ಇಂದಿನ ದಿನ ಭವಿಷ್ಯ: ಯಾವ ರಾಶಿಗೆ ಏನು ಫಲ ಉಲ್ಲಿದೆ ನೋಡಿ

270

ಮೇಷ:ಕೆಲಸದ ಬಗ್ಗೆ ಒತ್ತುಕೊಡಿ ಇಂದು ಸಂತಸದ ದಿನ ನಿಮ್ಮದಾಗಲಿದೆ. ಹಿರಿಯರ ಪ್ರವಾಸಕ್ಕೆ ಏರ್ಪಾಟು ಮಾಡುವಿರಿ. ಇಷ್ಟ ಮಿತ್ರರನ್ನು ಭೇಟಿಯಾಗುವಿರಿ. ಆರ್ಥಿಕವಾಗಿಯೂ ಧನಾಗಮನಕ್ಕೆ ಕೊರತೆಯಿರದು. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ.

ವೃಷಭ: ವೃತ್ತಿ ಜೀವನದಲ್ಲಿ ಮುನ್ನಡೆಯಿರುತ್ತದೆ. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡುವಿರಿ. ಆದರೆ ವಿದ್ಯುತ್ ನಿಂದ ಅಪಾಯವಾಗುವ ಸಂಭವವಿದೆ. ಎಚ್ಚರಿಕೆಯಿಂದಿರಬೇಕು. ವಾಹನ ಚಲಾಯಿಸುವಾಗ ಎಚ್ಚರಿಕೆ.

ಮಿಥುನ: ಸಾಮಾಜಿಕವಾಗಿ ನಿಮ್ಮ ಸ್ಥಾನ ಮಾನ ಹೆಚ್ಚುವುದು. ಆರ್ಥಿಕವಾಗಿ ಸಮಾಧಾನಕರ ದಿನ. ಸಾಹಿತ್ಯ ಕ್ಷೇತ್ರದಲ್ಲಿರುವವರು ಹೆಸರು, ಹಣ ಸಂಪಾದನೆ ಮಾಡಲಿದ್ದಾರೆ. ಆದರೆ ಚಾಡಿ ಮಾತುಗಳಿಂದ ದೂರವಿರಿ.

ಕರ್ಕಟಕ: ಮನೆಯಲ್ಲಿ ಶುಭ ಕಾರ್ಯ ನಡೆಸುವ ನಿಮಿತ್ತ ಹೆಚ್ಚಿನ ಓಡಾಟ, ಜವಾಬ್ಧಾರಿ ವಹಿಸಿಕೊಳ್ಳಬೇಕಾಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪಗಳು ಬರಲಿವೆ.

ಸಿಂಹ: ರಾಜಕೀಯ ಕ್ಷೇತ್ರದಲ್ಲಿದ್ದವರಿಗೆ ಸ್ಥಾನಮಾನಗಳು ಹೆಚ್ಚುವುದು. ಆರ್ಥಿಕವಾಗಿ ಧನಾಗಮನಕ್ಕೆ ಏನೂ ಕೊರತೆಯಾಗದು. ಆದರೆ ಖರ್ಚಿನ ಬಗ್ಗೆ ಮಿತಿಯಿರಲಿ. ದೂರ ಸಂಚಾರ ಮಾಡಬೇಕಾಗಿಬರುತ್ತದೆ.

ಕನ್ಯಾ: ದೈವಾನುಗ್ರಹದಿಂದ ಕೆಲಸ ಕಾರ್ಯಗಳಲ್ಲಿ ನಿಮಗೆ ಅನುಕೂಲಕರವಾದ ವಾತಾವರಣವಿರಲಿದೆ. ಆದರೆ ವಿವಾಹಾದಿ ಪ್ರಯತ್ನಗಳಿಗೆ ಕೊಂಚ ಹಿನ್ನಡೆಯಾದರೂ ಪ್ರಯತ್ನ ಬಿಡಬೇಡಿ. ಆರ್ಥಿಕವಾಗಿ ಚೇತರಿಕೆ ಕಾಣುವಿರಿ.

