BREAKING NEWS
Search

ಅಂಕೋಲದಲ್ಲಿ ಉಂಡ ಮನೆಗೆ ದ್ರೋಹ- ಅಡಿಕೆ ಕದ್ದು ಮಾನ ಹರಾಜು ಹಾಕಿಸಿಕೊಂಡ ಕಳ್ಳರು.

1472

ಅಂಕೋಲಾ : ತಾನು ಕೆಲಸ ಮಾಡುತಿದ್ದ ಮನೆಯಲ್ಲೇ ಪಕ್ಕದಮನೆಯ ಸ್ನೇಹಿತನೊಂದಿಗೆ ಸೇರಿ ಮನೆಯಲ್ಲಿ ಇದ್ದ ಅಡಿಕೆಯನ್ನು ಕದ್ದಿದ್ದ ಕಳ್ಳರನ್ನು ಸಿಪಿಐ ಸಂತೋಷ್ ಶಟ್ಟಿ ನೇತ್ರತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಉತ್ತರ ಕನ್ನಡ ಜಿಲ್ಲೆಯಅಂಕೋಲಾ ತಾಲೂಕಿನ ನೇವಳಸೆ ಗ್ರಾಮದಲ್ಲಿ ಘಟನೆ ನಡೆದಿದೆ.

ನೆವಳಸೆ ಗ್ರಾಮದ ಆನಂದು ನಾಯ್ಕ ಮತ್ತು ಚಂದುಮಠ ನಿವಾಸಿ ಮಾರುತಿ ಗೌಡ ಅಡಿಕೆ ಕದ್ದು ಪೊಲೀಸ ಅಥಿತಿಯಾದವರಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಘಟನೆ ಏನು?

ಅಂಕೋಲಾ ತಾಲೂಕಿನ ನೆವಳಸೆಯ ಮಾದೇವ ಹುಲಿಯಾ ಗೌಡ ಎನ್ನುವವರ ಮನೆಯ ಮುಂಭಾಗದಲ್ಲಿದ್ದ ಅಡಿಕೆ ಚೀಲಗಳು ಕಳ್ಳತನವಾಗಿತ್ತು . ಈ ಕುರಿತು ಮಾಲೀಕನ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಅಂಕೋಲಾ ಪೊಲೀಸರು ತನಿಖೆ ಕೈಗೊಂಡಿದ್ದರು.

ಉಂಡ ಮನೆಗೆ ದ್ರೋಹ


ಮಾದೇವ ಗೌಡರು ತಮ್ಮ ಜಮೀನಿನಲ್ಲಿ ಬರುವ ಆಧಾಯದಲ್ಲಿ ಮನೆ ಕಟ್ಟಿಸುತಿದ್ದರು. ಈ ಮನೆ ನಿರ್ಮಾಣಕ್ಕೆ ಆರೋಪಿ ಚಂದುಮಠದ ನಿವಾಸಿ ಮಾರುತಿ ಗೌಡ ಕಟ್ಟಡ ನಿರ್ಮಾಣ ಕೆಲಸ ಮಾಡುತಿದ್ದ. ಇನ್ನು ಮನೆಯ ಬಾಗಿಲು ನಿರ್ಮಾಣಕ್ಕಾಗಿ ಹಣ ಸಂಗ್ರಹದಲ್ಲಿದ್ದ ಮಾದೇವ ಗೌಡರು ತೋಟದಲ್ಲಿ ಬೆಳದಿದ್ದ ಅಡಿಕೆಯನ್ನು ಮಾರಲು ಹೊಸ ಮನೆಯಲ್ಲಿಯೇ ಮೂಟೆ ಕಟ್ಟಿಟ್ಟಿದ್ದರು. ಇದನ್ನು ಗಮನಿಸಿದ್ದ ಮಾರುತಿ ಗೌಡ ಅಡಿಕೆಗೆ ಉತ್ತಮ ಬೆಲೆ ಇರುವುದರಿಂದ ದುರಾಸೆಗೆ ಬಿದ್ದು ಈತ ಗೌಡರ ಮನೆಯ ಪಕ್ಕದವನೇ ಆದ ಸಿಹಿ ತಿಂಡಿ ವ್ಯಾಪಾರ ಮಾಡುತಿದ್ದ ಆನಂದು ನಾಯ್ಕ ನ ಜೊತೆ ಗೂಡಿ ಅಡಿಕೆಯನ್ನು ಎಗರಿಸಿದ್ದಾರೆ.

ಆರೋಪಿತರಿಂದ ವಶಪಡಿಸಿಕೊಂಡಿದ್ದೆಷ್ಟು?

ಖಚಿತ ಮಾಹಿತಿ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ಕಾರಿನ ಸೀಟಿನ ಒಳಗೆ ಅಡಗಿಸಿಟ್ಟಿದ್ದ ಅಂದಾಜು ಮೌಲ್ಯ ₹ 33,390 ರೂ. ಮೌಲ್ಯದ 8ಚೀಲಗಳಲ್ಲಿ ತುಂಬಿಡಲಾದ 1 ಕ್ವಿಂಟಲ 38 ಕಿ.ಗ್ರಾಂ ತೂಕದ ಸಿಪ್ಪೆ ಅಡಿಕೆ ಹಾಗೂ ಅಡಿಕೆ ಕಳ್ಳ ಸಾಗಾಟಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಇವರಿಬ್ಬರೂ ಈ ಹಿಂದೆ ಕೂಡ ಸಣ್ಣಪುಟ್ಟ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದ್ದು ತನಿಖೆ ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಸಿ.ಪಿ.ಐ ಸಂತೋಷ ಶೆಟ್ಟಿ, ಪಿ.ಎಸ್.ಐ ಪ್ರವೀಣಕುಮಾರ, ಹವಾಲ್ದಾರ ಮೋಹನದಾಸ ಶೇಣ್ವಿ, ಸಿಬ್ಬಂದಿಗಳಾದ ಮಂಜುನಾಥ ಲಕ್ಷ್ಮಿಪುರ ಭಗವಾನ ಗಾಂವಕರ, ಶೇಖರ್ ಸಿದ್ದಿ, ಪರಮೇಶಿ, ಜಗದೀಶ ನಾಯ್ಕ ಪಾಲ್ಗೊಂಡಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