21-05-2019ದಿನ ಭವಿಷ್ಯ

298

ಮಂಗಳವಾರ, ಮೇ 21 2019
ಸೂರ್ಯೋದಯ : 5:53 am
ಸೂರ್ಯಾಸ್ತ: 6:38 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ವೈಶಾಖ
ಪಕ್ಷ : ಕೃಷ್ಣಪಕ್ಷ
ತಿಥಿ : ತೃತೀಯಾ 25:40
ನಕ್ಷತ್ರ :ಮೂಲ 27:31
ಯೋಗ :ಸಿಧ್ಧ 10:25
ಕರಣಂ:ವಾಣಿಜ 13:25 ವಿಷ್ಟಿ 25:40

ಅಭಿಜಿತ್ ಮುಹುರ್ತ:11:50 am – 12:41 pm
ಅಮೃತಕಾಲ :8:51 pm – 10:31 pm

ರಾಹುಕಾಲ-3:25 pm – 5:00 pm
ಯಮಗಂಡ ಕಾಲ-9:06 am – 10:41 am
ಗುಳಿಕ ಕಾಲ-12:16 pm – 1:51 pm

ಮೇಷ:- ಚಂಚಲ ಸ್ವಭಾವದವರಾದ ನೀವು ಮತ್ತೊಬ್ಬರ ಬಣ್ಣದ ಮಾತಿಗೆ ಮರುಳಾಗಿ ಹಣದ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಹಿತೈಷಿಗಳ ಮಾತನ್ನು ಯಾವುದೇ ಕಾರಣಕ್ಕೂ ಅಲಕ್ಷಿಸಬೇಡಿ. ಕಚೇರಿ ಕೆಲಸದ ಒತ್ತಡ ನಿಮ್ಮನ್ನು ಬಾಧಿಸುವುದು.ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ.

ವೃಷಭ:- ಈ ದಿನ ಬಹುತೇಕ ಶುಭ,ಅಶುಭಫಲಗಳಾಗಿರುವುದು,ನಿಮ್ಮ ಗುಣ ಸ್ವಭಾವಗಳಲ್ಲಿ ಬದಲಾವಣೆ ಕಂಡುಬರುವುದು. ಇದರಿಂದ ಆಗುವ ಕೆಲಸಗಳು ಕೂಡಾ ಹಿನ್ನಡೆಯನ್ನು ಪಡೆಯುತ್ತವೆ. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಆರ್ಥಿಕ ಸದೃಢತೆ ಕಂಡು ಬರುವುದು. ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ, ಆರೋಗ್ಯ ಉತ್ತಮವಾಗಿರುವುದು.

ಮಿಥುನ:-ಈಗಾಗಲೆ ಮಾಡಿದ ಸಾಲಗಳನ್ನು ತೀರಿಸುವತ್ತ ಗಮನ ಹರಿಸುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸ ಪ್ರಗತಿಯಲ್ಲಿರುತ್ತದೆ. ನಿಮ್ಮ ಆಸಕ್ತಿ ಹೊಸ ಯೋಜನೆಗಳ ಮೂಲಕ ಯಶಸ್ಸನ್ನು ಹೊಂದುವಿರಿ. ಅನುಭವಿಗಳ ಸಲಹೆ ಪಡೆಯಿರಿ. ಯಾವುದೇ ಕಾರಣಕ್ಕೂ ಬಂಧುಗಳ ನಡುವೆ ದ್ವೇಷ ಅಸೂಯೆಗಳನ್ನು ಬೆಳೆಯಗೊಡದಿರಿ. ಬಂದ ಸಂಕಷ್ಟಗಳು ಕ್ರಮೇಣ ದೂರವಾಗಲಿದೆ.

