BREAKING NEWS
Search

ಚಕ್ಕಾಗಳ ರೀತಿ ಮುಂಬೈನಲ್ಲಿ ಕುಳಿತಿದ್ದೇಕೆ!ನಾನು ಮಾಡಿದ ತಪ್ಪು ನೀವು ಮಾಡುತಿದ್ದೀರಿ:ಆನಂದ್ ಆಸ್ನೋಟಿಕರ್ ಕಿಡಿ!

756

ಕಾರವಾರ:-ಅತೃಪ್ತ ಶಾಸಕರು ಗಂಡಸ್ಥನ‌ ‌ಇದ್ದರೆ ಸದನಕ್ಕೆ ಬಂದು ವಿರುದ್ದ ಮತ ಹಾಕಬೇಕಿತ್ತು.ಚಕ್ಕಾಗಳ ‌ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದೇಕೆ ಎಂದು ಮಾಜಿ‌ ಸಚಿವ ಆನಂದ್ ಅಸ್ನೋಟಿಕರ್ ಕಿಡಿ ಕಾರಿದ್ದಾರೆ.

ಇಂದು ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಅವರು ಸುಪ್ರೀಂಕೋರ್ಟ್‌ನಲ್ಲಿ ಶಾಸಕರ ಅನರ್ಹತೆ ತಡೆ ಹಿಡಿಯುವ ಸಾಧ್ಯತೆ ಕಡಿಮೆಯಿದೆ,ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮನ್ನ ಅನರ್ಹ ಮಾಡಲಾಗಿತ್ತು,ಆಗ ನಾವು ಸುಪ್ರೀಂಕೋರ್ಟ್ ಮೆಟ್ಟಿಲನ್ನ‌ ಏರಿದ್ದೆವು,ನೋಟಿಸ್ ನೀಡದೆ ಅನರ್ಹತೆ ಮಾಡಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ನಮ್ಮ ಅನರ್ಹತೆ ರದ್ದಾಗಿತ್ತು.20 ದಿನಗಳ‌ ಕಾಲ ಅನರ್ಹ ಶಾಸಕರ ರಾಜಕೀಯವನ್ನ ರಾಜ್ಯದ ಜನತೆ ನೋಡಿದ್ದಾರೆ.ಸುಪ್ರೀಂಕೋರ್ಟ್ ಶಾಸಕರ ಅನರ್ಹತೆಯನ್ನ ಎತ್ತಿ ಹಿಡಿಯಲಿದೆ ಎಂದರು.

ನಾವು ಮಾಡಿದ ತಪ್ಪು ನೀವು ಮಾಡುತಿದ್ದೀರಿ!

ಆನಂದ್ ಆಸ್ನೋಟಿಕರ್. ಮಾಜಿ ಸಚಿವ.ಕಾರವಾರ

ನಾವು ಮಾಡಿದ ತಪ್ಪನ್ನು ನೀವು ಮಾಡುತಿದ್ದೀರಿ,ಕಾಂಗ್ರೆಸ್ ನವರು ಎಲ್ಲಾ ರೀತಿಯ ಸಹಕಾರ ಮಾಡಲು ತಯಾರಿದ್ದರು ಮಂತ್ರಿ ಮಾಡಲು ರೆಡಿ ಇದ್ದರು,ಎಲ್ಲರೂ ಒಂದು ಟೀಮ್ ಆಗಿ ಪ್ಲಾನ್ ಮಾಡಿ ಮಾಡಿದ್ದಾರೆ,ಒಳಗಿಂದ ಪ್ಲಾನ್ ನಡೆದಿದೆ,
ಆರುಸಾರಿ ಯಡಿಯೂರಪ್ಪ ನವರು ಸೋತ್ರು ಏಳನೇ ಸಾರಿ ಸೋಲಬಾರದು ಎಂದು ಎಲ್ಲಾ ಪ್ರೀಪ್ಲಾನ್ ಮಾಡಿ ಮಾಡಿದ್ದಾರೆ ಎಂದು ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಕಿಡಿಕಾರಿದ್ದಾರೆ.

