ಶ್ರದ್ಧಾ ಮಾಡಿದ ಮೋಡಿ! ಸೆಕ್ಸಿ ಲುಕ್ ಪೋಟೋ ಷೂಟ್ ಹೇಗಿದೆ ನೋಡಿ!

794

ಕನ್ನಡದ ನಟಿ ರಶ್ಮಿಕಾ ಮಂದಣ್ಣ ಬಿಟ್ರೆ ತೆಲುಗು ಚಿತ್ರರಂಗದಲ್ಲಿ ಈಗ ಶ್ರದ್ಧಾರದ್ದೇ ಟಾಕು.ಈ ಮೂಗುತಿ ಸುಂದರಿಯನ್ನ ಅಲ್ಲಿನ ಜನ ಮನಸಾರೆ ಒಪ್ಪಿಕೊಂಡಿದ್ದಾರೆ.

ಅದಕ್ಕೆ ಕಾರಣ ಮೈ ಚಳಿ ಬಿಟ್ಟು ಮುತ್ತಿನ ಮತ್ತೇರಿಸಿದ್ದು. ಇಷ್ಟೆಲ್ಲಾ ಮಾಡಿರೋ ಶ್ರದ್ಧಾ ಈಗ ಹಾಟ್ ಅವತಾರ ತಾಳಿದ್ದಾರೆ.. ಅದು ಯಾಕೆ..? ಯು ಟರ್ನ್ ಹುಡ್ಗಿಯ ಹಾಟ್ ಅವತಾರ ಹೇಗಿದೆ..? ಅಂತ ನೋಡ್ಬೇಕಾದ್ರೆ.. ಈ ಸ್ಟೋರಿನ ನೋಡಿ.

ಶ್ರದ್ಧಾ ಶ್ರೀನಾಥ್ ಈ ಹೆಸ್ರು ಕನ್ನಡ ಚಿತ್ರರಂಗದ ಮಟ್ಟಿಗೆ ಪಾಪ್ಯೂಲರ್. ಶ್ರದ್ಧಾ ಅಂದ್ರೆ ಚಂದನವನ ಸಿನಿಮಾ ಪ್ರೇಕ್ಷಕ ಈಕೆ ಯುಟರ್ನ್ ಬ್ಯೂಟಿ ತಾನೆ ಅಂತಾರೆ. ಯಾಕಂದ್ರೆ ಶ್ರದ್ಧಾ ಶ್ರೀನಾಥ್ ಅಭಿನಯಿಸಿದ ಮೊದಲ ಚಿತ್ರ ಯುಟರ್ನ್ಮೊದಲ ಸಿನಿಮಾದಿಂದಲೇ ಶ್ರದ್ಧಾ ಶ್ರೀನಾಥ್ ಸ್ಯಾಂಡಲ್ವುಡ್ನಲ್ಲಿ ದೊಡ್ಡ ಪ್ರಚಾರಕ್ಕೆ ಬಂದ್ರು. ಅದಕ್ಕೆ ಕಾರಣ ಈಕೆಯ ಬಳಿ ಇರೋ ಸಿಂಪಲ್ ಬ್ಯೂಟಿ.

ಗಂಡ್ ಹೈಕ್ಳಿಗೆ ಶ್ರದ್ಧಾ ಶ್ರೀನಾಥ್ ಇಷ್ಟ ಆಗೋಕೆ ಕಾರಣ ಈಕೆಯ ಮೂಗ ಮೇಲಿರೋ ಆ ಮೂಗುತಿ. ದುಂಡು ಮುಖದ ಗೋದಿ ಬಣ್ಣದ ಈ ಸುಂದರಿಗೆ ಮೂಗುತಿ ಇದ್ದರೇನೆ ಭೂಷಣ ಅನ್ನೋ ಹುಡುಗರ ಗ್ಯಾಂಗ್ ಇದೆ.

ಹೀಗಾಗಿ ಈಕೆಯನ್ನ ಮೂಗುತಿ ಸುಂದರಿ ಅಂತಾನು ಕರಿತಾರೆ.. ಈ ಅನನ್ಯಾ ಟೀಚರ್ ಬಗ್ಗೆ ಇಷ್ಟೆಲ್ಲಾ ಹೇಳೊಕೆ ಕಾರಣ ಶ್ರದ್ಧಾ ಹೊಸ ಫೋಟೋ ಶೂಟ್ ಮಾಡಿಸಿರೋದು.

