ಅಮೆರಿಕ ರಾಜಧಾನಿಯಲ್ಲೂ ಮುಂಬೈ ಮಾದರಿ ಪ್ರವಾಹ!

48

ವಾಷಿಂಗ್ಟನ್: ಮಹಾಮಳೆಗೆ ರಸ್ತೆ ತುಂಬ ನೀರು ತುಂಬಿಕೊಂಡು, ಜನಜೀವನ ಅಸ್ತವ್ಯಸ್ತವಾಗಿದ್ದ ಮುಂಬೈ ನಗರದ ರೀತಿಯಲ್ಲೇ ಅಮೆರಿಕದ ರಾಜಧಾನಿ ವಾಷಿಂಗ್ಟನ್ ಕೂಡ ಸೋಮವಾರ ಭೀಕರ ಮಳೆಯಿಂದಾಗಿ ಕಂಗಾಲಾಗಿದೆ.

ರಸ್ತೆ, ರೈಲ್ವೆ ಫ್ಲಾಟ್​ಫಾಮ್ರ್ ಹಾಗೂ ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಜನರು ಪರದಾಡುವಂತಾಗಿತ್ತು. ಸೋಮವಾರ ಬೆಳಗ್ಗೆ ಒಂದು ಗಂಟೆ ಅವಧಿಯಲ್ಲೇ ವಾಷಿಂಗ್ಟನ್ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ 84 ಮಿಲಿ ಮೀಟರ್ ಮಳೆ ಸುರಿದಿದೆ. ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಕಷ್ಟಪಡಬೇಕಾಯಿತು. ನೀರಿನ ಮಧ್ಯೆ ಕಾರುಗಳಲ್ಲಿ ಸಿಲುಕಿದ್ದ ಅನೇಕರು ಕಾರಿನ ಮೇಲೆ ಹತ್ತಿ ರಕ್ಷಣಾ ತಂಡ ಬರುವವರೆಗೂ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದರು.

ಶ್ವೇತಭವನಕ್ಕೂ ಬಂತು ನೀರು

ಶ್ವೇತ ಭವನಕ್ಕೂ ಮಳೆ ನೀರು ನುಗ್ಗಿ ಮಾಧ್ಯಮ ಪ್ರತಿನಿಧಿಗಳಿಗೆ ಮೀಸಲಿದ್ದ ಸ್ಥಳವನ್ನು ಆವರಿಸಿತ್ತು. ಪ್ರತಿಷ್ಠಿತ ಕಟ್ಟಡಗಳು ಹಾಗೂ ಅಮೆರಿಕದ ಪ್ರಸಿದ್ಧ ವಸ್ತುಸಂಗ್ರಹಾಲಯಗಳಿಗೂ ನೀರು ನುಗ್ಗುವ ಭೀತಿಯಿಂದಾಗಿ ಪ್ರವಾಸಿಗರ ಭೇಟಿ ನಿಷೇಧಿಸಲಾಗಿತ್ತು

ಸಾರಿಗೆ, ವಿದ್ಯುತ್ ಬಂದ್: ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ಭಾರೀ ಪ್ರಮಾಣದ ಮಳೆಯಿಂದಾಗಿ ಅನೇಕ ಮೆಟ್ರೋ ನಿಲ್ದಾಣಗಳ ಮೇಲ್ಛಾವಣಿ ಕೂಡ ಸೋರುತ್ತಿತ್ತು. ಪ್ರವಾಹದಲ್ಲಿ ಸಿಲುಕಿ ದ್ದವರನ್ನು ರಕ್ಷಣಾ ತಂಡಗಳು ಬೋಟ್​ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ರವಾನಿಸಿದ್ದವು. ಅನೇಕ ಕಡೆಗಳಲ್ಲಿ ರಸ್ತೆಗಳೇ ಕುಸಿದು ಹೋಗಿದ್ದವು. ವಾಷಿಂಗ್ಟನ್​ನ ರೊನಾಲ್ಡ್ ರೇಗನ್ ವಿಮಾನ ನಿಲ್ದಾಣಕ್ಕೂ ನೀರು ನುಗ್ಗಿದ್ದರಿಂದ ಕೆಲ ಸಮಯದವರೆಗೆ ಏರ್​ಪೋರ್ಟ್​ನ

ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಫೆಡ್ರಿಕ್ ಮುನ್ಸಿ ಪಲ್ ಏರ್​ಪೋರ್ಟ್​ನಲ್ಲೂ ವಿಮಾನಗಳ ಗಾಲಿಗಳು ಮುಚ್ಚುವಷ್ಟು ಪ್ರಮಾಣದಲ್ಲಿ ಮಳೆ ನೀರು ತುಂಬಿತ್ತು. ಪ್ರಮುಖ ರೈಲ್ವೆ ನಿಲ್ದಾಣಗಳಾದ ಘಟ್ಕೊಪರ್, ಕಂಜುರ್

ಮಾರ್ಗ್, ಸೈಒನ್ ಸೇರಿ ಅನೇಕ ಕಡೆ ಹಳಿಗಳು ಜಲಾವೃತವಾಗಿದ್ದರಿಂದ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಾಷಿಂಗ್ಟನ್ ಸ್ಥಿತಿ ಮುಂಬೈನಲ್ಲಿ ಮಳೆ ಬಂದಾಗ ಉಂಟಾಗುವ ದೃಶ್ಯಗಳಂತೆ ಕಂಡು ಬರುತ್ತಿತ್ತು.
Leave a Reply

Your email address will not be published. Required fields are marked *