ಯಡಿಯೂರಪ್ಪ ನವರ ಸರ್ಕಾರ ಉಪ ಚುನಾವಣೆ ಆಗುವ ವರಗೆ ಸರ್ಕಾರ ಮಾತ್ರ ಉಳಿಯುತ್ತದೆ,
ಎಲ್ಲರಿಗೂ ಸಚಿವನಾಗುವ ಆಸೆಯಿದೆ ಅವರಲ್ಲೇ ಗಲಾಟೆಗಳಾಗುತ್ತದೆಈ ಹಿನ್ನೆಲೆಯಲ್ಲಿ ಸರ್ಕಾರ ಬೀಳಲಿದೆ ಎಂದರು.

ಇನ್ನು ವಿಶ್ವನಾಥ ರವರು ಅಧ್ಯಕ್ಷಸ್ಥಾನ ಹೊಸ ಅಧ್ಯಕ್ಷರಿಗೆ ಕೊಡುವಾಗ ಮುಖದಲ್ಲಿ ಅದು ಕಾಣಲಿಲ್ಲ,ಆರುಸಾರಿ ಯಡಿಯೂರಪ್ಪ ನವರು ಸೋತ್ರು ಏಳನೇ ಸಾರಿ ಸೋಲಬಾರದು ಎಂದು ಎಲ್ಲಾ ಪ್ರೀಪ್ಲಾನ್ ಮಾಡಿ ಮಾಡಿದ್ದಾರೆ, ಈ ಹಿಂದೆ ನಮ್ಮ ಅನರ್ಹತೆಯ ಜಡ್ಜ್ ಮೆಂಟ್ ಗೆ ಈವರದ್ದನ್ನು ಹೊಲಿಸಬಾರದು,ನಮಗೆ ಸಮಯಾವಕಾಶ ಕೊಟ್ಟಿಲ್ಲ ಸಮಯಾವಕಾಶ ಕೊಡದೇ ನಮ್ಮನ್ನು ಸ್ಪೀಕರ್ ವಜಾ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ನಮಗೆ ನ್ಯಾಯ ಸಿಕ್ಕುತ್ತು ಆದರೆ ಇವರ ವಿಷಯದಲ್ಲಿ ಹಾಗಿಲ್ಲ, ಯಡಿಯೂರಪ್ಪನವರು ಎರಡು ದಿನದಲ್ಲಿ ಬಹುಮತ ತೊರಿಸಬೇಕಿತ್ತು ಆಗಲೇ ನಾವು ಬರುತ್ತಿಲ್ಲ ಎಂದು ಹೇಳಿದ್ದಾರೆ ಮಾಧ್ಯಮದಲ್ಲಿ ಸಹ ಬಂದಿದೆ.

ಪ್ರಜಾಪ್ರಭುತ್ವ ಉಳಿಯಲು ಈ ಸಲ ರಮೇಶ್ ಕುಮಾರ್ ಸ್ಪೀಕರ್ ಆದೇಶವನ್ನು ಕೊರ್ಟ ಎತ್ತಿ ಹಿಡಿಯುತ್ತದೆ,ಯಲ್ಲಾಪುರ ಶಾಸಕರಿಗೆ ಅನರ್ಹರಾದ ನಂತರ ಕ್ಷೇತ್ರಕ್ಕೆ ಬಂದ ನಂತರ ಎಲ್ಲವೂ ಅರ್ಥವಾಗುತ್ತದೆ,ನೀವು ಎಲ್ಲದಕ್ಕೂ ತಯಾರಿರಬೇಕು ನಿಮಗೆ ಒಳ್ಳೆಯ ಅವಕಾಶ ಇತ್ತು ನಾವು ಮಾಡಿದ ತಪ್ಪನ್ನು ನೀವು ಮಾಡುತಿದ್ದೀರಿ.

ಕಾಂಗ್ರೆಸ್ ನವರು ಎಲ್ಲಾ ರೀತಿಯ ಸಹಕಾರ ಮಾಡಲು ತಯಾರಿದ್ದರು ಮಂತ್ರಿ ಮಾಡಲು ರೆಡಿ ಇದ್ದರು,ಎಲ್ಲರೂ ಒಂದು ಟೀಮ್ ಆಗಿ ಪ್ಲಾನ್ ಮಾಡಿ ಮಾಡಿದ್ದಾರೆ ಎಂದು ಕಿಡಿ ಕಾರಿದರು.
Leave a Reply

Your email address will not be published. Required fields are marked *