ಕಟಕ:-ನಿಮ್ಮ ನಡವಳಿಕೆ, ಮಾತುಕತೆ ಇವುಗಳಲ್ಲಿ ಗಾಂಭೀರ್ಯ ತಂದುಕೊಳ್ಳುವುದು ಉತ್ತಮ ಇಲ್ಲವಾದಲ್ಲಿ ಎಲ್ಲರ ಮುಂದೆ ಅಪಹಾಸ್ಯಕ್ಕೆ ಗುರಿ ಆಗುವಿರಿ. ನಿರಾಶಾಭಾವವನ್ನು ಬಿಟ್ಟು ಆಶಾಭಾವದಿಂದ ಮುನ್ನಡೆಯಿರಿ, ಆರ್ಥಿಕವಾಗಿ ಅರಿಳಿತ ಕಾಣುವಿರಿ,ಆರೋಗ್ಯ ಸುಧಾರಣೆ.

ಸಿಂಹ :- ದೈನಂದಿನ ಜೀವನದಲ್ಲಿ ಅನಿರೀಕ್ಷಿತ ಬದಲಾವಣೆ ಕಂಡುಬರಲಿದೆ. ವ್ಯವಹಾರದಲ್ಲಾಗುವ ಬದಲಾವಣೆ ನಿಮ್ಮ ಹೊಣೆಯನ್ನು ಹೆಚ್ಚಿಸುವುದು. ಬದಲಾವಣೆಯನ್ನು ಮುಕ್ತವಾಗಿ ಸ್ವೀಕರಿಸಿರಿ. ಮಡದಿಯ ಆರೋಗ್ಯದಲ್ಲಿ ಅಲ್ಪಸ್ವಲ್ಪ ವ್ಯತ್ಯಯ ಕಂಡುಬರಲಿದೆ, ಆರ್ಥಿಕ ವಾಗಿ ಏರಿಳಿತ ಕಾಣಲಿದ್ದೀರಿ,ಆರೋಗ್ಯ ಮಧ್ಯಮ.

ಕನ್ಯ:- ಆರಂಭದಲ್ಲಿ ವೇಗ ಪಡೆದಿದ್ದ ಕೆಲಸಗಳು ಅನಿರೀಕ್ಷಿತವಾಗಿ ವಿಳಂಬವಾಗುವುದು. ಸಂಗಾತಿಯ ಅಭಿಪ್ರಾಯಗಳನ್ನು ಅರಿತು ಕೆಲಸ ಮಾಡುವುದು ಒಳ್ಳೆಯದು. ಸಮಾಜ ಸೇವೆ ನಿಮ್ಮನ್ನು ಕೈ ಬೀಸಿ ಕರೆಯಲಿದೆ.ಆತ್ಮವಿಶ್ವಾಸದ ಕೊರತೆಯನ್ನು ಸ್ನೇಹಿತರು ತುಂಬುವರು.ಹಣದ ಅಡಚಣೆ,ಅಧಿಕ ಕರ್ಚು , ಆರೋಗ್ಯ ಉತ್ತಮ.

ತುಲಾ:- ಈ ದಿನ ಅಲ್ಪ ತೊಂದರೆ ಕಾಣುವಿರಿ ಕೆಲವೊಮ್ಮೆ ನಿಮ್ಮ ಅತಿವಿನಯದಿಂದಲೇ ನಿಮ್ಮನ್ನು ಅಪಾಯಕ್ಕೆ ಸಿಲುಕಿಸುವುದು ಅತಿ ಶೀಘ್ರದಲ್ಲಿ ಶುಭ ಸಮಾಚಾರವೊಂದನ್ನು ಕೇಳುವಿರಿ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರುವುದು.ಆರೋಗ್ಯ ಉತ್ತಮ

ವೃಶ್ಚಿಕ:- ಆರೋಗ್ಯದ ಬಗ್ಗೆ ಉದಾಸೀನ ಮಾಡುವುದು ಒಳ್ಳೆಯದಲ್ಲ. ಅನುಭವಿಗಳ ಸಲಹೆ ಪಡೆಯದೇ ಹೊಸ ಯೋಜನೆಗೆ ಕೈಹಾಕಬೇಡಿರಿ. ಬಂಧುಗಳ ಸಹಾಯದಿಂದ ನಿಮ್ಮ ವೈಯಕ್ತಿಕ ಸಮಸ್ಯೆಗಳು ಬಗೆಹರಿಯುವವು,ಆರ್ಥಿಕ
ತೊಂದರೆ ಅನುಭವಿಸುವಿರಿ,ಕೆಲಸಗಳು ಪ್ರಗತಿ ಕಾಣದು.