ಈಗೆ ಸಮ್ಮರ್ ಟೈಂ,ಈ ಸೀಸನ್ಗೆ ಸೂಟ್ ಆಗೋ ನಾನಾ ವಿನ್ಯಾಸಗಳ ಕಾಸ್ಟ್ಯೂಂನಲ್ಲಿ ಹೀರೋಯಿನ್ಸ್ ಮಿಂಚ್ತಾರೆ. ಹಾಗೆ ಶ್ರದ್ಧಾ ಕೂಡ ಈ ಸಮ್ಮರ್ನಲ್ಲಿ ಹೊಸ ಫೋಟೋ ಶೂಟ್ ಮಾಡಿಸಿ ಟ್ರೆಂಡಿಯಾಗಿ ಮಿಂಚಿದ್ದಾರೆ. ವೆಸ್ಟರ್ನ್ ಲುಕ್ನಲ್ಲಿ ಯುಟರ್ನ್ ಚೆಲುವೆ ಮೋಡಿ ಮಾಡಿದ್ದಾರೆ.

ಶ್ರದ್ಧಾ ಶ್ರೀನಾಥ್ ಫೋಟೋ ಶೂಟ್ ಮಾಡಿಸಿದ್ದ ಎಕ್ಸಾಂಪಲ್ಸ್ ತೀರಾ ಕಡಿಮೆ.ಆದ್ರೆ ತೆಲುಗು ಇಂಡಸ್ಟ್ರಿಗೆ ಕಾಲಿಟ್ಮೇಲೆ ಮೂಗುತಿ ಸುಂದರಿ ಕಂಪ್ಲೀಟ್ ಬದಲಾಗಿದ್ದಾರೆ.

ಮೈ ಚಳಿ ಬಿಟ್ಟು ನಾಣಿ ಜತೆ ಮೈ ಜುಮ್ ಅನ್ನೋ ಹಾಗೆ ತುಟಿಸರಸ ಆಡಿರೋ ಶ್ರದ್ಧಾ ಈಗ ಹಾಟ್ ಹಾಟ್ ಫೋಟೋ ಶುಟ್ನಲ್ಲಿ ಮಿಂದೆದ್ದಿದದಾರೆ.ಇದಕ್ಕೆ ಕಾರಣ ಟಾಲಿವುಡ್ ಅಂಗಳದಲ್ಲಿ ಈಗ ಶ್ರದ್ಧಾಗೆ ಬರ್ತಿರೋ ಬಿಗ್ ಆಫರ್ಸ್.

ಶ್ರದ್ಧಾ ಸಿನಿಮಾಗಳ ಆಯ್ಕೆ ತುಂಬಾ ವಿಭಿನ್ನ.. ಶ್ರದ್ಧಾ ಆವಾಗ್ಲು ನಾಯಕಿ ಪ್ರಧಾನ ಕಥೆಗಳನ್ನೇ ಹೆಚ್ಚು ಇಷ್ಟ ಪಡ್ತಿದ್ರು. ಅದ್ರಲ್ಲೂ ಹೆಚ್ಚು ಗ್ಲಾಮರ್ ಕಥೆಗಗಳಗೆ ಮಣೆ ಹಾಕ್ತಿರಲಿಲ್ಲ.

ಆದ್ರೆ ಈಗ ಈ ಫೋಟೋ ಶೂಟ್ ನೋಡ್ತಿದ್ರೆ ಶ್ರದ್ಧಾ ಸಿನಿಮಾಭಿರುಚಿ ಬದಲಾದಂತೆ ಕಾಣಡ್ತಿದೆ. ಯುಟರ್ನ್ ಹುಡ್ಗಿ ಮತ್ತಷ್ಟು ಗ್ಲಾಮರ್ ಆಗಿ ಕಾಣ್ತಿದ್ದಾರೆ.

ಎನಿ ವೇ ಕನ್ನಡದ ನಾಯಕಿರು ಈಗ ನೆರೆಮನೆ ಟಾಲಿವುಡ್ನಲ್ಲಿ ದಂಡಯಾತ್ರೆ ಆರಂಭಿಸಿದ್ದಾರೆ.

ಶ್ರದ್ಧಾ ತೆಲುಗಿನಲ್ಲಿ ನಟಿಸಿರೋ ಜರ್ಸಿ ಸಿನಿಮಾದ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.

ಈ ಸಿನಿಮಾದಲ್ಲಿ ಶ್ರದ್ಧಾರ ಲುಕ್ ನೋಡಿ ಬಿಗ್ ಸಿನಿಮಾಗಳು ಅನನ್ಯಾ ಟೀಚರ್ರನ್ನ ಹುಡುಕಿಕೊಂಡು ಬರ್ತಿವೆ. ಹೀಗಾಗಿ ಶ್ರದ್ಧಾ ಈ ಫೋಟೋ ಶೂಟ್ಅನ್ನ ಮಾಡಿಸಿದ್ದಾರೆ.
Leave a Reply

Your email address will not be published. Required fields are marked *

error: Content is protected !!