ಕ್ಷಯ,ಕಫ,ಕೆಮ್ಮು ಬೆವರುಸಾಲೆಗೆ ಮನೆ ಮದ್ದು ಈ ಆಡುಸೋಗೆ:ಉಪಯೋಗ ಹೇಗೆ?ಇಲ್ಲಿದೆ ಮಾಹಿತಿ

394

ಅಡಸೋಗೆ ಅಥವಾ ಆಡುಮುಟ್ಟದ ಗಿಡ (Adathoda vasica – Acanthaceae)

ಆಧುನಿಕತೆಯ ಭರಾಟೆಯಲ್ಲಿ ನಾವು ನಮ್ಮ ಹೊಲ ಗದ್ದೆಗಳಿಗೆ ಮನೆಯ ಸುತ್ತ ಮುತ್ತ ಕಾಂಕ್ರೀಟ್ ಹಲಗೆ ಕಂಬಗಳನ್ನು ಬಳಸಿ ಬೇಲಿಯನ್ನು ನಿರ್ಮಿಸಿಕೋಳ್ಳುತ್ತಿದ್ದೇವೆ. ಹಾಗೆಯೇ ಅಮೂಲ್ಯವಾದ ಗಿಡ ಮೂಲಿಕೆಯನ್ನೂ ಕಳೆದುಕೊಳ್ಳುತ್ತಿದ್ದೇವೆ.

ಅದುವೇ ಅಡಸೋಗೆ ಅಥವಾ ಆಡುಮುಟ್ಟದ ಗಿಡ. ಹಿಂದೆಲ್ಲ ಹಳ್ಳಿಗಳಲ್ಲಿ ಅಡಸೋಗೆಯನ್ನು ಬೇಲಿಗಾಗಿ ಬಳಸಿ ಔಷಧವಾಗಿ ಬಳಸುತ್ತಿದ್ದೆವು. ಬೇಗ ಚಿಗುರೊಡೆಯುವ, ಹಲವು ಕವಲೊಡೆಯುವ, ಕಹಿಯಾಗಿರುವ, ಜಾನುವಾರುಗಳು ತಿನ್ನದ ಗುಣಗಳನ್ನು ಹೊಂದಿರುವ ಈ ಸಸ್ಯ ಎಷ್ಟೋ ಹಳ್ಳಿಗಳಲ್ಲಿ ಈಗಾಗಲೇ ಕಣ್ಮರೆಯಾಗಿದೆ.

ಜ್ವರ, ಕ್ಷಯರೋಗ, ಕಫ, ಕೆಮ್ಮು ಮುಂತಾದ ಹಲವು ಕಾಯಿಲೆಗಳಿಗೆ ಬಳಕೆಯಾಗುವ ತುಂಬಾ ಉಪಯುಕ್ತವಾದ ಅಡಸೋಗೆ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ಆತಂಕದ ಸಂಗತಿ.

ಚಿಕಿತ್ಸೆ ಉಪಯೋಗ :-

ಜ್ವರ:- ಅಡಸೋಗೆ ಎಲೆ, ಅಮೃತ ಬಳ್ಳಿ, ಜಿರಾಯಿತ, ಕರ್ಕಿಜಡ್ಡು ಒಂದು ಹಿಡಿ ತಂದು ಅದಕ್ಕೆ ಹತ್ತು ಬೋಳುಕಾಳು ಐದು ಗ್ರಾಂ. ದನಿಯ, ಹತ್ತು ಗ್ರಾಂ.ಜೀರಿಗೆ ಸೇರಿಸಿ ಎಲ್ಲಾ ಪುಡಿ ಮಾಡಿ ಐವತ್ತು ಗ್ರಾಂ.ಬೆಲ್ಲ ಹಾಕಿ ಎರಡು ನೂರು ಎಂ.ಎಲ್. ನೀರಿನಲ್ಲಿ ಬೆರೆಸಿ ಚೆನ್ನಾಗಿ ಕುದಿಸಿ ಹೊತ್ತಿಗೆ ಐವತ್ತು ಎಂ.ಎಲ್.ನಂತೆ ಮೂರು ದಿನ ಸೇವಿಸುವುದು.

ಕ್ಷಯರೋಗ :-

ಮೂವತ್ತು ಎಂ.ಎಲ್. ಎಲೆಯ ರಸಕ್ಕೆ ಹದಿನೈದು ಎಂ.ಎಲ್. ಜೇನುತುಪ್ಪ ಸೇರಿಸಿ ಚೆನ್ನಾಗಿ ಕದಡಿ ದಿನಕ್ಕೆ ಮೂರು ಬಾರಿ ಇಪ್ಪತ್ತೊಂದು ದಿನ ಸೇವಿಸುವುದರಿಂದ ಕ್ಷಯರೋಗ ನಿಯಂತ್ರಣಕ್ಕೆ ಬರುತ್ತದೆ.

ಕಫ, ಕೆಮ್ಮು:-

ಬೇರನ್ನು ನಿಂಬೆ ಹುಳಿಯಲ್ಲಿ ತೇಯ್ದು ಒಂದು ಚಮಚ ಗಂಧಕ್ಕೆ ಒಂದು ಚಮಚ ಜೇನು ಸೇರಿಸಿ ಸೇವಿಸಿದರೆ ಕಫ, ಕೆಮ್ಮು ನಿಯಂತ್ರಣಕ್ಕೆ ಬರುತ್ತದೆ.

ಬೆವರುಸಾಲೆ :-

ಎಲೆಯನ್ನು ಗೋಮೂತ್ರದಲ್ಲಿ ಚೆನ್ನಾಗಿ ಅರೆದು ಅದಕ್ಕೆ ಅರಿಶಿನ ಪುಡಿ ಸೇರಿಸಿ ಸ್ನಾನಕ್ಕೆ ಒಂದು ಗಂಟೆ ಮೊದಲು ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಬೆವರುಸಾಲೆ, ಸಣ್ಣತುರಿ ನಿವಾರಣೆ ಆಗುತ್ತದೆ.

“ಔಷಧೀಯ ಸಸ್ಯಗಳನ್ನು ಉಳಿಸೊಣ ಬೆಳೆಸೋಣ “

“ತಜ್ಞರ ಮಾರ್ಗದರ್ಶನದಲ್ಲಿ ಬಳಸುವುದು ಅವಶ್ಯಕ.”
Leave a Reply

Your email address will not be published. Required fields are marked *

error: Content is protected !!