ಧನಸ್ಸು:- ಈ ದಿನ ಲವಲವಿಕೆಯಿಂದ ಕೊಡಿರುತ್ತದೆ,ಅಂದುಕೊಂಡಿದ್ದನ್ನು ಸಾಧಿಸುವ ಛಲ ನಿಮಗಿದೆ. ಸ್ನೇಹಿತರ ಸಲಹೆಯಂತೆ ನಡೆಯುವುದು ಉತ್ತಮ. ಹಿರಿಯರ ಮಾತನ್ನು ಗೌರವಿಸಿರಿ. ಉತ್ತಮ ಆರೋಗ್ಯ ಕಂಡುಬರಲಿದೆ.ಪ್ರಯಾಣದ ಮುಂಚೆ ಲಕ್ಷ್ಮೀನರಸಿಂಹ ದೇವರನ್ನು ಸ್ಮರಿಸಿರಿ,ಆರ್ಥಿಕ ಪ್ರಗತಿ ಕಾಣಲಿದೆ.

ಮಕರ:- ಈದಿನ ಶುಭ ಫಲ ಅನುಭವಿಸುತ್ತೀರಿ, ಉದ್ಯೋಗದಲ್ಲಿ ಒತ್ತಡವಿದ್ದರೂ ಅನಾಯಾಸವಾಗಿ ಕಾರ್ಯ ನಿರ್ವಹಿಸುತ್ತೀರ, ಮತ್ತಾರದೋ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಹೋಗಿ ನಿಮ್ಮ ಮನಸ್ಸಿನ ನೆಮ್ಮದಿ ಹಾಳು ಮಾಡಿಕೊಳ್ಳದಿರಿ. ತಾಳ್ಮೆಯ ನಡೆಯು ಸಂಸಾರದಲ್ಲಿ ಸಾಮರಸ್ಯವನ್ನು ಉಂಟು ಮಾಡುವುದು, ಆರೋಗ್ಯ ಉತ್ತಮ, ಆರ್ಥಿಕವಾಗಿ ಏರಿಳಿತ ಕಾಣುವಿರಿ.

ಕುಂಭ :- ಈ ಹಿಂದೆ ಪಟ್ಟ ಶ್ರಮಕ್ಕೆ ಇನ್ನು ಮುಂದೆ ಪ್ರತಿಫಲಗಳು ಗೋಚರಿಸುತ್ತಾ ಹೋಗುವುದು. ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡುವುದು ಒಳ್ಳೆಯದು,ಕುಲದೇವತಾ ಆರಾಧನೆಯಿಂದ ಒಳಿತಾಗುವುದು, ಆರೋಗ್ಯ ಮಧ್ಯಮ ,ಆಗಾಗ ದೇಹಾಲಸ್ಯ, ವಾಯುಬಾದೆ ಕಾಡಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ,ಉದ್ಯೋಗದಲ್ಲಿ ತುಸಿ ನೆಮ್ಮದಿ ದಿನ.

ಮೀನ:- ಉದ್ಯೋಗಿಗಳಿಗೆ ಕೆಲಸ ಹೆಚ್ಚು ,ವಹಿವಾಟು ದಾರರಿಗೆ ಲಾಭ ಆಗಲಿದೆ, ಪ್ರಯಾಣ ,ಕರ್ಚು ಖುಷಿ ಎಲ್ಲವೂ ನಿಮ್ಮದಾಗಲಿದೆ, ಸಂಘರ್ಷದಿಂದ ದೂರ ಇರುವುದು ಒಳ್ಳೆಯದು. ಹೊಸ ವ್ಯಕ್ತಿಗಳ ಸಂಪರ್ಕದಿಂದಾಗಿ ಧನಲಾಭವಾಗಲಿದೆ. ಮಹಿಳೆಯರು ತಮ್ಮ ಮನಸ್ಸು ಭಾವೋದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ಉತ್ತಮ. ನಿಮ್ಮ ಹೊಂದಾಣಿಕೆ ಸ್ವಭಾವದಿಂದಾಗಿ ಎಲ್ಲರ ಬೆಂಬಲ ಪಡೆಯುವಿರಿ, ಆರ್ಥಿಕ ಸ್ಥಿತಿ ಉತ್ತಮ, ಆರೋಗ್ಯ ದಲ್ಲಿ ಆಗಾಗ ಬದಲಾವಣೆ ಯಾಗಲಿದ್ದು ಶೀತ,ತಲೆನೋವು ವಾಯು ಬಾದೆ ಕಾಡಲಿದೆ.

