ಉತ್ತರ ಕನ್ನಡ ಜಿಲ್ಲೆ ಮೇ.4 ರ ನಂತರ ಹೇಗಿರುತ್ತೆ? ಡಿ.ಸಿ,ಎಸ್ಪಿ ಹೇಳಿದ್ದೇನು ಗೊತ್ತಾ?

1951

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ 11 ಜನ ಕೊರೋನಾ ಸೊಂಕಿತರು ಬಿಡುಗೆ ಆಗುವ ಮೂಲಕ ಕೊರೊನಾ ಸೊಂಕಿನಿಂದ ಮುಕ್ತವಾದ ಜಿಲ್ಲೆಯ ಪಟ್ಟಿಗೆ ಸೇರಿದೆ.

ಈ ಕುರಿತು ಕನ್ನಡವಾಣಿ ಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ರವರು ಲಾಕ್ ಡೌನ್ ನಂತರ ವಿದೇಶದಿಂದ ಜಿಲ್ಲೆಗೆ ಬರುವ ಜನರನ್ನು ಕೊರಂಟೈನ್ ಮಾಡುವ ಜೊತೆ ಇವರ ಮೇಲೆ ನಿಗಾ ಇಡಲು ನಗರ ಪ್ರದೇಶಗಳಲ್ಲಿ ಸಮುದಾಯ ಕಾರ್ಯಪಡೆ ಸ್ಥಾಪನೆ ಮಾಡಲಾಗುವುದು.ಈಗಾಗಲೇ ಗ್ರಾಮ ಮಟ್ಟದಲ್ಲಿ ಮಾಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಕೊರೋನಾ ವಾರ್ಡ ಸಹ ನಿರ್ಮಿಸಲಾಗಿದ್ದು ಪ್ರಯೋಗಾಲಯ ಸಹ ಇನ್ನು 15 ದಿನದಲ್ಲಿ ನಿರ್ಮಾಣ ಮಾಡಲಾಗುವು ಮುಂದಿನ ದಿನಗಳಲ್ಲಿ ಸಹ ಕೊರೋನಾ ವಿರುದ್ಧ ಹೋರಾಟಲು ಜಿಲ್ಲೆ ಸಮರ್ಥವಾಗಿದ್ದು ನುರಿತ ವೈದ್ಯರ ತಂಡ ,ಪ್ರತ್ತೇಕ ಆಸ್ಪತ್ರೆ ,ಹೆಚ್ಚಿನ ಮೆಡಿಸಿನ್ಸ್ ವೆವಸ್ಥೆ ಮಾಡಿಕೊಳ್ಳಲಾಗಿದೆ ಎಂದ ಅವರು ಮೇ 4 ರ ನಂತರ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗುವುದು.

ಈಗಾಗಲೇ ಕೃಷಿ,ಸಂಪ್ರದಾಯಿಕ ಮೀನುಗಾರಿಕೆಗೆ ಅವಕಾಶ ಮಾಡಿಕೊಟ್ಟಿದ್ದು ಸರ್ಕಾರ ದಿಂದ ಸದ್ಯದರಲ್ಲೇ ಎಲ್ಲಾ ವಿಧದ ಮೀನುಗಾರಿಕೆಗೆ ಅವಕಾಶ ಮಾಡಿಕೊಡುವ ಕುರಿತು ಪ್ರಸ್ತಾಪವಿದೆ ಅದು ಕೂಡ ಸಾಧ್ಯವಾಗಲಿದ್ದು ಸರ್ಕಾರ ಈ ಕುರಿತು ಆದೇಶ ಮಾಡಲಿದೆ ಎಂದರು.

ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಮಾತನಾಡಿ ,ಮೇ4 ರ ನಂತರ ಭಟ್ಕಳ ಹೊರತುಪಡಿಸಿ ಎಲ್ಲೆಡೆ ಲಾಕ್ ಡೌನ್ ಸಡಿಲಿಕೆ ಮಾಡಲಿದ್ದು ಸೊಂಕಿತ ತಾಲೂಕು ಭಟ್ಕಳದಲ್ಲಿ ಮೇ.15 ರ ವರೆಗೂ ಲಾಕ್ ಡೌನ್ ಮುಂದುವರೆಯಲಿದ್ದು ಹಂತ ಹಂತವಾಗಿ ಸಡಿಲಿಕೆ ಮಾಡಲಾಗುವುದು.ಆದರೇ ಮತ್ತೆ ಪಾಸಿಟಿವ್ ಬಂದಲ್ಲಿ ಭಟ್ಕಳ ದಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.ಅಲ್ಲಿನ ಮುಸ್ಲಿಂ ಸಮುದಾಯದವರು ಕೂಡ ಸಹಕಾರ ನೀಡಿದ್ದಾರೆ,

ಜಿಲ್ಲೆಯ ಗಡಿಭಾಗದಲ್ಲಿ ಚಕ್ ಪೋಸ್ಟ್ ನಿರ್ಮಿಸಲಾಗಿದ್ದು ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ಯಾರೂ ಹೊರ ಹೋಗದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೋವಿಡ್ -19 ಚಿಕಿತ್ಸೆಗೆ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಪ್ರಾತಕ್ಷಿಕೆ

