BREAKING NEWS
Search

ಕರ್ನಾಟಕದ ನಿಷೇಧಿತ ಅಂಜದೀವ ದ್ವೀಪ ಕ್ಕಾಗಿ ಗೋವ ಜನರ ರಾಜಕೀಯ ತಮ್ಮ ಜಾಗದಲ್ಲಿರೋ ಚರ್ಚ್ ಗೆ ಪೂಜೆ ಸಲ್ಲಿಸಲು ಅವಕಾಶಕ್ಕಾಗಿ ಕೇಂದ್ರಕ್ಕೆ ಪತ್ರ! ಕಾರವಾರಿಗರ ಅಕ್ರೋಶ!

378

ಕಾರವಾರ: ಗೋವಾ ಸರ್ಕಾರ ಹಾಗೂ ಅಲ್ಲಿನ ಜನರು ಒಂದಲ್ಲಾ ಒಂದು ವಿಷಯಕ್ಕಾಗಿ ಖ್ಯಾತೆ ತೆಗೆಯುತ್ತಲೇ ಇರುತ್ತಾರೆ.
ಮಹದಾಯಿ ಆಯ್ತು ಈಗ ಕಾರವಾರದ ಅರಬ್ಬಿ ಸಮುದ್ರದಲ್ಲಿರುವ ಪ್ರಾಚೀನ ಇತಿಹಾಸ ವಿರುವ ಅಂಜದೀವ ಕ್ಕೆ ಗೋವಾ ಜನತೆ ಕಣ್ಣು ಹಾಕಿದೆ.

ಕಾರವಾರ ವ್ಯಾಪ್ತಿಯ ಅರಬ್ಬಿ ಸಮುದ್ರದ ಅಂಜದೀವ ನಡುಗಡ್ಡೆ ಹಿಂದು ಮತ್ತು ಕ್ರಿಶ್ಚಿಯನ್ ಧಾರ್ಮಿಕತೆಯಿಂದಾಗಿ ವರ್ಷಕ್ಕೊಮ್ಮೆ ಗೋವಾ ಹಾಗೂ ಕರ್ನಾಟಕ ರಾಜ್ಯದ ಗಮನ ಸೆಳೆಯುತ್ತದೆ.

ಚರ್ಚ್ ನ ಒಳ ನೋಟ

ಕರ್ನಾಟಕ ಹಾಗೂ ಗೋವಾ ಗಡಿಯಲ್ಲಿರುವ ಈ ದ್ವೀಪ ಎರಡೂ ರಾಜ್ಯಗಳು ತಮ್ಮದೆನ್ನುವ ವಾದದ ಮೂಲಕ ಇಂದಿಗೂ ಗಡಿ ವಿವಾದದ ಕಿಚ್ಚು ಹಚ್ಚಿರುವ ಈ ದ್ವೀಪ ಈಗ ಮತ್ತೊಮ್ಮೆ ಸುದ್ದಿಯಾಗುತ್ತಿದೆ.

ಈ ದ್ವೀಪ ಸುದ್ದಿಯಾಗಲು ಕಾರಣ ಗೋವಾದ ವ್ಯಕ್ತಿಯೋರ್ವರು ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದಿರುವುದು.

ಪತ್ರದಲ್ಲಿ ಗೋವಾಕ್ಕೆ ಸೇರಿರುವ ಈ ದ್ವೀಪದಲ್ಲಿ 15 ನೇ ಶತಮಾನದ ಚರ್ಚ್ ಇದ್ದು ಇಲ್ಲಿ ಧಾರ್ಮಿಕ ಪ್ರಾರ್ಥನೆ ಯನ್ನು ನೆರವೇರಿಸಲು ಅವಕಾಶ ಕೋರಿರುವುದು ಹಾಗೂ ಈ ವಿಷಯವಾಗಿ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ನೀಡುವಂತೆ ಗೋವಾ
ಸರ್ಕಾರಕ್ಕೆ ಪತ್ರ ಬರೆದಿರುವುದು ಕನ್ನಡಿಗರನ್ನು ಕೆರಳಿಸಿದೆ.

