add

ಅಂಕೋಲ:ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ತಾಯಿ,ಮಗ ಸಾವು.

3866

ಅಂಕೋಲಾ : ಯಕ್ಷಗಾನ ನೋಡಿ ಬೈಕನಲ್ಲಿ ಮನೆಗೆ ಮರಳುತ್ತಿರುವಾಗ ಬೈಕ್ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಇದ್ದ ತಾಯಿ ಮಗ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾ.ಹೆ66 ರಾಮನಗುಳಿಯಲ್ಲಿ ನಡೆದಿದೆ.

ಅಚವೆ ಅಂಗಡಿಬೈಲ ನಿವಾಸಿಗಳಾದ ಹರಿಹರ ರವಿ ಸಿದ್ದಿ ಮತ್ತು ಇತನ ತಾಯಿ ಬೇಬಿ ರವಿ ಸಿದ್ದಿ ಮೃತಪಟ್ಟವರು.

ಇವರು ಕೊಡ್ಲಗದ್ದೆಯಲ್ಲಿ ಯಕ್ಷಗಾನ ನೊಡಲು ಅಂಗಡಿಬೈಲನಿಂದ ಬಂದಿದ್ದರು.

ಯಕ್ಷಗಾನ ಮುಗಿದ ಬಳಿಕ ,ರಾಮನಗುಳ ಬಳಿ ಇನ್ನೊಂದು ವಾಹನಕ್ಕೆ ಓವರಟೇಕ ಮಾಡಲು ಹೊದಾಗ ,ಎದುರಿನಿಂದ ವಾಹನ ಬಂದ ಕಾರಣ ಬಲಗಡೆ ತಿರುಗಿ ಅಲ್ಲಿರುವ ವಿದ್ಯುತ್ ಕಂಬಕ್ಕೆ ಬಡಿದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಅಂಕೋಲ ಸಿಪಿಐ ಕೃಷ್ಣಾನಂದ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