ಈದಿನದ ದಿನ ಭವಿಷ್ಯ

247

ಬುಧವಾರ, ಜೂನ್ 12 2019
ಸೂರ್ಯೋದಯ : 5:52 am
ಸೂರ್ಯಾಸ್ತ: 6:45 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಜ್ಯೇಷ್ಠ
ಪಕ್ಷ : ಶುಕ್ಲಪಕ್ಷ
ತಿಥಿ :ದಶಮೀ 18:27
ನಕ್ಷತ್ರ :ಹಸ್ತ 11:51
ಯೋಗ :ವ್ಯತಿಪಾತ 06:08
ಕರಣ:ತೈತುಲ 07:21 ಗರಿಜ 18:27

ಅಭಿಜಿತ್ ಮುಹುರ್ತ:ಯಾವ್ದು ಇಲ್ಲ
ಅಮೃತಕಾಲ :6:09 am – 7:40 am

ರಾಹುಕಾಲ-12:19 pm – 1:55 pm
ಯಮಗಂಡ ಕಾಲ-7:32 am – 9:08 am
ಗುಳಿಕ ಕಾಲ- 10:43 am – 12:19 pm

ಮೇಷ:-
ಈದಿನ ತುಂಬು ಚಟುವಟಿಕೆ ದಿನ ,ಅತಿಥಿಗಳ ಆಗಮನ ಸಂತಸ ತಂದೀತು. ವೃತ್ತಿ ಕ್ಷೇತ್ರದಲ್ಲಿ ಅಭಿವೃದ್ಧಿ ಹಾಗೂ ಅಧಿಕಾರಿ ವರ್ಗದವರಿಗೆ ಮುಂಭಡ್ತಿ ಯೋಗವಿದೆ. ನೂತನ ಕೆಲಸಕಾರ್ಯಗಳಿಗೆ ಸದ್ಯದಲ್ಲೇ ಅಭಿವೃದ್ಧಿ ತೋರಿ ಬಂದೀತು, ಆರ್ಥಿಕ ಸಮಸ್ಯೆ ಇಲ್ಲವಾಗುವುದು ,ಆರೋಗ್ಯದ ಬಗ್ಗೆ ಎಚ್ಚರವಿರಲಿ.

ವೃಷಭ:-
ಉದ್ಯೋಗದಲ್ಲಿ ಪ್ರಗತಿ ,‌ಮನೆಯಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆ ಕಾರ್ಯಗತವಾಗಧಿಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶದ ಸಂತಸ. ಸರಕಾರಿ ಕೆಲಸಕಾರ್ಯಗಳಲ್ಲಿ ಮುನ್ನಡೆ. ದಂಪತಿಗಳಿಗೆ ಸಂತಸದ ವಾರ್ತೆ.

ಮಿಥುನ:-
ಕುಟುಂಬದಲ್ಲಿ ಅಲ್ಪ ಕಿರಿಕಿರಿ ,ದಾಂಪತ್ಯದಲ್ಲಿ ಅನಾವಶ್ಯಕ ಕಲಹಕ್ಕೆ ಕಾರಣವಾಗದಿರಿ, ಇಚ್ಚಿಕ ಕೆಲಸಗಳು ನಿಧಾನ ಗತಿಯಲ್ಲಿ ಸಾಗಲಿದೆ, ನೂತನ ಕೆಲಸ ಕಾರ್ಯಗಳಿಗೆ ಜಾಗ್ರತೆಯಿಂದ ಮುಂದುವರೆಯಿರಿ. ವ್ಯಾಪಾರ, ವ್ಯವಹಾರಗಳು ಉತ್ತಮ ಲಾಭದಾಯಕವಾಗಲಿವೆ. ಮಹಿಳೆಯರು ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ,

ಕಟಕ
ಮಕ್ಕಳಿಗೆ, ಮಹಿಳೆಯರಿಗೆ ಆಗಾಗ ಆರೋಗ್ಯದಲ್ಲಿ ಏರುಪೇರು ಕಂಡು ಬಂದೀತು. ದೂರ ಸಂಚಾರದಲ್ಲಿ ನಿಮ್ಮ ಕಾರ್ಯಸಿದ್ಧಿಯಾಗಲಿದೆ. ಆರ್ಥಿಕವಾಗಿ ಉತ್ತಮ ಸಮಯ. ಸದುಪಯೋಗಿಸಿಕೊಳ್ಳಿರಿ.

ಸಿಂಹ:-
ಆಗಾಗ ಅಡೆಚಣೆಗಳಿಂದಲೇ ಕಾರ್ಯ ವಿಳಂಬವಾದೀತು. ದೇವತಾನುಧಿಗ್ರಹಧಿವಿದ್ದರೂ ರಾಹುವಿನ ಪ್ರತಿಕೂಲತೆ ಸಮಸ್ಯೆ ತಂದೀತು. ಹಿರಿಯರ ಆರೋಗ್ಯದಲ್ಲಿ ಜಾಗ್ರತೆ ವಹಿಸಿರಿ. ಸಂಚಾರದಲ್ಲಿ ಜಾಗ್ರತೆ ,ಕುಟುಂಬದಲ್ಲಿ ಅಲ್ಪ ನೆಮ್ಮದಿ ಮಕ್ಕಳ ಆರೋಗ್ಯ ಸಮಸ್ಯೆ ಕಾಡುವುದು.

