ಇಂದಿನ ದಿನ ಭವಿಷ್ಯ

278

ಗುರುವಾರ, ಜೂನ್ 13 2019
ಸೂರ್ಯೋದಯ : 5:52 am
ಸೂರ್ಯಾಸ್ತ: 6:46 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಜ್ಯೇಷ್ಠ
ಪಕ್ಷ : ಶುಕ್ಲಪಕ್ಷ
ತಿಥಿ : ಏಕಾದಶೀ 16:49
ನಕ್ಷತ್ರ :ಚಿತ್ತ 10:55
ಯೋಗ :ಪರಿಘ 25:23
ಕರಣ:ವಿಷ್ಟಿ 16:49 ಬಾವ 28:07

ಅಭಿಜಿತ್ ಮುಹುರ್ತ:11:54 am – 12:45 pm
ಅಮೃತಕಾಲ :1:43 am – 3:17 am

ರಾಹುಕಾಲ-1:55 pm – 3:31 pm
ಯಮಗಂಡ ಕಾಲ-5:56 am – 7:32 am
ಗುಳಿಕ ಕಾಲ- 9:08 am – 10:43 am
ಮೇಷ :-
ಈ ದಿನ ಅಲ್ಪ ಹಿನ್ನಡೆ ನಿಮ್ಮದಾಗಲಿದೆ, ಚಿನ್ನ, ಬೆಳ್ಳಿ ವರ್ತಕರಿಗೆ ಹೂಡಿದ ಬಂಡವಾಳದಲ್ಲಿ ಜಾಗ್ರತೆ ವಹಿಸಬೇಕಾಗುತ್ತದೆ. ಮಹತ್ವದ ಕೆಲಸಗಳು ವಿಳಂಬಗತಿಯಲ್ಲಿ ನಡೆದಾವು ನೌಕರ ವರ್ಗಕ್ಕೆ ಅಸಮಾಧಾನ ತಂದೀತು,ಆರೋಗ್ಯದಲ್ಲಿ ಅಲ್ಪ ಬದಲಾವಣೆ,ಆಯಾಸ ಕಾಡಲಿದೆ.

ವೃಷಭ:-
ಈ ದಿನ ಮಿಶ್ರ ಫಲ ಪಡೆಯುವಿರಿ ,ಬಂಡವಾಳದಾರರಿಗೆ ಲಾಭದಾಯಕ ಆದಾಯ ತಂದರೂ ವಂಚನೆಗೆ ಆಸ್ಪದವಾದೀತು. ವೈವಾಹಿಕ ಸಂಬಂಧಗಳು ಜೋಡಣೆಯಾಗಲಿವೆ. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ.

ಮಿಥುನ:-
ಆಗಾಗ ಉದ್ವೇಗದ ಸ್ಥಿತಿ ಯಿಂದಾಗಿ ಕೆಲವೊಮ್ಮೆ ವಿವೇಚನೆ ಕೈಕೊಟ್ಟಿàತು. ವೃತ್ತಿರಂಗದಲ್ಲಿ ನಯವಂಚಕರ ಕೈ ಮೇಲಾಗಿ ಅಪಮಾನ ಪ್ರಸಂಗ ಬಂದೀತು. ದಿನಾಂತ್ಯ ಶುಭವಿದೆ.

ಕಟಕ:-
ಆಗಾಗ ಆರ್ಥಿಕವಾಗಿ ಕೊರತೆಗಳು ಕಾಣಿಸಲಿವೆ. ವೃತ್ತಿರಂಗದಲ್ಲಿ ನೌಕರ ವರ್ಗಕ್ಕೆ ಕಲಹಕ್ಕೆ ಕಾರಣವಾಗಬಹುದು. ನಿರುದ್ಯೋಗಿಗಳಿಗೆ ಹೆಚ್ಚಿನ ಸಮಾಧಾನಸಿಗದು. ಆರೋಗ್ಯದಲ್ಲಿ ವ್ಯತ್ಯಯ , ದೇಹಾಯಾಸ , ಕೆಲಸ ಕಾರ್ಯಗಳು ವಿಳಂಬ.

ಸಿಂಹ :-
ವೈಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಯೋಗ್ಯ ವಯಸ್ಕರ ಸಂಬಂಧಗಳು ಜಾರಿಗೊಳ್ಳಲಿವೆ. ವ್ಯಾಪಾರ, ವ್ಯವಹಾರಗಳು ಲಾಭವಲ್ಲವಾದರೂ ನಷ್ಟವಾಗದು, ಈ ದಿನ ಮಿಶ್ರ ಫಲ ಪಡೆಯುವಿರಿ.

