆಯಡಿ ಅಸಂಘಟಿತ ವಲಯದ ನೌಕರರಿಗೆ ೬೦ ವರ್ಷಗಳ ಬಳಿಕ ತಿಂಗಳಿಗೆ ೩ ಸಾವಿರ ಪಿಂಚಣಿ ವ್ಯವಸ್ಥೆ

* ಸಿನಿಮಾ ಚಿತ್ರೀಕರಣ ಅನುಮತಿಗೆ ಏಕ ಗವಾಕ್ಷಿ ಕಾರ್ಯಕ್ರಮ- ವಿದೇಶಿಗರಿಗೆ ಮಾತ್ರ ಇದ್ದ ಅನುಕೂಲ ಈಗ ದೇಶೀಯ ಚಿತ್ರ ನಿರ್ಮಾಣಕ್ಕೂ ಒತ್ತು
* ಮನೆ ಖರೀದಿ ಮಾಡುವವರ ಜಿಎಸ್‌ಟಿ ಕಡಿಮೆ ಮಾಡುವಂತೆ ಜೆಎಸ್‌ಟಿ ಸಮಿತಿಗೆ ಮನವಿ
* ಸರ್ಕಾರಿ ಬ್ಯಾಂಕ್‌ಗಳ ಪುನಶ್ಚೇತನಕ್ಕೆ ೨.೬ ಕೋಟಿ
* ೨.೫ ರಿಂದ ೫ ಲಕ್ಷದವರೆಗೆ ಆದಾಯ ತೆರಿಗೆ ವಿನಾಯಿತಿ ಮಿತಿ
* ೬.೫ ಲಕ್ಷದ ವರೆಗೆ ತೆರಿಗೆ ವಿನಾಯಿತಿ
* ಇದ್ರಿಂದ ೧೦೦ ಕೋಟಿ ಮಧ್ಯಮ ವರ್ಗದವರಿಗೆ ಅನುಕೂಲ
* ಗೃಹ ಸಾಲ ೨ಲಕ್ಷದರೆಗೂ ತೆರಿಗೆ ವಿನಾಯಿತಿ
* ಮನೆ ಬಾಡಿಗೆ ಮೇಲಿನ ಸೆಸ್ ಇಳಿಕೆ
* ೨.೪ ಲಕ್ಷದವರೆಗೂ ಮನೆ ಬಾಡಿಗೆ ಆದಾಯಕ್ಕೆ ತೆರಿಗೆ ಕಟ್ಟಬೇಕಿಲ್ಲ
* ಶೈಕ್ಷಣಿಕೆ ಸಾಲ ಪಡೆದಿದ್ದರೆ ತೆರಿಗೆ ವಿನಾಯಿತಿ
* ಯಾವುದೇ ಹೊಸ ತೆರಿಗೆ ಇಲ್ಲ
* ಅಂಚೆ ಕಚೇರಿ ಠೇವಣಿ -ಟಿಡಿಎಸ್ ಮಿತಿ ೧೦ ಸಾವಿರದಿಂದ ೪೦ ಸಾವಿರಕ್ಕೆ ಏರಿಕೆ
* ಸ್ಟ್ಯಾಂಡರ್ಡ್ ಡಿಡಕ್ಷನ್ ಮೊತ್ತ ೪೦ ರಿಂದ ೫೦ ಸಾವಿರಕ್ಕೆ ಹೆಚ್ಚಳ
* ಹೂಡಿಕೆ ಮಾಡಿದ್ರೆ ೬.೫ ಲಕ್ಷ ವರೆಗೆ ತೆರಿಗೆಯಿಂದ ವಿನಾಯಿತಿ
* ೧೨ ಕೋಟಿ ಆದಾಯ ತೆರಿಗೆ ಪಾವತಿ-ಸಂಪೂರ್ಣ ಆನ್‌ಲೈನ್ ಆಗಿರುವ ತೆರಿಗೆ ವ್ಯವಸ್ಥೆ – ಶೇ.೯೯.೯೪ರಷ್ಟು ತೆರಿಗೆ ಪಾವತಿ
* ೨೪ ಗಂಟೆಯಲ್ಲೇ ಟಿಡಿಎಸ್ ಮರು ಪಾವತಿ
* ನೋಟು ರದ್ಧತಿ ಬಳಿಕ ೧.೩೦ ಲಕ್ಷ ಕೋಟಿ ಅಘೋಷಿತ ಆದಾಯ ಪತ್ತೆ – ೩.೩೮ಲಕ್ಷ ಶೆಲ್ ಕಂಪನಿಗಳ ರದ್ದು

* ೨೦೨೨ರ ವೇಳೆಗೆ ಸಂಪೂರ್ಣ ಸ್ವಧೇಶಿ ನಿರ್ಮಿತ ಉಪಗ್ರಹ ಬಿಡಲಾಗುವುದು
* ಮುಂದಿನ ೫ ವರ್ಷಗಳಲ್ಲಿ ೩೫೫.೩೩ ಲಕ್ಷ ಕೋಟಿ ಅರ್ಥಿಕ ವ್ಯವಸ್ಥೆಯಾಗುವ ಗುರಿ- ೮ ವರ್ಷಗಳಲ್ಲಿ ೭೧೦ ಲಕ್ಷ ಕೋಟಿ ಆರ್ಥಿಕತೆ
* ಸ್ವಚ್ಚ ನದಿ ಯೋಜನೆ ಮೂಲಕ ನದಿಗಳ ಶುದ್ಧಿಕರಣ

* ಎಲೆಕ್ಟ್ರಿಕ್ ವಾಹನಗಳ ಹೆಚ್ಚಳಕ್ಕೆ ಕ್ರಮ
* ಮೊಬೈಲ್ ಡಾಟಾ ಬಳಕೆ ಶೇ ೫೦ರಷ್ಟು ಹೆಚ್ಚಳ
* ಸೋಲಾರ್ ಪವರ್ ಉತ್ಪಾದನೆಯಲ್ಲಿ ಹೆಚ್ಚಳ
Leave a Reply

Your email address will not be published. Required fields are marked *

error: Content is protected !!