ಕುಮಟಾದಲ್ಲಿ ನಾಲ್ವರಿಗೆ ಕರೋನಾ ಫಾಸಿಟಿವ್! ನಾಳೆ ಬರಲಿದೆ ಫಲಿತಾಂಶ

1893

ಕಾರವಾರ :- ಕುಮಟಾ ಪಟ್ಟಣದಲ್ಲಿ ಕ್ವಾರಂಟೈನ್ ಇದ್ದ ನಾಲ್ವರಲ್ಲಿ ಕೊರೋನಾ ದೃಢಪಟ್ಟಿದೆ.

ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಒಂದೇ ಕುಟುಂಬದ ನಾಲ್ವರು ಪಟ್ಟಣದಲ್ಲಿ ಕ್ವಾರಂಟೈನ್ ನಲ್ಲಿದ್ದರು. ಪತಿ, ಪತ್ನಿ, ಮಗ ಹಾಗೂ ಸಂಬಂಧಿ ಹುಡುಗನಲ್ಲಿ ಸೋಂಕು ದೃಢಪಟ್ಟಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಅವರು ಖಚಿತಪಡಿಸಿದ್ದು, ನಾಳೆ ಬರುವ ಬುಲಟಿನ್ ನಲ್ಲಿ ಈ ಕುರಿತು ಮಾಹಿತಿ ಬರಲಿದೆ ಎಂದಿದ್ದಾರೆ.

ಈಗಾಗಲೇ ನಾಲ್ವರಿಗೂ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತದೆ. ಈ ಮೂಲಕ ಕುಮಟಾದಲ್ಲಿ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಇಂದು ಇಬ್ಬರಲ್ಲಿ ಫಾಸಿಟುವ್!

ಮಹಾರಾಷ್ಟ್ರದಿಂದ ವಾಪಸ್ಸಾದ ಕಾರವಾರದ 35 ವರ್ಷದ ಮಹಿಳೆ ಹಾಗೂ ಯಾವುದೇ ಟ್ರಾವಲ್ ಹಿಸ್ಟರಿ ಯಿಲ್ಲದ 38 ವರ್ಷದ ವ್ಯಕ್ತಿಯಲ್ಲಿ ಕರೋನಾ ಸೊಂಕು ದೃಡಪಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎರಡು ಪ್ರಕರಣ ದೃಡಪಟ್ಟಿದೆ‌

35 ವರ್ಷದ ಮಹಿಳೆಯು ತನ್ನ ಮಗಳೊಂದಿಗೆ ಕಾರವಾರಕ್ಕೆ ವಾಪಸ್ಸಾಗಿದ್ದ ಈಕೆ, ಹೋಟೆಲ್ ಕ್ವಾರಂಟೈನ್ ನಲ್ಲಿದ್ದರು. ಈಕೆಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ.ಆದರೇ ದಾಂಡೇಲಿ ಮೂಲದ 38 ವರ್ಷದ ಇಲೆಕ್ಟ್ರಿಶಿಯನ್ ನಲ್ಲಿ ಶೀತ, ಜ್ವರ ಮಾದರಿಯ ಅನಾರೋಗ್ಯ (ಇನ್ಫ್ಲೂಯೆಂಜಾ ಲೈಲ್ ಇಲ್ನೆಸ್/ ಐಎಲ್ಐ) ದೃಢಪಟ್ಟಿರುವುದಾಗಿ ರಾಜ್ಯ ಬುಲೆಟಿನ್’ನಲ್ಲಿ ತಿಳಿಸಿದೆ.
ಈತನಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಅಥವಾ ಸೋಂಕಿತರ ಸಂಪರ್ಕವಿಲ್ಲ. ಹೀಗಾಗಿ ಶಂಕೆಯ ಮೇಲೆ ಈತನ ಗಂಟಲಿನ ದ್ರವವನ್ನು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ನೆಗೆಟಿವ್ ಬಂದಿದೆ ಎನ್ನಲಾಗಿದೆ. ಮೊದಲು ಸೋಂಕು ದೃಢಪಟ್ಟಿರುವುದು ಪ್ರಯೋಗಾಲಯದಲ್ಲಿ ಕಣ್ತಪ್ಪಿನಿಂದಾದ ಪ್ರಮಾದಿಂದ ಎನ್ನಲಾಗಿದ್ದು, ನಾಳಿನ ಬುಲೆಟಿನ್ ನಲ್ಲಿ ಈ ಬಗ್ಗೆ ಸ್ಪಷ್ಟವಾಗುವ ಸಾಧ್ಯತೆ ಇದೆ.
.ಜಿಲ್ಲೆಯಲ್ಲಿ ಇಂದು 77ಕ್ಕೆ ಕೊರೊನಾ ಫಾಸಿಟಿವ್ ಸಂಖ್ಯೆ ಏರಿಕೆಯಾಗಿದ್ದು ಸದ್ಯ ಸಕ್ರಿಯ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದಾರೆ.ಈವರೆಗೂ 43 ಜನ ಕೊರೊನಾ ಸೋಂಕಿನಿಂದ ಗುಣಮುಖರಾದವರಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