ಈ ದಿನ ಯಾರಿಗೆವಶುಭವಾಗಲಿದೆ!
ಈ ದಿನ ವಾಣಿಜ್ಯ ವ್ಯಾಪಾರಿಗಳು,ಹೋಟಲ್ ಉದ್ಯಮಿಗಳು,ಬಂಗಾರದ ಮಾರಾಟಗಾರರು,ಮೀನಿನ ವ್ಯಾಪಾರಿಗಳು,ಗುತ್ತಿಗೆ ದಾರರು ಲಾಭ ಪಡೆಯಲಿದ್ದಾರೆ.
ಈ ಉದ್ಯೋಗ ಮಾಡುವವರಿಗೆ ಹೆಚ್ಚಿನ ಒತ್ತಡ ,ಕೆಲಸಗಳಲ್ಲಿ ಪ್ರಗತಿ,ಹಣ ಲಾಭ ಕುಟುಂಬ ಸೌಖ್ಯ ಇರಲಿದೆ.

ಸರ್ಕಾರಿ ಉದ್ಯೋಗಿಗಳು, ಬ್ಯಾಂಕ್ ಮತ್ತು ಲೆಕ್ಕ ಸಂಬಂದಿ ಉದ್ಯೋಗಿಗಳು, ಸಮುದ್ರದಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರು ಹಾಗೂ ಕೆಲಸಗಾರರು, ಬಂಗಾರದ ಕೆಲಸಗಾರರು,ಕೃಷಿಕರು ಈ ಸಂಬಂಧ ಕೆಲಸ ಮಾಡುವವರಿಗೆ ಒತ್ತಡ ,ಆತಂಕ ಹೆಚ್ಚು ಸರ್ಕಾರಿ ಹಾಗೂ ಬ್ಯಾಂಕ್ ಉದ್ಯೋಗಿಗಳಿಗೆ ಅಧಿಕ ಒತ್ತಡ ಇರಲಿದೆ ,ಮೀನುಗಾರರಿಗೆ ಹಣ ನಷ್ಟ , ಅಧಿಕ ತಿರುಗಾಟ,ಆರ್ಥಿಕ ನಷ್ಟ ಅನುಭವಿಸಿದರೇ ಮೀನುಗಾರಿಕಾ ಕೆಲಸಗಾರರು ಆರ್ಥಿಕ ಸಂಕಷ್ಟ ಅನುಭವಿಸುವರು.
ಬಂಗಾರದ ಕೆಲಸಗಾರರು ಆರ್ಥಿಕ ಸಂಕಷ್ಟ ಎದುರಿಸುವರು ,ಬಂಗಾರ ಮಾರುವಿಕೆಯಲ್ಲಿ ನಷ್ಟ ಆಗಲಿದೆ.

ಲೇಖನ :-ಪಂಡಿತ್ ತಿರುಮಲ ಶರ್ಮ .ಜ್ಯೋತಿಷ್ಯ ವಿದ್ವಾನ್ .
ನಿಮ್ಮ ರಾಶಿಗಣುಗುಣವಾಗಿ ಉಚಿತವಾಗಿ ಫಲಗಳನ್ನು ತಿಳಿಯಲು ನಿಮ್ಮ ರಾಶಿ ,ಜನ್ಮ ದಿನಾಂಕದ ವಿವರದೊಂದಿಗೆ Kannadavaninewsportel@gmail.com ಗೆ ಮೆಸೇಜ್ ಮಾಡಿ
Leave a Reply

Your email address will not be published. Required fields are marked *

error: Content is protected !!