ಕನ್ಯ:-
ಆರೋಗ್ಯದಲ್ಲಿ ವ್ಯತ್ಯಾಸ ,ಅಧಿಕ ದೇಹಾಲಸ್ಯ ,ಇಚ್ಚಿಕ ಕೆಲಸಗಳಲ್ಲಿ ಪ್ರಗತಿ , ಸಾಂಸಾರಿಕವಾಗಿ ಅನಾವಶ್ಯಕವಾಗಿ ಖರ್ಚುಗಳು ಅಧಿಕವಾಗಲಿವೆ. ದಾಂಪತ್ಯದಲ್ಲಿ ಹೆಚ್ಚಿನ ಸಮಾಧಾನ, ಸಂಯಮವಿರಲಿ. ದಿನಾಂತ್ಯ ಶುಭ.

ತುಲ:-
ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗೆ ಗುರಿಯಾಗದಿರಿ. ಖರ್ಚುವೆಚ್ಚಗಳಲ್ಲಿ ಸದ್ಯದಮಟ್ಟಿಗೆ ಹಿಡಿತ ಬಿಗಿಯಾಗಿರಲಿ. ಹಿರಿಯರ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ದೂರ ಸಂಚಾರದಲ್ಲಿ ಜಾಗ್ರತೆ ಇರಲಿ,ಆರೋಗ್ಯ ಮಧ್ಯಮ ,ಮಿಶ್ರಫಲ.

ವೃಶ್ಚಿಕ :-
ವೃತ್ತಿರಂಗದಲ್ಲಿ ನಿಮ್ಮ ಪ್ರಯತ್ನಬಲ ಸಾರ್ಥಕ ವಾದೀತು. ಆಗಾಗ ಅಡೆತಡೆಗಳು ತೋರಿಬಂದರೂ ಕಾರ್ಯಸಾಧನೆಗೆ ಶ್ರೀ ದೇವತಾನುಗ್ರಹವಿದೆ. ಕಂಕಣಬಲ ಗಟ್ಟಿಯಾಗಲಿದೆ. ಇದು ಉತ್ತಮ ಕಾಲ.

ಧನುಸ್ಸು :-
ವಕ್ರ ಶನಿ ಪ್ರತಿಕೂಲ ಪರಿಣಾಮವನ್ನು ತೋರಿಸಿಯಾನು ಆದರೂ ಲಾಭಸ್ಥಾನದ ಕೇತು ಅಡೆತಡೆಗಳನ್ನು ದೂರಮಾಡಿ ಕಾರ್ಯಸಾಧಕನಾದಾನು. ಸಂಚಾರದಲ್ಲಿ , ಚಾಲನೆಯಲ್ಲಿ ಜಾಗ್ರತೆ ಇರಲಿ.

ಮಕರ:-
ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಿದರೂ ಪ್ರಯತ್ನಬಲ ಅತೀ ಅಗತ್ಯ. ಆರ್ಥಿಕವಾಗಿ ಯಾರನ್ನೂ ನಂಬದಂತಹ ಪರಿಸ್ಥಿತಿ ತಂದೀತು. ಕೃಷಿಕರಿಗೆ ಸಹಕಾರ ಕಂಡು ಬಂದೀತು.

ಕುಂಭ:-
ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ತೋರಿಬಂದಾವು. ನವ ದಂಪತಿಗಳಿಗೆ ಸಂತಾನ ಭಾಗ್ಯಕ್ಕೆ ವಿಳಂಬ ತಂದೀತು. ಆರ್ಥಿಕ ವಿಚಾರದಲ್ಲಿ ಹೆಚ್ಚಿನ ನಷ್ಟವಾಗದಂತೆ ಜಾಗ್ರತೆ ವಹಿಸಿರಿ.

ಮೀನ:-
ಹಿರಿಯರಿಗೆ ತೀರ್ಥಯಾತ್ರಾ ಭಾಗ್ಯವಿದೆ. ಯೋಗ್ಯ ವಯಸ್ಕರಿಗೆ ಕಂಕಣಬಲಕ್ಕೆ ಅಡೆತಡೆ ಕಂಡು ಬರಲಿದೆ. ದೇಹಾರೋಗ್ಯ ಆಗಾಗ ಏರುಪೇರಾದೀತು. ಸಂಚಾರದಿಂದ ಕಾರ್ಯಸಿದ್ಧಿಯಾದೀತು.
Leave a Reply

Your email address will not be published. Required fields are marked *

error: Content is protected !!