ಸಂಸದ ಅನಂತಕುಮಾರ್ ಹೆಗಡೆಗೆ ಜೀವಬೆದರಿಕೆ ಕರೆ:ಶಿರಸಿಯಲ್ಲಿ ದೂರು ದಾಖಲು

766

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಇಂದು ನಡೆದಿದೆ.

ಇಂದು ಮುಂಜಾನೆ ಉರ್ದು ಮಿಶ್ರಿತ ಭಾಷೆಯಲ್ಲಿ ಜೀವ ಬೆದರಿಕೆ ಕರೆ ಮಾಡಿದ ಅನಾಮಧೇಯ ವ್ಯಕ್ತಿಯು ಹಿಂದಿನ ಬಾರಿ ಕರೆ ಮಾಡಿದಾಗ ದೂರು ನೀಡಿದ್ದೀಯ,ಪತ್ರಿಕೆಯಲ್ಲೂ ಸುದ್ದಿಯಾಗಿತ್ತು,ನಿನ್ನನ್ನು ಏನು ಮಾಡುತ್ತೀನಿ ನೋಡು, ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ ಅನಾಮಧೇಯ ವ್ಯಕ್ತಿಯು ಕರೆ ಕಟ್ ಮಾಡಿದ್ದಾನೆ.20/4/2019 ರಲ್ಲಿ ಹಾಗೂ 16/02/19 ರಲ್ಲಿ ಇದೇ ಮಾದರಿಯಲ್ಲಿ ಎರಡುಬಾರಿ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಅನಾಮಧೇಯ ಕರೆ ಹಿನ್ನಲೆ ಸಂಸದ ಆಪ್ತ ಕಾರ್ಯದರ್ಶಿ ಸುರೇಶ್ ಶಟ್ಟಿ ರವರಿಂದ ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