ಕನ್ಯಾ
ಅನಿರೀಕ್ಷಿತ ವೃತ್ತಿ ಕ್ಷೇತ್ರದಲ್ಲಿ ಅಪವಾದ ಭೀತಿ ತಂದೀತು. ಶುಭಮಂಗಲ ಕಾರ್ಯಗಳಿಗೆ ಅವಸರ ಮಾಡದಿರಿ. ಸದ್ಯದಲ್ಲೇ ವೃತ್ತಿ ಕ್ಷೇತ್ರದಲ್ಲಿ ಮುಂಭಡ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಶುಭ ಫ‌ಲಿತಾಂಶ.

ತುಲಾ:-
ರಾಹು, ಶನಿಬಲದಿಂದ ಎಷ್ಟೆ ಕೆಲಸಕಾರ್ಯಗಳು ಸಿದ್ಧಿಯಾಗಲಿವೆ. ವಿದ್ಯಾರ್ಥಿಗಳು ಉತ್ತಮ ಫ‌ಲಿತಾಂಶವನ್ನು ಪಡೆಯಲಿದ್ದಾರೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು ಅತೀ ಅಗತ್ಯ, ಆರ್ಥಿಕ ಪ್ರಗತಿ ಸಾಮಾನ್ಯ ,ನಿಧಾನ ಗತಿಯಲ್ಲಿ ಪ್ರಗತಿ.

ವೃಷಿಕ:-
ನಿಮ್ಮ ಮನೋಕಾಮನೆಗಳಿಗೆ ಇದು ಸಕಾಲವಾದ ಕಾರಣ ಯಾವುದೇ ರೀತಿಯ ಅಡೆತಡೆಗಳಿದ್ದರೂ ಎದುರಿಸಿ ಮುಂದುವರಿಯಬೇಕು. ಸಾಂಸಾರಿಕವಾಗಿ ಕೆಲವೊಂದು ಸಮಸ್ಯೆಗಳು ಆರ್ಥಿಕವಾಗಿ ಬಾಧಿಸಬಹುದು.

ಧನುಸ್ಸು
ಈ ದಿನ ಅಷ್ಟೇನು ಶುಭದಾಯಕವಾಗಿಲ್ಲ ,ವ್ಯವಹಾರದಲ್ಲಿ ಎಚ್ಚರ ,ವಿದ್ಯಾರ್ಥಿಗಳಿಗೆ ತಮ್ಮ ಪ್ರಯತ್ನಬಲದ ಉತ್ತಮ ಅವಕಾಶಗಳು ಲಭಿಸಲಿವೆ. ಆರ್ಥಿಕವಾಗಿ ಅಡಚಣೆಗಳು ತೋರಿ ಬಂದರೂ ಒಂದಲ್ಲಾ ಒಂದು ರೀತಿಯಲ್ಲಿ ಸಮಸ್ಯೆಗಳು ಪರಿಹಾರ ಕಾಣಲಿವೆ.

ಮಕರ:-
ಸರಕಾರಿ ಕೆಲಸಗಳು ನಿಮ್ಮ ಎಣಿಕೆಯಂತೆ ನಡೆಯಲಿವೆ. ಆರ್ಥಿಕವಾಗಿ ನಿಮ್ಮ ಚಿಂತನೆಗಳು ಕಾರ್ಯರೂಪಕ್ಕೆ ಬಂದಲ್ಲಿ ಉತ್ತಮ ದಾಯಾದಿಗಳ ಬಗ್ಗೆ ಹೆಚ್ಚು ಚಿಂತಿಸದಿರಿ. ದಿನಾಂತ್ಯ ಶುಭವಿದೆ.

ಕುಂಭ:-
ಕುಜನ ಪ್ರತಿಕೂಲತೆ ಆಗಾಗ ದೇಹಾರೋಗ್ಯದಲ್ಲಿ ಪರಿಣಾಮ ಬೀರಬಹುದು. ಆರ್ಥಿಕವಾಗಿ ತಾಪತ್ರಯಗಳು ತೋರಿ ಬಂದರೂ ಉಪಶಮನವಾಗುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಇರಲಿ.

ಮೀನಾ:-
ಬಹುದಿನಗಳ ಬಳಿಕ ವಿದ್ಯಾರ್ಥಿಗಳ, ನಿರುದ್ಯೋಗಿಗಳ, ಅವಿವಾಹಿತರು ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ. ಧೈರ್ಯದಿಂದ ದೃಢ ನಿರ್ಧಾರದಿಂದ ಮುನ್ನಡೆದಲ್ಲಿ ಯಶಸ್ಸು ಖಂಡಿತ.ಆರೋಗ್ಯ ಮಧ್ಯಮ,




Leave a Reply

Your email address will not be published. Required fields are marked *

error: Content is protected !!