add

26-10-2020 ರ ಇಂದಿನ ದಿನ ಭವಿಷ್ಯ.

556

ಪಂಚಾಂಗ:
ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಶರದ್ ಋತು, ನಿಜ ಆಶ್ವಯುಜ ಮಾಸ, ಶುಕ್ಲ ಪಕ್ಷ.
ವಾರ: ಸೋಮವಾರ, ತಿಥಿ: ದಶಮಿ, ನಕ್ಷತ್ರ: ಶತಭಿಷ,
ರಾಹುಕಾಲ: 7.43 ರಿಂದ 9.11
ಗುಳಿಕಕಾಲ: 1.35 ರಿಂದ 3.03
ಯಮಗಂಡಕಾಲ: 10.39 ರಿಂದ 12.07

ಮೇಷ:ಈ ದಿನ ಆದಷ್ಟು ಜಾಗ್ರತೆಯಿಂದ ಇರಿ, ಅತಿಯಾದ ಒತ್ತಡ, ಇಲ್ಲ ಸಲ್ಲದ ಅಪವಾದ ಬರುವ ಸಾಧ್ಯತೆ, ಭೂಮಿಯಿಂದ ಅಧಿಕ ಲಾಭ,ಆರೋಗ್ಯ ಮಧ್ಯಮ.

ವೃಷಭ:- ಸ್ನೇಹಿತರಿಂದ ಸಹಕಾರ,ಉದ್ಯೋಗದಲ್ಲಿ ಪ್ರಗತಿ,ವ್ಯವಾಹಾರಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಾಗ ಎಚ್ಚರ,ವ್ಯಾಪಾರಿಗಳಿಗೆ ಲಾಭ,ಆರೋಗ್ಯ ಉತ್ತಮ ಆದರೂ ಉಷ್ಟ ಬಾದೆ,ಮಿಶ್ರ ಫಲ.

ಮಿಥುನ: ಯತ್ನ ಕಾರ್ಯಗಳಲ್ಲಿ ವಿಳಂಬ,ಆರೋಗ್ಯದಲ್ಲಿ ವ್ಯತ್ಯಾಸ, ಧನಹಾನಿ, ಇತರರಿಂದ ತೊಂದರೆ ಅನುಭವಿಸುವಿರಿ, ಮನಕ್ಲೇಷ,ಕುಟುಂಬದಲ್ಲಿ ತೊಂದರೆ.

ಕಟಕ: ಸ್ತ್ರೀಯರಿಗೆ ಶುಭ,ಅಧಿಕ ಖರ್ಚು, ಮಾತಿನಿಂದ ಕಲಹ,ವ್ಯಾಪಾರಿಗಳಿಗೆ ಪ್ರಗತಿ ಕುಂಟಿತ,ಉದ್ಯೋಗಿಗಳಿಗೆ ನಷ್ಟ,ಆರೋಗ್ಯದಲ್ಲಿ ಆಗಾಗ ಸಮಸ್ಯೆ.

ಸಿಂಹ: ಈ ದಿನ ಅಶುಭ ಫಲಗಳು ಹೆಚ್ಚು,ನೆಮ್ಮದಿ ಇಲ್ಲದ ಜೀವನ, ಬೇಡದ ವಿಷಯಗಳಲ್ಲಿ ಆಸಕ್ತಿ ಬೇಡ, ಆರ್ಥಿಕ ಪರಿಸ್ಥಿತಿ ಏರುಪೇರು, ಮಕ್ಕಳಿಂದ ನೋವು.ಕುಟುಂಬದಲ್ಲಿ ಜಗಳ,ಹೆಚ್ಚಿನ ತಿರುಗಾಟ,ವ್ಯಾಪಾರಿಗಳಿಗೆ ಲಾಭವಿಲ್ಲದ ದಿನ,ಉದ್ಯೋಗಿಗಳಿಗೆ ತೊಂದರೆ.

ಕನ್ಯಾ: ಆರೋಗ್ಯದಲ್ಲಿ ಮಧ್ಯಮ ,ದೇಹಾಯಾಸ,ಕಾರ್ಯಗಳಲ್ಲಿ ಆಸಕ್ತಿ,ಸೌಜನ್ಯದಿಂದ ವರ್ತಿಸಿ,ಶತ್ರು ಬಾಧೆ,ಹಿಡಿದ ಕಾರ್ಯದಲ್ಲಿ ಅಲ್ಪ ಯಶಸ್ಸು,ವೃತ್ತಿಯಲ್ಲಿ ಉತ್ತಮ, ಕ್ರಯ ವಿಕ್ರಯಗಳಲ್ಲಿ ಲಾಭ, ನೀಚ ಜನರ ಸಹವಾಸ ದಿಂದ ತೊಂದರೆ.

