ಉತ್ತರಕನ್ನಡ, ಮಂಗಳೂರು,ಧಾರವಾಡದಲ್ಲಿ ಬ್ರಷ್ಟ ಅಧಿಕಾರಿಗಳ ಮನೆಯಮೇಲೆ ಎಸಿಬಿ ದಾಳಿ!

462

ಉತ್ತರ ಕನ್ನಡ ಜಿಲ್ಲೆ, ಮಂಗಳೂರು, ಧಾರವಾಡ ಗಳಲ್ಲಿ ಅಧಿಕಾರಿಗಳ ಮನೆಯಮೇಲೆ ಎಸಿಬಿ ದಾಳಿ ನಡೆಸಿ ತನಿಖೆ ಕೈಗೊಂಡಿದೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಪಿಡಬ್ಲ್ಯೂಡಿ AEE ಉದಯ್ ಎನ್ನುವವರ ಮನೆ ಮೇಲೆ ದಾಳಿನಡೆಸಲಾಗಿದೆ.

AEE ಉದಯ್

ಬೆಳಗಾವಿ ಕೃಷಿ ಕಾಲೋನಿಯ ಮನೆ ಮೇಲೆ ದಾಳಿ ಹಾಗೂ
ದಾಂಡೇಲಿಯ ಟೌನ್ ಶಿಪ್ ಬಡಾವಣೆಯ ಅಧಿಕಾರಿಯ ತಾಯಿಯ ಮನೆಯ ಮೇಲೆ‌ ಸಹ ಎಸಿಬಿ‌ DYSP ಗಿರೀಶ್ ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಇನ್ನು ಧಾರವಾಡದ ಕರ್ನಾಟಕ ವಿವಿ ಮಾಜಿ ಕುಲಸಚಿವ ಕಲ್ಲಪ್ಪ ಹೊಸಮನಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ.

ಬ್ರಷ್ಟ ಆರೋಪ ಹೊತ್ತಿರುವ ಕುಲಪತಿ ಕಲ್ಲಪ್ಪ ಹೊಸಮುನಿ

ಬ್ರಷ್ಟ ಆರೋಪ ಹೊತ್ತಿರುವ ಕುಲಪತಿ ಕಲ್ಲಪ್ಪ ಹೊಸಮುನಿ

ಧಾರವಾಡದ ಶ್ರೀನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದ್ದು ಕಳೆದ ೬ ತಿಂಗಳ ಹಿಂದೆ ಸರ್ಕಾಎ ಹೊಸಮನಿ ಅವರಿಗೆ ಕುಲಸಚಿವ‌ ಸ್ಥಾನದಿಂದ ಕೆಳಗೆ ಇಳಿಸಿತ್ತು. ಇವರ ಮೇಲೆ ಹಲವು ಬ್ರಷ್ಟಾಚಾರದ ಆರೋಪಗಳು ಕೇಳಿಬಂದಿವೆ.

ಮಂಗಳೂರಿನಲ್ಲಿಯೂ ಸಹ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎಇ ಮಹಾದೇವಪ್ಪ ಮನೆ, ಕಚೇರಿ ಮೇಲೆ ಏಕ ಕಾಲದಲ್ಲಿ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಇದಲ್ಲದೇ ಬೆಂಗಳೂರಿನ‌ ಸಿದ್ಧೇನಹಳ್ಳಿ ಮನೆ, ಚಿತ್ರ ದುರ್ಗದ ಕಣಿವೆಹಳ್ಳಿ ಮನೆಗೂ ದಾಳಿ ನಡೆಸಲಾಗಿದ್ದು ಮಹತ್ವದ ದಾಖಲೆ, ಸೊತ್ತುಗಳನ್ನು ಪರಿಶೀಲಿಸುತ್ತಿದ್ದಾರೆ.
Leave a Reply

Your email address will not be published. Required fields are marked *

error: Content is protected !!