ಹೌದು ಅಂಜದೀವ ದ್ವೀಪ ಕಾರವಾರ ವ್ಯಾಪ್ತಿಯಲ್ಲಿ ಅರಬ್ಬಿ ಸಮುದ್ರದ ನಡುವಿನಲ್ಲಿದೆ. ಕಳೆದ ನಾಲ್ಕೈದು ದಶಕದ ಹಿಂದೆ ಇಲ್ಲಿ ನಿರಂತರವಾಗಿ ಕ್ರಿಶ್ಚಿಯನ್ ಹಾಗೂ ಹಿಂದು ಧರ್ಮದ ಧಾರ್ಮಿಕ ಕೇಂದ್ರವಾಗಿ ದೊಡ್ಡ ಹಬ್ಬದ ಸಂಭ್ರಮ ಮನೆ ಮಾಡ್ತಿತ್ತು, ಆದ್ರೆ ಈಗ ಅಲ್ಲಿ ಕೇವಲ ದೇವರು ಮಾತ್ರ ಇದೆ ಜಾತ್ರೆ ಆಚರಣೆಗೆ ಅವಕಾಶವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

ಈಗ ಈ ದ್ವಿಪ ರಕ್ಷಣಾ ಇಲಾಖೆಯ ಅಂಗ ಸಂಸ್ಥೆ ನೌಕಾಪಡೆಯ ಸುಪರ್ಧಿಯಲ್ಲಿದೆ. ಭದ್ರತಾ ಹಿತಾದೃಷ್ಟಿಯಿಂದ ಈಗ ಕಳೆದ ಎರಡು ದಶಕದಿಂದ ಇಲ್ಲಿ ಧಾರ್ಮಿಕ ಕಾರ್ಯಕ್ಕೆ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ.

ಆದ್ರೆ ಈಮಧ್ಯೆ ಕಳೆದ ಮೂರು ವರ್ಷದಿಂದ ಗೋವಾ ರಾಜ್ಯದ ಕ್ರಿಶ್ಚಿಯನ್ ಧರ್ಮದ ಪ್ರಮುಖರು ಅಂಜದೀವ ಗೋವಾ ರಾಜ್ಯದ್ದು ಇಲ್ಲಿ ನಮಗೆ ಧಾರ್ಮಿಕ ಕಾರ್ಯಕ್ಕೆ ಅವಕಾಶ ಕೋರಿ ರಕ್ಷಣಾ ಇಲಾಖೆಗೆ ಪತ್ರ ಬರೆದಿದ್ರು. ಆದ್ರೂ ಯ್ಯಾವುದೆ ಪ್ರಯೋಜನವಾಗಿಲ್ಲ, ಈಗ ಗೋವಾ ರಾಜ್ಯದ ಕ್ರಿಶ್ಚಿಯನ್ ಪ್ರಮುಖನೋರ್ವ ಪ್ರಧಾನಿ ಕಚೇರಿಗೆ ಅಂಜದೀವ ನಮ್ಮ ರಾಜ್ಯಕ್ಕೆ ಸೇರಿದ್ದು ಅಲ್ಲಿ ಹಬ್ಬ ಆಚರಣೆಗೆ ಅವಕಾಶ ಮಾಡಿಕೊಡಿ ಎಂದು ಪತ್ರ ಬರೆದಿದ್ದು ಕಾರವಾರಸುತ್ತಮುತ್ತಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ.

“ಈ ದ್ವೀಪ ಕರ್ನಾಟಕ ಕ್ಕೆ ಸೇರಿದೆ‌. ಗೋವಾ ರಾಜ್ಯಕ್ಕೆ ಸೇರುವುದಿಲ್ಲ. ಕೇಂದ್ರ ಸರ್ಕಾರ ಕ್ರಿಶ್ಚಿಯನ್ ರವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದರೆ ಅಲ್ಲಿರುವ ಹಿಂದೂ ದೇವಸ್ಥಾನ ಅಭಿವೃದ್ಧಿ ಹಾಗು ಪೂಜೆಗೆ ಅವಕಾಶ ಕೊಡಬೇಕು.”

          -ಬಿ.ಎಸ್ ಪೈ .

ಹಿಂದು ಜಾಗರಣಾ ವೇದಿಕೆ.

ವಿಕಿಪೀಡಿಯ ದಲ್ಲಿ ಗೋವಾ ಕ್ಕೆ ಸೇರಿದ ಅಂಜದೀವ.!

