2021 ರ ದ್ವಾದಶ ರಾಶಿ ಫಲ:ಯಾವ ರಾಶಿಗೆ ಏನು ಫಲ ನೋಡಿ.

746

2021 ರ ದ್ವಾದಶ ರಾಶಿಗಳ ಫಲ ಹೇಗಿದೆ ಈ ವರ್ಷದ ನಿಮ್ಮ ರಾಶಿಯ ಫಲಾಫಲಗಳು ಈವಕೆಳಗಿನಂತಿವೆ.

ಮೇಷ: ಕೆಲ ಕಾರ್ಯದಲ್ಲಿ ಬದಲಾವಣೆ, ಕ್ಷೇತ್ರದ ಪರಿವರ್ತನೆ, ವಾಹನ, ಜಮೀನು ಖರೀದಿ, ಮಾರಾಟ ನಡೆಯಲಿದೆ, ಯೋಗ ಪ್ರಾಪ್ತಿಗೆ ತದ್ವಿರುದ್ಧವಾಗಿ ಹೋದರೆ ನಷ್ಟವಾಗಲಿದೆ, ರೋಗ, ರುಜಿನಾದಿ ಚಿಂತನೆ ಜಾಸ್ತಿ. ಆರೋಗ್ಯದ ಕಡೆ ಗಮನ ಕೊಡಿ, ಶನಿಯ ಮೂರನೇ ದೃಷ್ಟಿಯಿಂದ ಅಧಿಕ ಖರ್ಚು ಬರಲಿದೆ, ಅವಸರದ ನಿರ್ಧಾರ ಬೇಡ.ಕೆಲಸ ಕಾರ್ಯಗಳು ನಿಧಾನ ಗತಿಯ ಪ್ರಗತಿ ಇದೆ,ಯೋಚಿಸಿ ಹೂಡಿಕೆ ಮಾಡಿ.

ವೃಷಭ: ಈ ರಾಶಿಗೆ ಭಾಗ್ಯಪ್ರದ ಗುರು ಯೋಗ,ಇಚ್ಚಿಕ ಕೆಲಸಗಳು ಕೈ ಗೂಡುವುದು,ಆರೋಗ್ಯ ಸುಧಾರಣೆ,ಮಾನಸಿಕ ತೊಲಲಾಟಕ್ಕೆ ಅಲ್ಪ ನೆಮ್ಮದಿ, ಸಾಧನೆಗಳನ್ನು ಹೊರಗೆ ತೋರಿಸುವ ಅವಧಿ, ಶಕ್ತಿ ಹೊರಗಡೆ ತೋರುವ ಕಾಲ, ಸಹೋದರ ವೈಮನಸ್ಯ ನಿವಾರಣೆ,ವ್ಯಾಪಾರಿಗಳಿಗೆ ಏರಿಳಿತ,ಉದ್ಯೋಗಿಗಳಿಗೆ ಮಿಶ್ರ ಫಲ.

ಮಿಥುನ: ಕೆಟ್ಟಕಾಲ ಕೆಟ್ಟದ್ದನ್ನಾಗಿ ಮಾಡಿಕೊಳ್ಳಬೇಡಿ, ಅಷ್ಟಮದಲ್ಲಿ ಶನಿ ಇರಲಿದ್ದು, ಏಪ್ರಿಲ್ ತನಕ ಅಷ್ಟಮದಲ್ಲೂ ಗುರು ಇರುತ್ತಾನೆ. ರೋಗ, ಅವಮಾನ, ಅನಾರೋಗ್ಯ ಮಾನಸಿಕ ಹಿಂಸೆ, ಅಧಿಕಾರ, ಹುದ್ದೆಯಲ್ಲಿರುವವರಿಗೆ ಖಿನ್ನತೆ. ತಟಸ್ಥರಾಗಿರಿ,ಆರೋಗ್ಯ ಆಗಾಗ ಏರುಪೇರು,ಉದರ ,ತಲೆ ಶೂಲೆ ಭಾಧಿಸುವುದು,ನಿಂದನೆ,ತಿರುಗಾಟ,ದೈಹಿಕ ನೋವು ಇರಲಿದೆ.

