ಅಂಕೋಲದಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ ಕಳ್ಳತನ.

878

ಕಾರವಾರ :- ಅಂಕೋಲಾ ತಾಲೂಕಿನ ಬಾಸಗೋಡ ಕೋಗ್ರೆ ಗ್ರಾಮದಲ್ಲಿ ಶನಿವಾರ ರಾತ್ರಿ ಮನೆಯಲ್ಲಿ ಕಳ್ಳತನವಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಮಹಾಬಲೇಶ್ವರ ಸಣ್ಣಕೂಸ ಗೌಡ ಅವರ ಹೊಸ ಮನೆಯಲ್ಲಿ ಕಳವು ಮಾಡಲಾಗಿದೆ.

ಮನೆಯ ಮುಂಬಾಗಿಲಿನ ಕಬ್ಬಿಣದ ಗ್ರಿಲ್​ಗೆ ಹಾಕಿದ ಬೀಗವನ್ನು ಮುರಿದು, ಮನೆಯೊಳಗೆ ಪ್ರವೇಶಿಸಿದ ಕಳ್ಳರು ಬೆಡ್ ರೂಮ್ ನ ಬಾಗಿಲಿನ ಲಾಕ್ ಕಟ್ ಮಾಡಿ, ಕಪಾಟಿನಲ್ಲಿದ್ದ 27 ಗ್ರಾಂ.ನ 1 ನೆಕ್ಲೆಸ್, 15 ಗ್ರಾಂನ 2 ಚೈನ್ , 10 ಗ್ರಾಂ.ನ 3 ಉಂಗುರ ಸೇರಿ ಒಟ್ಟು ಅಂದಾಜು 1 ಲಕ್ಷ 82 ಸಾವಿರ ರೂ. ಮೌಲ್ಯದ ಬಂಗಾರದ ಆಭರಣ ಕಳವು ಮಾಡಿರುವುದಾಗಿ ಮಹಾಬಲೇಶ್ವರ ಗೌಡ ದೂರು ನೀಡಿದ್ದಾರೆ. ಡಿವೈಎಸ್ಪಿ ಅರವಿಂದ ಕಲಗುಜ್ಜಿ ಮಾರ್ಗದರ್ಶನದಲ್ಲಿ ಸಿಪಿಐ ಕೃಷ್ಣಾನಂದ ನಾಯಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