ಗೂಗಲ್ ನಲ್ಲಿ ಅಂಜದೀವ ಎಂದು ವಿಕಿಪೀಡಿಯ ದಲ್ಲಿ ಶೋಧ ಮಾಡಿದರೆ ಗೋವಾ ರಾಜ್ಯದ ಹೆಸರಿನಲ್ಲಿ ಬಿತ್ತರವಾಗುತ್ತದೆ.

ಇನ್ನೂ ಈ ಅಂಜದೀವ ದ್ವೀಪ ಇಲ್ಲಿವರೆಗೂ ಗೊವಾ ರಾಜ್ಯದ್ದೋ ಅಥವಾ ಕರ್ನಾಟಕದ್ದೋ ಎನ್ನೋದು ತುಂಬಾ ಗೊಂದಲದಲ್ಲೆ ಇದ್ದು ಎರಡೂ ರಾಜ್ಯಗಳು ತಮ್ಮ ದೆಂದು ವಾಧಿಸುತ್ತದೆ.

ವಾಸ್ಕೋಡಿ ಗಾಮ ಮೊದಲು ಈ ದ್ವೀಪಕ್ಕೆ ಬಂದಿದ್ದ ಎಂಬ ದಾಖಲೆ ಹೇಳುತ್ತದೆ. ಇದಲ್ಲದೇ ಈ ದ್ವೀಪ ಶಿವಾಜಿ ಮಹಾರಾಜನ ಕಾಲದಲ್ಲಿ ಆತನ ವಶದಲ್ಲಿ ಇತ್ತು.
ಹೀಗಾಗಿ ಇಲ್ಲಿ ದುರ್ಗಾ ದೇವಿಯ ದೇವಸ್ಥಾನ ಸಹ ಕಟ್ಟಿಸಲಾಗಿದ್ದು ಹಿಂದುಗಳು ಪೂಜೆ ಗೈಯುತಿದ್ದರು.
ನಂತರ ಈ ದ್ವೀಪ ಪೋರ್ಚುಗೀಸರು ತಮ್ಮ ಹಿಡಿತಕ್ಕೆ ಪಡೆದುಕೊಂಡು ದೇವಸ್ಥಾನವನ್ನು ಒಡೆದುಹಾಕಿ ಚರ್ಚ್ ಕಟ್ಟಿಸಿದ್ದರು. ಭಾರತಕ್ಕೆ ಸ್ವತಂತ್ರ ಬಂದ ನಂತರ ಗೋವಾ ವಿಮೋಚನೆ ನಂತರ ಈ ದ್ವೀಪವನ್ನು ಯುದ್ದದ ಮೂಲಕ ಭಾರತಕ್ಕೆ ಬಿಟ್ಟುಕೊಟ್ಟರು.

ಐತಿಹಾಸಿಕ ಚರ್ಚ್


ಗೋವಕ್ಕೆ ಸ್ವತಂತ್ರ ಬರುವುದಕ್ಕೂ ಪೂರ್ವ ಕರ್ನಾಟಕಕ್ಕೆ ಸ್ವತಂತ್ರ ಬಂದಿದ್ದರಿಂದ ಈ ದ್ವೀಪ ಗೋವಾ ಕ್ಕೆ ಸೇರಬೇಕು ಎಂಬ ವಾದ ಗೋವಾದ್ದು ಹೀಗಾಗಿ ಗೋವಾ ತನ್ನದೆಂದು ವಾದಿಸಿದ್ರೆ ಕರ್ನಾಟಕದ ಅರಬ್ಬಿ ಸಮುದ್ರದಲ್ಲಿ ಇರುವುದರಿಂದ ಹಾಗೂ ಕರ್ನಾಟಕದ ಕಾರವಾರದ ಒಳ ಪ್ರದೇಶದಲ್ಲಿ ಬರುವುದರಿಂದ ತನ್ನ ದೆಂಬ ವಾದ ಕರ್ನಾಟಕದ್ದು ,ಎರಡೂ ರಾಜ್ಯಗಳು ತಮ್ಮ ಸುಪರ್ಧಿಯ ಗಡಿಭಾಗ ಎಂದು ವಾಧಿಸುತ್ತವೆ.

