ಅಂಕೋಲಾ|ಗಜನಿ ಹೊಳೆಯಲ್ಲಿ ಬಿದ್ದು ಬಾಲಕ ಸಾವು!

603

ಅಂಕೋಲಾ :- ಮನೆಯ ಬಳಿ ಆಟವಾಡುತ್ತಿದ್ದ ಬಾಲಕನೋರ್ವ ಆಕಸ್ಮಿಕವಾಗಿ ಗಜನಿ ಹೊಳೆಯಲ್ಲಿ ಬಿದ್ದು ಮೃತಪಟ್ಟ ಘಟನೆ ಬುಧವಾರ ಸಂಜೆ ಅಂಕೋಲ ತಾಲ್ಲೂಕಿನ ಅಗ್ರಗೋಣ ಗ್ರಾಮಪಂಚಾಯತ್ ವ್ಯಾಪ್ತಿಯ ಜೂಗದಲ್ಲಿ ನಡೆದಿದೆ.

ಐದು ವರ್ಷ ಪ್ರಾಯದ ಆರ್ಯನ್ ಚಂದ್ರಕಾಂತ ಹರಿಕಂತ್ರ ಮೃತಪಟ್ಟ ಬಾಲಕನಾಗಿದ್ದಾನೆ.

ಈತ ಮಕ್ಕಳೊಂದಿಗೆ ಆಟವಾಡುತ್ತಿರುವ ವೇಳೆ ಮನೆಯ ಪಕ್ಕದಲ್ಲೇ ಇರುವ ಗಜನಿ ಹೊಳೆಯಲ್ಲಿ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ್ದಾನೆ.

ಸ್ಥಳಕ್ಕೆ ಪಿಎಸ್ಐ ಸಂಪತ್ ಆಗಮಿಸಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದು, ಘಟನೆ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

http://www.kannadavani.news/sirsi-mathigatta-landslide-jeevajala-karyapade-president-srinivas-hebbar-assists-victims-help/
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