ತುಲಾ: ಹಣ ಸಂಪಾದನೆ, ಸುಳ್ಳು ಮಾತನಾಡುವುದರಿಂದ ಸಮಸ್ಯೆ, ಅತಿಯಾದ ನಿದ್ರೆ, ಸ್ತ್ರೀಸೌಖ್ಯ, ವಿಪರೀತ ಹಣವ್ಯಯ ದಿಂದ ನಷ್ಟ,ಆರೋಗ್ಯ ಉತ್ತಮ.ವ್ಯಾಪಾರಿಗಳಿಗೆ ನಷ್ಟ,ಉದ್ಯೋಗಿಗಳಿಗೆ ಪ್ರಗತಿ ಇರದು.

ವೃಶ್ಚಿಕ: ಈ ದಿನ ಅಶುಭ ಫಲ ವಿದೆ,ದೇವತಾ ಕಾರ್ಯಗಳಲ್ಲಿ ತೊಡಗುವಿರಿ ದ್ವಿಚಕ್ರವಾಹನದಿಂದ ನಷ್ಟ,ಮನಸ್ಸಿನಲ್ಲಿ ದುಷ್ಟ ಆಲೋಚನೆ, ಆರೋಗ್ಯದಲ್ಲಿ ಏರುಪೇರು.ವ್ಯಾಪಾರಿಗಳಿಗೆ ಮಧ್ಯಮ ಫಲ.

ಧನಸು: ಪಾಲುದಾರಿಕೆಯ ಮಾತುಕತೆ ನೆರವೇರುವುದು,ಉದ್ಯೋಗ ಪ್ರಾಪ್ತಿ, ಮಾನಸಿಕ ಒತ್ತಡ ಹೆಚ್ಚು, ವಿದ್ಯಾರ್ಥಿಗಳಿಗೆ ಆತಂಕ, ಹಿಡಿದ ಕಾರ್ಯಸಾಧನೆ, ಅರೋಗ್ಯ ಉತ್ತಮ.

ಮಕರ: ವ್ಯಾಪಾರಿಗಳಿಗೆ ಉದ್ಯೋಗಿಗಳಿಗೆ ಪ್ರಗತಿ ಕುಂಠಿತ,ಮಾತಿನ ಮೇಲೆ ಹಿಡಿತವಿರಲಿ, ಸಾಲಬಾಧೆ, ಸಹೋದರರಿಂದ ಬೋಧನೆ, ಸಲ್ಲದ ಅಪವಾದ, ದುಡುಕು ಸ್ವಭಾವ ದಿಂದ ತೊಂದರೆ,ಆರೋಗ್ಯ ಉತ್ತಮ.

ಕುಂಭ: ಈ ದಿನ ಶುಭ ಫಲ ಹೆಚ್ಚು ,ಸುವರ್ಣ ಪ್ರಾಪ್ತಿ, ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ಮನಶಾಂತಿ, ಗುರುಹಿರಿಯರ ದರ್ಶನ, ಭಾಗ್ಯ ವೃದ್ಧಿ,ಆರೋಗ್ಯ ಉತ್ತಮ,ಲವಲವಿಕೆಯ ದಿನ.

ಮೀನ: ಈ ದಿನ ಮಿಶ್ರ ಫಲ ನಿಮ್ಮದಾಗಲಿದೆ,ಆದಾಯಕ್ಕಿಂತ ಖರ್ಚು ಜಾಸ್ತಿ, ಕೆಟ್ಟ ಬುದ್ದಿಯಿಂದ ಕಾರ್ಯಸಾಧನೆ ಪ್ರಯತ್ನ,ನಿವೇಶನ ಪ್ರಾಪ್ತಿ, ಶತ್ರುನಾಶ, ಧೈರ್ಯದಿಂದ ಮುನ್ನುಗ್ಗುವಿರಿ.
-ವಿದ್ವಾನ್ ತಿರುಮಲ ಶರ್ಮ.ಬೆಂಗಳೂರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