ಪ್ರವೇಶ ಸ್ಥಳ
ಅಂಜದೀವ ದ ಹೊರ ನೋಟ

ಆದ್ರೆ ಈ ದ್ವೀಪ ಕಾರವಾರದಿಂದ ಎಂಟು ಕಿ.ಮೀ ದೂರದ ಸಮುದ್ರದಲ್ಲಿದೆ. ಹೀಗಾಗಿ ಇಲ್ಲಿ ಹಿಂದೆ ಶಿವಾಜಿ ಕಾಲದಲ್ಲಿದ್ದ ಅಂಜು ದುರ್ಗ ದೇವಿ ಮಂದಿರ ವಿದ್ದು ಜಾಗ ಚರ್ಚ್ ಆಗಿದ್ದರೂ ದೇವಿ ವಿಗ್ರಹವಿದ್ದು ಕಾರವಾರದವರು ಕೂಡಾ ಹಬ್ಬ ಹರಿದಿನ ಆಚರಣೆ ಮಾಡ್ತಿದ್ರು.

ಈಗ ಕೇಂದ್ರ ಸರಕಾರ ಒಂದುವೇಳೆ ಭದ್ರತಾ ಹಿತಾದೃಷ್ಟಿಯನ್ನು ಕೂಡಾ ಲೆಕ್ಕಿಸದೆ ಗೊವಾ ರಾಜ್ಯದ ಕ್ರಿಶ್ಚಿಯನ್ ಧರ್ಮದವರನ್ನ ಧಾರ್ಮಿಕ ಕಾರ್ಯಕ್ಕೆ ಅವಕಾಶ ಕಲ್ಪಿಸಿಕೊಟ್ರೆ ಅಲ್ಲಿ ಹಿಂದು ಧಾರ್ಮಿಕ ಕಾರ್ಯಕ್ಕೂ ಕರ್ನಾಟಕದವರಿಗೆ ಅವಕಾಶ ಮಾಡಿಕೊಡಿ ಎನ್ನುವ ಕೂಗು ಕೇಳಿ ಬರುತ್ತಿದೆ.

ಕೇವಲ ಗೋವಾ ರಾಜ್ಯದ ಕ್ರಿಶ್ಚಿಯನ್ ಧರ್ಮದವರನ್ನ ವೀಶ್ವಾಸಕ್ಕೆ ತೆಗೆದುಕೊಂಡು ಅವಕಾಶ ಕಲ್ಪಿಸಿದ್ದೆ ಆದಲ್ಲಿ ನೌಕಾ ನೆಲೆಗೆ ಭದ್ರತೆಯಲ್ಲಿ ಸಾಕಷ್ಟು ತೊಂದರೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಯಾವ ಕಾರಣಕ್ಕೂ ಎರಡು ಧರ್ಮದವರಿಗೂ ಸಹ ಇಲ್ಲಿಗೆ ಪ್ರವೇಶ ನೀಡಬಾರದು ಎನ್ನುತ್ತಾರೆ ಕಾರವಾರ ಹಿರಿಯ ಪತ್ರಕರ್ತ ದೀಪಕ್ ಶಣೈ.

ದಶಕದಿಂದ ಕರ್ನಾಟಕ,ಗೋವಾ ರಾಜ್ಯದ ಕಗ್ಗಂಟಾಗಿರುವ ಅಂಜದೀವ ದ್ವಿಪದ ಹಕ್ಕಿನ ಸಮಸ್ಯೆ ಈಗ ಕೇಂದ್ರ ಸರಕಾರದ ಮುಂದಿದೆ.ಮುಂದೆ ಇಲ್ಲಿ ಭದ್ರತೆ ಮುಖ್ಯವೋ ಅಥವಾ ಧಾರ್ಮಿಕ ಪರಂಪರೆ ಮುಖ್ಯವೋ ಎನ್ನೋದು ಕೇಂದ್ರವೇ ನಿರ್ಧಾರ ಮಾಡಬೇಕಿದ್ದು ಕರ್ನಾಟಕ,ಗೋವಾ ರಾಜ್ಯದ ಗಡಿ ಸಮಸ್ಯೆಗಳ ಜೊತೆ ಎರಡು ಧರ್ಮಗಳ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿ ಈ ದ್ವೀಪ ನಿಂತಿದೆ.
Leave a Reply

Your email address will not be published. Required fields are marked *