BREAKING NEWS
Search

ಶಿವಮೊಗ್ಗದಲ್ಲಿ ಶ್ರೀಮನ್ನಾರಾಯಣ ಪ್ರತ್ಯಕ್ಷ!ಸೆಲ್ಫಿ ಕ್ಲಿಕ್ಕಿಸಿಕೊಂಡ ಭಕ್ತರು!

157

ಶಿವಮೊಗ್ಗ :-ಶಿವಮೊಗ್ಗದಲ್ಲಿ ಶ್ರೀಮನ್ನಾರಾಯಣ ಸ್ವತಹಾ ತಮ್ಮ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸಿ ಭಕ್ತರು ಸೆಲ್ಫಿ ಕ್ಲಿಕ್ಕಿಸಿಕೊಂಡು ಪುನೀತರಾದರು.
ಅರೇ ದೇವರು ಪ್ರತ್ಯಕ್ಷನಾದನೇ ಎಂದು ಕೇಳಬೇಡಿ ಅದೇ ರೀ ಅವನೇ…ಶ್ರೀಮನ್ನಾರಾಯಣ !.

ಹೌದು ಶ್ರೀಮನ್ನಾರಾಯಣ ಚಲನಚಿತ್ರದ ತಂಡ ಶಿವಮೊಗ್ಗಕ್ಕೆ ದಿಡೀರ್ ಭೇಟಿ ನೀಡಿತು.ಈ ಸಂದರ್ಭದಲ್ಲಿ ನಟ ರಕ್ಷಿತ್ ಶಟ್ಟಿ ತಮ್ಮ ಅಭಿಮಾನುಗಳನ್ನು ನೋಡಿ ಖಷಿ ಪಟ್ಟರು.

ಕಿರಿಕ್ ಪಾರ್ಟಿ ನಂತರ ಅಲ್ಪ ವಿರಾಮದ ನಂತರ ರಕ್ಷಿತ್ ಶೆಟ್ಟಿಯವರ ಶ್ರೀಮನ್ನಾರಾಣ ಚಿತ್ರದಲ್ಲಿ ಅಭಿನಯಿಸಿದ್ದು ಚಿತ್ರದ ಟ್ರೇಲರ್ ಸಿನಿ ಅಭಿಮಾನಿಗಳನ್ನು ಫಿದಾ ಮಾಡಿತ್ತು.

ಕಳೆದ ಎರಡು ವಾರದ ಹಿಂದೆ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಮಳಯಾಳಂ, ತೆಲಗು, ತಮಿಳು ಭಾಷೆಯಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಹಿಂದಿ ಭಾಷೆಯಲ್ಲಿ ಇನ್ನೂ ಬಿಡುಗಡೆ ಆಗಬೇಕು.

ಇನ್ನು ತಮ್ಮ ಸಿನಿಮಾ ಪ್ರಮೋಷನ್ ಗಾಗಿ ಇಂದು ಚಿತ್ರ ತಂಡ ಶಿವಮೊಗ್ಗಕ್ಕೆ ಭೇಟಿ ನೀಡಿತ್ತು.

ಸಿನಿಮಾದ ನಾಯಕ ರಕ್ಷಿತ್ ಶೆಟ್ಟಿ, ಖಳ ನಾಯಕ ಬಾಲಾಜಿ, ಪ್ರಮೋದ್ ಶೆಟ್ಟಿ, ನಾಯಕಿ ಸಾನ್ವಿ ಮೊದಲಾದವರು ಶಿವಮೊಗ್ಗದ ಶಿವಪ್ಪ ನಾಯಕ ಮಾಲ್ ನಲ್ಲಿರುವ ಭಾರತ್ ಸಿನಿಮಾ ಹಾಲ್ ನಲ್ಲಿ ಭೇಟಿ ನೀಡಿ ಅಭಿಮಾನಿಗಳು, ಪ್ರೇಕ್ಷಕರಿಗೆ ಅನಿರೀಕ್ಷಿತ ಸರ್ಪರೈಸ್ ನೀಡಿದರು.

ಈ ಸಂದರ್ಭದಲ್ಲಿ ಅಭಿಮಾನಿಗಳು ಮುತ್ತಿಗೆ ಹಾಕು ಸೆಲ್ಫಿ ಕ್ಲಿಕ್ಕಿಸಿಕೊಂಡರು.

ನಂತರ ಸಿನಿಮಾ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕ ರಕ್ಷಿತ್ ಶೆಟ್ಟಿ ಸಿನಿಮಾ ರೆಸ್ಪಾನ್ಸ್ ಬಹಳ ಚೆನ್ನಾಗಿದೆ.

