ಪೆದ್ದ ರಾಹುಲ್ ಗಾಂಧಿ ಎಂದು ಟ್ಟೀಟ್ ಮಾಡಿ ಟಾಂಗ್ ನೀಡಿದ ಅನಂತಕುಮಾರ ಹೆಗಡೆ!

284

ಕಾರವಾರ:- ಪ್ರಧಾನಿ ಮೋದಿ ಟೀಕಿಸುವ ಭರದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಮುಖಭಂಗಕ್ಕೆ ಒಳಗಾಗಿದ್ದು ವಿಶ್ವವಿಖ್ಯಾತ ಆಕ್ಸ್‌ಫರ್ಡ್ ಡಿಕ್ಷ್ನರಿಯಲ್ಲಿ modilie ಎನ್ನುವ ಪದವು ಹೊಸದಾಗಿ ಸೇರಿದೆ. ಅದರ ಅರ್ಥ ಸತ್ಯವನ್ನು ತಿರುಚುವವ ಅಥವಾ ಸುಳ್ಳು ಹೇಳುವುದು.

ಈ ಪದವು ವಿಶ್ವದಾದ್ಯಂತ ಖ್ಯಾತಿ ಪಡೆದಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಆ ಟ್ವೀಟ್‌ ನೊಂದಿದೆ ಕೆಲವೊಂದು ಸ್ಕ್ರೀನ್ ಶಾಟ್ ಬಳಸಿದ್ದರು.

ಈ ಕುರಿತು ಆಕ್ಸ್‌ಫರ್ಡ್ ಟ್ಟೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದು ಇಂತಹಾ ಯಾವುದೇ ಪದ ತನ್ನ ಡಿಕ್ಷನರಿಯಲ್ಲಿ ಇಲ್ಲ ಅಲ್ಲದೆ ಅವರು ಬಳಸಿದ್ದ ಆ ಸ್ಕ್ರೀನ್ ಶಾಟ್ ನಕಲಿ ಎಂದು ಸ್ಪಷ್ಟನೆ ನೀಡಿದೆ.

ಈ ಕುರಿತು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ರಾಹುಲ್ ಗಾಂಧಿ ವಿರುದ್ಧ ಟ್ಟೀಟ್ ಮಾಡಿದ್ದು ಈ ಪೆದ್ದ ರಾಹುಲ್ ಗಾಂಧಿ ,ಅಂತರಾಷ್ಟೀಯ ಮೂರ್ಕತನದ ತಂತ್ರಗಳನ್ನು ಕರಗತ ಮಾಡಿಕೊಂಡವನೆಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ,ಹಾಗೂ ಮೂರ್ಖತನದ ಪರಮಾವಧಿಯನ್ನು ಮೆರೆದಿದ್ದಾರೆ. ಅವರ ಈ ಬೆಳವಣಿಗೆಯನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ ಎಂದು ಟ್ಟೀಟ್ ಮಾಡುವ ಮೂಲಕ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ.
Leave a Reply

Your email address will not be published. Required fields are marked *

error: Content is protected !!