ಕೋವಿಡ್ – 19 ಚಿಕಿತ್ಸೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯು ಸಕಲ ವೈದ್ಯಕೀಯ ಸೋಲಭ್ಯಗಳೊಂದಿಗೆ ಸನ್ನದ್ದುಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಹೇಳಿದರು.
ಅವರು ಶುಕ್ರವಾರ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕೊರೋನಾ ಚಿಕಿತ್ಸೆಗೆ ವೈದ್ಯಕೀಯ ಪರೀಕ್ಷೆ, ಉಪಕಕಣಗಳ ವ್ಯವಸ್ಥೆ, ವೈದ್ಯೋಪಚಾರ ಇತ್ಯಾಧಿಗಳ ಕುರಿತು ನಡೆದ ಪ್ರಾತ್ಯಕ್ಷಿಕೆಯನ್ನು ವಿಕ್ಷಿಸಿ ಪತ್ರಕರ್ತರೊಂದಿಗೆ ಮಾತನಾಡಿದರು.

ಇಲ್ಲಿನ ಹಿರಿಯ ವೈದ್ಯಾಧಿಕಾರಿಗಳು ಕೂಡ ಕೊರೋನಾ ವಿರುದ್ದ ಹೊರಡಲು ಸಜ್ಜಾಗಿ ನಿಂತಿದ್ದು, ವೈದ್ಯರು ಸೇರಿದಂತೆ ನಾವು ನೀವು ಸಾರ್ವಜನಿಕರೆಲ್ಲ ಕೊರೋನಾ ರೋಗದೊಂದಿಗೆ ಹೋರಾಡಬೇಕಾಗಿದೆ ರೋಗಿಯೊಂದಿಗೆಯಲ್ಲ. ಕೋವಿಡ್-19 ಸಾಂಕ್ರಾಮಿತರೊಂದಿಗೆ ತಾರತಮ್ಯ ಮಾಡುವುದು ಸಲ್ಲದು. ಇದಕ್ಕೆ ಎಲ್ಲರೂ ಜವಾಬ್ದಾರರು, ಸಾರ್ವಜನಿಕರೆಲ್ಲ ಜಾಗೃತಗೊಳ್ಳಬೇಕು.

ಮುಖಗವಸವನ್ನು ಹಾಕುವುದು ಸರಕಾರ ಕಡ್ಡಾಯಗೊಳಿಸಿದೆ. ಜನರು ಅಗತ್ಯೆ ಕೆಲಸಗಳಿಗೆ ಮಾತ್ರ ಮನೆಯಿಂದ ಹೊರಗೆ ಬರಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡ ಅಷ್ಟೇ ಅತ್ಯಗತ್ಯವಾಗಿದೆ ಎಂದರು.

ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ರೋಷನ್ ಅವರು ಮಾತನಾಡಿ ಕಾರವಾರ ವೈದ್ಯಕೀಯ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವ ಐಸೋಲೇಷನ್ ವಾರ್ಡ್ ಕೇವಲ ಕೋವಿಡ್ -19 ಗೆ ಮಾತ್ರ ಸೀಮಿತವಲ್ಲ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ವೈರಾಣು ರೋಗಗಳಿಗೆ ಚಿಕಿತ್ಸೆ ನೀಡಲು ಇದು ಸಹಕಾರಿಯಾಗಲಿದೆ.

ಜಿಲ್ಲಾಡಳಿತವು ಕೋವಿಡ್-19 ಸಮರ್ಥವಾಗಿ ನಿಭಾಯಿಸಲು ವೆಂಟಿಲೇಟರ್ಸ್, ವೈದ್ಯಕೀಯ ಉಪಕರಣ ಹಾಗೂ ಅಗತ್ಯ ಔಷಧಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಸಂಗ್ರಹಿಸಿ ಇಟ್ಟಿರುತ್ತದೆ ಎಂದರು.

ಡಾ. ಹೇಮಗಿರಿ, ಡಾ. ಮಂಜುನಾಥ ಭಟ್ ಹಾಗೂ ಮೈಕ್ರೋಬೈಯೋಲೋಜಿ ಮುಖ್ಯಸ್ಥರು ಕೋವಿಡ್-19 ರೋಗಿ ಆಸ್ಪತ್ರೆಗೆ ಆಗಮಿಸಿದ ಸಂದರ್ಭದಲ್ಲಿ ಯಾವ ಯಾವ ಹಂತದಲ್ಲಿ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತದೆ ಎಂಬುದರ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರಾದ ಡಾ.ಗಜಾನನ ನಾಯ್ಕ. ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಶಿವಾನಂದ ಕುಡ್ತಕರ್. ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ. ಎನ್. ಅಶೋಕ ಕುಮಾರ, ಜಿಲ್ಲಾ ಸರ್ವೇಕ್ಷಾಧಿಕಾರಿ ಡಾ. ವಿನೋದ ಭೂತೆ ಉಪಸ್ಥಿತರಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