ಶಿವಮೊಗ್ಗದಲ್ಲಿ ರಾಜ್ಯದಲ್ಲಿಯೇ ಉತ್ತಮ ಪ್ರತಿಕ್ರಿಯೆ ಬರುತ್ತಿರುವ ಹಿನ್ನಲೆಯಲ್ಲಿ ಅನಿರೀಕ್ಷಿತವಾಗಿ ಸಿನಿಮಾ ಪ್ರಮೋಟಿಂಗ್ ಟೂರ್ ನ್ನ ಇಲ್ಲಿಂದಲೇ ಅರಂಭಿಸಿದ್ದೇವೆ ಎಂದರು.

ಪೈರಸಿ ನಮಗೆ ಅಂತಹದ್ದೇನು ಸಮಸ್ಯೆ ಆಗಲಿಲ್ಲ. ಕಿರಿಕ್ ಪಾರ್ಟಿ ಗೂ ಶ್ರೀಮನ್ನಾರಾಯಣನಿಗೂ ಬಜೆಟ್ ಮತ್ತು ಕಾಲಾವಕಾಶದ ನಡುವೆ ಬಹಳನೇ ವ್ಯತ್ಯಾಸವಿದೆ.

ಕಿರಿಕ್ ಪಾರ್ಟಿ ಗಿಂತ ಶ್ರೀಮನ್ನಾರಾಯಣ ಸಿನಿಮಾ ನಾಲ್ಕುಪಟ್ಟು ಬಜೆಟ್ ನಲ್ಲಿ ಹೆಚ್ಚಳವಿದೆ. ಈ ಸಿನಿಮಾ ಬೇರೆ ಭಾಷೆಯಲ್ಲಿ ಡಬ್ಬಿಂಗ್ ಆಗಿದೆ. ಮಲ್ಯಾಳಂ, ತಮಿಳು ಮತ್ತು ತೆಲಗು ಭಾಷೆಯಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಹಿಂದಿಯಲ್ಲಿಯೂ ಈ ಸಿನಿಮಾ ಡಬ್ಬಾಗಿ ಬರುತ್ತಿದೆ.

ಸಿನಿಮಾದ ಅವಧಿಯೂ ಹೆಚ್ಚಿಗೆ ಇತ್ತು ಆರಂಭದಲ್ಲಿ ನಂತರ ಅದನ್ನ ಸರಿಪಡಿಸಿ 2 ಗಂಟೆ 45 ನಿಮಿಷಕ್ಕೆ ಸೀಮಿತಗೊಳಿಸಲಾಗಿದೆ. ಐದು ಭಾಷೆಯಲ್ಲಿ ಸಿನಿಮಾ ಆರಂಭಿಸುತ್ತಿರುವುದು ಮೊದಲ ಪ್ರಯೋಗಿಕ ಹಂತ, ಈ ಸಿನಿಮಾದಿಂದ ಪ್ರೇಕ್ಷಕರನ್ನ ಹೆಚ್ಚು ಮಾಡಿಕೊಂಡು ಮುಂದಿನ ಸಿನಿಮಾಗಳಿಗೆ ಬೇಸ್ ಮಾಡಿಕೊಳ್ಳಲು ಅವಕಾಶವಾಗಿದೆ ಎಂದರು.

ಹಿಂದಿಯಲ್ಲಿ ಅರ್ಧ ಡಬ್ಬಿಂಗ್ ಮುಗಿಸಲಾಗಿದೆ. ಸಿನಿಮಾದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನರವರು ಎಲ್ಲಾ ರೀತಿಯ ತಯಾರಿ ನಡೆಸಿಕೊಂಡಿದ್ದಾರೆ.

ಈ ಸಿನಿಮಾ ಬಿಡುಗಡೆ ಆಗುವ ಮೊದಲು ಒಂದು ತಿಂಗಳ ಕಾಲ ಸತತವಾಗಿ ನಾಲ್ಕು ಗೋಡೆಯ ಮಧ್ಯ ಕುಳಿತು ಕೆಲಸ ಮಾಡಿದವರು ಪುಷ್ಕರ್ ಮಲ್ಲಿಕಾರ್ಜುನ್ ಎಂದು ತಿಳಿಸಿದರು.

ಒಟ್ಟಿನಲ್ಲಿ ಶಿವಮೊಗ್ಗಕ್ಕೆ ದಿಡೀರ್ ಬೇಟಿ ನೀಡಿ ತಮ್ಮ ಅಭಿಮಾನಿಗಳಿಗೆ ರಕ್ಷಿತ್ ಶಟ್ಟಿ ದಿಲ್ ಖುಷ್ ಮಾಡಿದರು.




Leave a Reply

Your email address will not be published. Required fields are marked *