ತುಲಾ: ಆತ್ಮವಿಶ್ವಾಸದಿಂದ ಹೊಸ ಕೆಲಸಗಳಿಗೆ ಕೈ ಹಾಕುವಿರಿ. ಕಷ್ಟದ ಸಮಯದಲ್ಲಿ ಮಿತ್ರರ ಸಹಕಾರ ದೊರಕಲಿದೆ. ಕೌಟುಂಬಿಕವಾಗಿ ಮಕ್ಕಳ ಭವಿಷ್ಯದ ಚಿಂತೆಯಾಗುವುದು. ಹೆಂಡತಿಯ ಆಸೆ, ಆಕಾಂಕ್ಷಿಗಳಿಗೆ ಬೆಲೆ ಕೊಡಬೇಕಾಗುತ್ತದೆ.

ವೃಶ್ಚಿಕ: ವ್ಯಾಪಾರಿಗಳಿಗೆ ಲಾಭದಾಯಕ ದಿನವಿದು. ನಿರೀಕ್ಷಿತ ಲಾಭ ಗಳಿಸಬಹುದು. ಆದರೆ ದೇಹಾರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು. ತಾಳ್ಮೆ ಅಗತ್ಯ.

ಧನು: ನಿಮ್ಮ ಪ್ರಯತ್ನ ಬಲಕ್ಕೆ ತಕ್ಕ ಖಂಡಿತಾ ಫಲ ಸಿಗಲಿದೆ. ಆದರೆ ಹಿತಶತ್ರುಗಳಿಂದ ವಂಚನೆಗೊಳಗಾಗದಂತೆ ಎಚ್ಚರವಹಿಸಿ. ಸಂಚಾರದಿಂದ ಆರೋಗ್ಯ ಏರುಪೇರಾಗಬಹುದು. ಎಚ್ಚರಿಕೆ ಅಗತ್ಯ.

ಮಕರ: ಯಾರೋ ಸಹಾಯಕ್ಕೆ ಬರುತ್ತಾರೆಂಬ ಪರಾವಲಂಬನೆ ಮನೋಭಾವ ಬಿಟ್ಟು, ನಿಮ್ಮ ಸ್ವಂತ ಬಲದಿಂದ ದುಡಿಯುವ ಕಡೆಗೆ ಗಮನಕೊಡಿ. ದೈವಾನುಕೂಲದಿಂದ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ. ದೇವತಾ ಪ್ರಾರ್ಥನೆ ಮಾಡಬೇಕು.

ಕುಂಭ: ಸ್ವಂತ ಉದ್ಯಮ ನಡೆಸುವವರಿಗೆ ಕೊಂಚ ನಷ್ಟದ ಭೀತಿಯಿದೆ. ಬಂಧು ಮಿತ್ರರಿಂದ ಚಾಡಿ ಮಾತು ಕೇಳಬಂದೀತು. ಎಲ್ಲದಕ್ಕೂ ಮೌನವೇ ಉತ್ತರವಾಗಿರಲಿ. ಸಂಗಾತಿಯ ಮಾತುಗಳಿಗೆ ಕಿವಿಗೊಡಬೇಕಾಗುತ್ತದೆ.

ಮೀನ: ಉದ್ಯೋಗದಲ್ಲಿ ಮೇಲಧಿಕಾರಿಗಳ ವಿಶ್ವಾಸ ಗಳಿಸಲು ಪ್ರಯತ್ನ ಮಾಡುವಿರಿ. ಧಾರ್ಮಿಕವಾಗಿ ನಾನಾ ಕಾರ್ಯಗಳಿಗೆ ಧನವಿನಿಯೋಗ ಮಾಡುವಿರಿ. ನಿರುದ್ಯೋಗಿಗಳು ಸ್ವ ಉದ್ಯಮ ನಡೆಸುವುದು ಸೂಕ್ತ. ದಿನದಂತ್ಯಕ್ಕೆ ಶುಭ ಸುದ್ದಿ.
Leave a Reply

Your email address will not be published. Required fields are marked *

error: Content is protected !!