BREAKING NEWS
Search

24-11-2020 ಇಂದಿನ ದಿನ ಭವಿಷ್ಯ

545

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ.
ವಾರ : ಮಂಗಳವಾರ, ತಿಥಿ : ದಶಮಿ,
ನಕ್ಷತ್ರ : ಪೂರ್ವಭಾದ್ರ,
ರಾಹುಕಾಲ: 3.02 ರಿಂದ 4.28
ಗುಳಿಕಕಾಲ: 12.09 ರಿಂದ 1.36
ಯಮಗಂಡಕಾಲ: 9.17 ರಿಂದ 10.43

ಮೇಷರಾಶಿ
ಆರೋಗ್ಯದಲ್ಲಿ ಅಲ್ಪ ಸಮಸ್ಯೆ,ಕಫ,ಅಜೀರ್ಣ ಬಾದೆ ಇರಲಿದೆ,ಸಂತಸದ ವಾತಾವರಣ, ದೇವರ ಕಾರ್ಯ‌ ಜರಗಲಿದೆ, ಒತ್ತಡಕ್ಕೆ ಸಿಲುಕದೆ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ, ಭೂ ವ್ಯವಹಾರಗಳಲ್ಲಿ ಲಾಭ, ಕಾರ್ಯಸಾಧನೆಗಾಗಿ ತಿರುಗಾಟ, ಶತ್ರುಬಾಧೆ, ನಿಂದನೆ.

ವೃಷಭರಾಶಿ
ನಿಮ್ಮ ಆರೋಗ್ಯ ಸ್ಥಿರವಾಗಿರುವುದು,ಹೊಸ ಅವಕಾಶ, ನಿಮ್ಮ ಅದೃಷ್ಟದ ಬಾಗಿಲು ತೆರೆಯಲಿದೆ, ಆರೋಗ್ಯದ‌ ಬಗ್ಗೆ ಕಾಳಜಿವಹಿಸಿ, ಔಷಧಿ ಖರೀದಿಗಾಗಿ ಖರ್ಚುವೆಚ್ಚ, ಮಕ್ಕಳಿಂದ ಸಂತಸ, ಕಾರ್ಯಸಾಧನೆಗಾಗಿ ತಿರುಗಾಟ.

ಮಿಥುನರಾಶಿ
ವಯುಕ್ತಿಕ ಕೆಲಸಗಳಲ್ಲಿ ನಿಗಾವಹಿಸಿ, ತಾಳ್ಮೆ‌ ಸಹನೆಯಿಂದ ಸಮಾಧಾನ ದೊರೆಯಲಿದೆ, ಪ್ರಭಾವ ಬೀರುವ ವ್ಯಕ್ತಿಗಳ ಜೊತೆಗೆ ಒಡನಾಟ, ವಿದೇಶ ವ್ಯಾಪಾರದಿಂದ ಅಧಿಕ ಲಾಭ, ಬಂಧು-ಮಿತ್ರರಿಂದ ಅಪ ನಿಂದನೆ.

ಕಟಕರಾಶಿ
ಉದ್ಯೋಗ‌ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಮಹತ್ವದ‌ ಬದಲಾವಣೆ, ವಿದ್ಯಾರ್ಥಿಗಳಲ್ಲಿ ಪ್ರತಿಭೆ, ವಿಷಯವನ್ನು ಬೇಗ ಗ್ರಹಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ, ಉದ್ಯೋಗದಲ್ಲಿ ಪ್ರಗತಿ.‌

ಸಿಂಹರಾಶಿ
ಕಾರ್ಯಕ್ಷೇತ್ರದಲ್ಲಿ ಸಂತಸದ ವಾತಾವರಣ, ವಿವಿಧ‌‌ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ,‌ ತಾಳ್ಮೆ ಸಮಾಧಾನದಿಂದಿರಿ, ಆಪ್ತರಿಂದ ಸಹಾಯ, ಮಗಳಿಗೆ ವರ ನಿಶ್ಚಯ, ಆಕಸ್ಮಿಕ ಧನಲಾಭ, ಪರಿಶ್ರಮಕ್ಕೆ ತಕ್ಕ ಫಲ, ಉತ್ತಮ ಧನಲಾಭ.

ಕನ್ಯಾರಾಶಿ
ಆರೋಗ್ಯ ಸ್ಥಿರವಾಗಿದ್ದು ಅಲ್ಪ ದೇಹಾಯಾಸ,ಕಫ,ಪಿತ್ತ,ವಾಯುಬಾದೆ ಇರಲಿದೆ.ಸಂತಸದ ವಾತಾವರಣ, ಅನಿರೀಕ್ಷಿತ ಘಟನೆಗಳು ಆಶ್ಚರ್ಯವನ್ನು ತರಲಿದೆ, ಭೂ ಲಾಭ, ಜಾಗ್ರತೆಯಿಂದ ವ್ಯವಹರಿಸುವುದು ಉತ್ತಮ, ಉನ್ನತ ವ್ಯಕ್ತಿಯೋರ್ವರಿಂದ ಆರ್ಥಿಕವಾಗಿ ಉನ್ನತಿ, ಎಣಿಸದ ಹಲವು ಘಟನೆಗಳು ನಡೆಯಲಿದೆ.

