ಹೊನ್ನಾವರದ ಅರಬ್ಬಿ ಸಮುದ್ರದಲ್ಲಿ ದೋಣಿ ಮುಳುಗಡೆ-ಆರು ಜನ ಮೀನುಗಾರರ ರಕ್ಷಣೆ.

427

ಕಾರವಾರ:- ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾದ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾ ದ ಅಳಿವೆ ಪ್ರದೇಶದಲ್ಲಿ ನಡೆದಿದೆ.


ಇಂದು ಹೊನ್ನಾವರದ ಬಂದರಿನಿಂದ ಮೀನಯಗಾರಿಕೆಗೆ ತೆರಳಿತ್ತು ಬರುವ ಮಧ್ಯದಲ್ಲಿ ಅಳವೆ ಪ್ರದೇಶದಲ್ಲಿ ಹೂಳು ತುಂಬಿದ್ದರಿಂದ ಇಂಜಿನ್ ಗೆ ಸಮಸ್ಯೆಯಾಗಿ ಮುಳುಗಡೆ ಆಗಿದೆ. ಬೋಟ್ ನಲ್ಲಿದ್ದ 6 ಜನ ಮೀನುಗಾರರನ್ನು ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಶ್ರೀ ಕೃಷ್ಣ ಭಂಡಾರಿ ಹೆಸರಿನ ಶಿವರಾಮ ಶ್ರೀಯಾನ್ ಮಾಲಕತ್ವದ ಬೋಟ್ ಇದಾಗಿದ್ದು ಬೋಟ್ ಮುಳುಗಡೆಯಿಂದ ಲಕ್ಷಾಂತರ ರುಪಾಯಿ ಮೌಲ್ಯದ ವಸ್ತುಗಳ ನಷ್ಟವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