ಪರಿಸರ ದಿನದ ಆಚರಣೆಯೇ ಹಾಸ್ಯಾಸ್ಪದ ಎಂದ್ರು ಅನಂತಕುಮಾರ್ ಹೆಗಡೆ ಏಕೆ ಗೊತ್ತಾ!

597


ಕಾರವಾರ (ಜೂ 05):- ಇಂದು ನಡೆಯುವ ಪರಿಸರ ದಿನಾಚರಣೆಯು ಒಂದು ಹಾಸ್ಯಾಸ್ಪದ ವಿಷಯ ಎಂದು ಸಂಸದ ಅನಂತಕುಮಾರ ಹೆಗಡೆ ಅಭಿಪ್ರಾಯಪಟ್ಟಿದ್ದಾರೆ.

ಅನಂತಕುಮಾರ್ ಹೆಗಡೆ ಹೇಳಿದ ವೀಡಿಯೋ ನೋಡಿ.
https://www.facebook.com/anantkumarhegde/

ಹಿಂದೂಗಳಿಗೆ ಪರಿಸರದ ಜೊತೆಗೆ ಬದುಕುವುದು ಸಂಪ್ರದಾಯ. ಪರಿಸರ ರಕ್ಷಣೆ ನಮ್ಮ ಕರ್ತವ್ಯ. ನಮ್ಮ ಜೀವನ ಪದ್ಧತಿ ಮೂಲ ಸನಾತನ ಆಶಯದಂತೆ ನಡೆದಲ್ಲಿ ಒಂದು ದಿನದ ಪರಿಸರ ದಿನದ ನಾಟಕ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.

ಪರಿಸರ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಸಂಸದ ಹೆಗಡೆ, ಹಿಂದೂಗಳಿಗೆ ಪರಿಸರ ದಿನಾಚರಣೆ ವಿಷಯವಲ್ಲ. ಪರಿಸರ ರಕ್ಷಣೆ ಬದುಕಲ್ಲಿ ನಡೆಸಿಕೊಂಡು ಬಂದಿರುವುದು.

ಬದುಕಿನ ಹಾದಿಯಿದು. ಹಿಂದೂ ಜೀವನದ ಪದ್ಧತಿ ಪ್ರಬುದ್ಧವಾಗಿದೆ. ಮತಿಗೆಟ್ಟ ಮೂಲಭೂತವಾಗಿಧಿಗಳು ಮಾತ್ರ ಇನ್ನೊಂದು ಕೋಮಿನ ವಿಚಾರಕ್ಕೆ ಹೋಲಿಸುತ್ತಾರೆ. ಅದಕ್ಕೆ ನಾವು ಏನೂ ಮಾಡಲು ಬರುವುದಿಲ್ಲ ಎಂದಿದ್ದಾರೆ.

ಪರಿಸರ ರಕ್ಷಣೆ ಹಿಂದೂಗಳಿಗೆ ಟಾಸ್ಕ್ ಅಲ್ಲ. ತಾಯಿಯ ಸೇವೆ ಮಗನ ಜನ್ಮಜಾತ ಕರ್ತವ್ಯ. ಅದು ಕೆಲಸವಲ್ಲ. ಕರ್ತವ್ಯ ಅದು. ಇದನ್ನು ಉಳಿಸುಕೊಂಡು ಬೆಳೆಸುಕೊಂಡು ಮುಂದಿನ ತಲೆಮಾರಿಗೆ ಹೀಗೆ ಇಡಬೇಕು ಎಂದು ಹೇಳಿದರು.
Leave a Reply

Your email address will not be published. Required fields are marked *

error: Content is protected !!