ಕರ್ಕಾಟಕ: ವರ್ಷದ ಮಧ್ಯಭಾಗ ಉತ್ತಮ,ಆರೋಗ್ಯ ಆಗಾಗ ಬದಲಾವಣೆ,ಉದ್ಯೋಗಿಗಳಿಗೆ ಅಲ್ಪ ತೊಂದರೆ,ಇಚ್ಚಿಕ ಕೆಲಸ ಪ್ರಗತಿ, ಸಪ್ತಮ ಗುರು, ಅವಿವಾಹಿತರಿಗೆ ವಿವಾಹ ಯೋಗ, ಜಾತಕ ರೀತಿ ದೋಷ ಪರಿಹಾರ ಮಾಡಿ, ಸಹೋದರ ಕಲಹ ನಿವಾರಣೆ ಆಗಬಹುದು.

ಸಿಂಹ: ಈ ವರ್ಷ ಕುಟುಂಬದಿಂದ ಮಾನಸಿಕ ಯಾತನೆ,ಅಧಿಕ ಕರ್ಚು,ದುಂದುವೆಚ್ಚ, ಸಾಲಕ್ಕೆ ಬೀಳುವ ಸಂಭವ ಹೆಚ್ಚು.ಆರೋಗ್ಯ ಮಧ್ಯಮ, ಉದರ ಭಾದೆ,ಷಷ್ಠಿ ಸ್ಥಾನದಲ್ಲಿ ಗುರು ಇದ್ದಾನೆ, ಕೋರ್ಟು ಕಚೇರಿ ಅನಾವಶ್ಯಕ ಓಡಾಟ ಸಂಭವ, ಎಚ್ಚರಿಕೆಯಿಂದ ಇರಿ, ತಜ್ಞರ ಸಲಹೆ ಪಡೆಯಿರಿ.

ಕನ್ಯಾ: ಈ ವರ್ಷ ದುಂದುವೆಚ್ಚದಿಂದ ನಷ್ಟ ,ಅಧಿಕ ತಿರಿಗಾಟ,ಶ್ರಮ ಹೆಚ್ಚು ,ಮಾನಸಿಕ ಗೊಂದಲ ಇರಿವುದು, ಪಂಚಮದಲ್ಲಿ ಗುರು, ಮಕ್ಕಳ ಕಾಳಜಿ, ಚಿಂತೆ ಬೇಡ, ನೊಂದುಕೊಳ್ಳದೆ ಸಮಸ್ಯೆ ಪರಿಹಾರ ಆಗಲಿದೆ, ಅಭಿವೃದ್ಧಿ, ಶಿಕ್ಷಣ, ಮದುವೆ ವರ್ಷದ ಮಧ್ಯಭಾಗ ಉತ್ತಮ.

ತುಲಾ: ಚತುರ್ಥ ಸ್ಥಾನದಲ್ಲಿ ಗುರು, ಉತ್ತಮ ಫಲ, ಉದ್ಯೋಗ ಪರಿವರ್ತನೆ ಕಾಲ, ವಾಹನ ಖರೀದಿ, ಕ್ಷೇತ್ರದ ಪರಿವರ್ತನೆ, ಜಮೀನು ಪರಿವರ್ತನೆ ಆಗಲಿದೆ,ವರ್ಷವಿಡಿ ನಿಮಗೆ ಸಂಭೃದ್ಧಿ,ಕೆಲಸಗಳ ಪ್ರಗತಿ ಕಾಣಲಿದೆ.