ತುಲಾರಾಶಿ
ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ, ಕುಟುಂಬ ಸೌಖ್ಯ,ಸಾಲಭಾದೆ, ಕಾರ್ಯ ವಿಳಂಬ, ಬಂಧುಗಳಿಂದ ಹಿಂಸೆ, ಕೋರ್ಟ್ ವ್ಯವಹಾರಗಳಲ್ಲಿ ಜಯ, ಮನಸ್ಸು ಚಂಚಲವಾದರೂ ಹತೋಟಿಯಲ್ಲಿಟ್ಟುಕೊಳ್ಳಿ.

ವೃಶ್ಚಿಕರಾಶಿ
ಮಾನಸಿಕ ಒತ್ತಡ, ವಿದ್ಯೆಯಲ್ಲಿ ಆಸಕ್ತಿಯಿಲ್ಲ, ದೃಷ್ಟಿ ದೋಷ, ಅತಿಯಾದ ನೋವು, ವೈಯಕ್ತಿಕ ತಪ್ಪುಗಳಿಂದ ಸಮಸ್ಯೆಯ ಸುಳಿಯಲ್ಲಿ ಸಿಲುಕುವಿರಿ, ಅನುಕೂಲಕ್ಕೆ ತಕ್ಕಂತೆ ಆರ್ಥಿಕ ಪರಿಸ್ಥಿತಿಯು ಇರುತ್ತದೆ,‌ ಆರೋಗ್ಯದಲ್ಲಿ ವ್ಯತ್ಯಾಸ.

ಧನಸ್ಸುರಾಶಿ
ಕಾರ್ಯಕ್ಷೇತ್ರದಲ್ಲಿ ಜಡತೆಯನ್ನು ದೂರ ಮಾಡಿದ್ರೆ ಯಶಸ್ಸು ಖಚಿತ, ಆರ್ಥಿಕ ಸ್ಥಿತಿಯು ಮೇಲೆ ಕೆಳಗಾಗುವುದು, ಇಷ್ಟ ವಸ್ತುಗಳ ಖರೀದಿ, ಹಿರಿಯರ ಬೆಂಬಲ, ವ್ಯರ್ಥ ಧನಹಾನಿ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ.

whatsapp :- 9741058799

ಮಕರರಾಶಿ
ನಂಬಿಕೆ ದ್ರೋಹಕ್ಕೆ ಒಳಗಾಗುವಿರಿ, ಕಾರ್ಯಕ್ಷೇತ್ರದಲ್ಲಿ ಹಲವು ರೀತಿಯ ಸಮಸ್ಯೆ ತಲೆದೋರಲಿದೆ, ಕುಟುಂಬದಲ್ಲಿ ಸಂತಸದ ವಾತಾವರಣದಿಂದ ನೆಮ್ಮದಿ, ಸಲ್ಲದ ಅಪವಾದ ನಿಂದನೆ, ಶೀತ ಸಂಬಂಧ ರೋಗ, ಆಧ್ಯಾತ್ಮದಲ್ಲಿ ಒಲವು.

ಕುಂಭರಾಶಿ
ನಿಮ್ಮ ಮಾತುಗಳಿಂದ ಕಲಹ, ತಾಳ್ಮೆ ಅಗತ್ಯ, ಆತ್ಮವಿಶ್ವಾಸ‌ ಧೈರ್ಯದಿಂದ ಯಶಸ್ಸು, ಹೊಸ ವ್ಯವಹಾರದಲ್ಲಿ ಯಶಸ್ಸು, ಕಿರು ಸಂಚಾರ, ಕಾರ್ಯಸಾಧನೆಗಾಗಿ ತಿರುಗಾಟ, ಆಕಸ್ಮಿಕ ಧನಲಾಭ.

ಮೀನರಾಶಿ
ಇತರರಿಗೆ ಸಹಾಯ ಮಾಡುವಿರಿ, ಅನಾವಶ್ಯಕ‌ ಚಿಂತೆ ಆತಂಕದಿಂದ ಬಳಲುವಿರಿ, ಸ್ನೇಹಿತರ ಸಹಕಾರವಿದ್ದರೂ ಅತೀ‌ ನಂಬಿಕೆ ಬೇಡ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ನೂತನ ಪ್ರಯತ್ನಗಳಿಂದ ಯಶಸ್ಸು,‌ ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