ವೃಶ್ಚಿಕ: ಏಪ್ರಿಲ್ ತನಕ ತೃತಿಯ ಸ್ಥಾನದಲ್ಲಿ ಗುರು ಇರಲಿದ್ದಾನೆ, ಉದ್ವೇಗ ಹೆಚ್ಚಾಗುವ ಸಾಧ್ಯತೆ, ಉದ್ವೇಗ, ಸ್ಥಾನ ನಾಶ ನಾಡಬಹುದು, ಪ್ರಾಯಸ್ತರಿಗೆ ಬಿಪಿ ಶುಗರ್ ಏರಬಹುದುನಿಶ್ಚಿಂತೆ ವಹಿಸಿ, ಅಧಿಕ ಪ್ರಸಂಗ ಬೇಡ

ಧನಸ್ಸು: ದ್ವಿತೀಯ ಸ್ಥಾನದಲ್ಲಿ ಗುರು, ಒಳ್ಳೆಯ ಸಮಯ, ಒಳ್ಳೇ ಸಂಪಾದನೆ, ಕುಟುಂಬದ ವಿಚಾರ ಉತ್ತಮ, ಕರ್ಮಸ್ಥಾನ ಗುರು ವೀಕ್ಷಣೆ ಮಾಡಲಿದ್ದಾನೆ, ಶನಿ ಕಲಹ ಮಾಡಿಸಬಹುದು, ಮಿತ್ರತ್ವ ಹಾಳಾಗಬಹುದು, ಜಾಗೃತೆ ವಹಿಸಿ, ವಿವೇಚನೆ ಬೆಳೆಸಿ

ಮಕರ: ನೀಚ ಸ್ಥಾನದಲ್ಲಿ ಗುರು, ಕೆಟ್ಟಮೇಲೆ ಬುದ್ಧಿ, ಗಲಾಟೆ ಮಾಡಿ ಆಮೇಲೆ ಕ್ಷಮೆ ಕೇಳುವ ಪ್ರಸಂಗ, ಅವಿವಾಹಿತರಾಗಿದ್ದರೆ ಸಕಾಲದಲ್ಲೇ ವಿವಾಹ, ಸಂತಾನ ಭಾಗ್ಯ ಯೋಗ, ದುಃಖ ಪರಿವರ್ತನೆ ಆಗಲಿದೆ, ಸುಖ ಸಿಗಲಿದೆ

ಕುಂಭ: ಸಾಡೇಸಾತ್ ಶನಿ ಕಾಟ ಇದೆ, ರಾಹು ಆಲಸ್ಯ ಕೊಡಬಹುದು, ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಿ, ವ್ಯಯ ಕಮ್ಮಿ ಮಾಡಿ, ಆಲಸ್ಯ ಬಿಡಿ, ಅಭಿವೃದ್ಧಿ ಕಾಲ ಅಲ್ಲ, ವಾತಾವರಣ, ಸರಿಪಡಿಸಿಕೊಳ್ಳಿ, ಮುಂದೆ ಶುಭಕಾಲ ಬರಲಿದೆ

ಮೀನ: ಈ ವರ್ಷ ಮಿಶ್ರ ಫಲಗಳನ್ನು ಕಾಣುವಿರಿ,ಆರೋಗ್ಯ ಮಧ್ಯಮ,ಗುರು ಶನಿ ಬಂಧನದಲ್ಲಿದ್ದಾರೆ. ಲಾಭ ಕೊಡುವವ ಬಂಧನದಲ್ಲಿ ಇದ್ದಾನೆ, ಕನ್ನಡಿಯ ಬಿಂಬಕ್ಕೆ ಹಪಹಪಿಸಬೇಡಿ, ಲಾಭಕ್ಕಾಗಿ ಕಾಯಿರಿ, ಒಳ್ಳೇದಾಗುತ್ತದೆ, ವಾಹನ, ಭೂಮಿ ಖರೀದಿಗೆ ಅತ್ಯುತ್ತಮ ಕಾಲ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