ದಿನಭವಿಷ್ಯ: 11-06-2019

287

ಪಂಚಾಂಗ:
ಶ್ರೀ ವಿಕಾರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ನವಮಿ ತಿಥಿ,
ಮಂಗಳವಾರ, ಉತ್ತರ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 3:35 ರಿಂದ 5:11
ಗುಳಿಕಕಾಲ: ಮಧ್ಯಾಹ್ನ 12:23 ರಿಂದ 1:59
ಯಮಗಂಡಕಾಲ: ಬೆಳಗ್ಗೆ 9:11 ರಿಂದ 10:47

ಮೇಷ: ಇಂದು ಅಂದುಕೊಂಡ ಕೆಲಸಗಳು ಸರಾಗವಾಗಿ ಆಗಲಿದೆ,ಆರೋಗ್ಯ ಉತ್ತಮವಾಗಿರಲಿದೆ, ಎಲ್ಲರ ಪ್ರಶಂಸೆಗೆ ಪಾತ್ರರಾಗುವಿರಿ,ಯತ್ನ ಕಾರ್ಯಗಳಲ್ಲಿ ಜಯ, ಆತ್ಮೀಯರೊಂದಿಗೆ ಪ್ರೀತಿ-ವಾತ್ಸಲ್ಯ, ಸುಖ ಭೋಜನ ಪ್ರಾಪ್ತಿ, ಹಣಕಾಸು ವಿಚಾರದಲ್ಲಿ ಎಚ್ಚರ ನಂಬಿಸಿ ಮೋಸ ಮಾಡುವರು.

ವೃಷಭ: ಕುಟುಂಬದಲ್ಲಿ ಅಲ್ಪ ನೆಮ್ಮದಿ ಆದರೇ ನಿಮ್ಮನ್ನು ಬೇರೆ ರೀತಿಯಾಗಿ ನೋಡುವ ಸಾಧ್ಯತೆ, ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಪ್ರಯತ್ನ ಪಟ್ಟರೆ ಉತ್ತಮ ಫಲ, ಮಾನಸಿಕ ನೆಮ್ಮದಿ ಪ್ರಾಪ್ತಿ, ಪರರ ಮಾತಿಗೆ ಕಿವಿ ಕೊಡಬೇಡಿ, ಅನ್ನಿಸಿದ್ದನ್ನು ಮಾಡುವುದರಿಂದ ಸಂತಸ.

ಮಿಥುನ: ಈ ದಿನ ನೀವು ಹಿಡಿದ ಕೆಲಸ ಪೂರ್ಣ ಗೊಳಿಸುತ್ತೀರಿ, ಸಾಲ ಬಾದೆಯಿಂದ ನೆಮ್ಮದಿ,ವಿದೇಶ ಪ್ರಯಾಣ, ಶುಭ ಫಲ ಪ್ರಾಪ್ತಿ, ಸ್ವಂತ ಉದ್ಯಮಗಳಿಗೆ ಲಾಭ, ವಿವಾಹ ಯೋಗ, ಆರೋಗ್ಯದಲ್ಲಿ ಚೇತರಿಕೆ,ಆರ್ಥಿಕ ಪ್ರಗತಿಯಾಗಲಿದೆ.

ಕಟಕ: ಈ ದಿನ ಮಿಶ್ರ ಫಲ ಹೊಂದುವಿರಿ ,ವ್ಯಾಪಾರಿಗಳಿಗೆ ಲಾಭ ನಷ್ಟಗಳ ಏರಿಳಿತ , ಉದ್ಯೋಗಿಗಳಿಗೆ ಅಲ್ಪ ನೆಮ್ಮದಿ , ವಾದ-ವಿವಾದಗಳಿಂದ ದೂರವಿರಿ, ಋಣ ಬಾಧೆ, ಮಾನಸಿಕ ಒತ್ತಡ, ಮಹಿಳೆಯರಿಗೆ ತೊಂದರೆ, ದಾಂಪತ್ಯದಲ್ಲಿ ಪ್ರೀತಿ,ಆರೋಗ್ಯ ಮಧ್ಯಮ ,ವಾಯು ,ಶೀತ ಬಾದೆ.

ಸಿಂಹ: ಮನಸ್ಸಿನಲ್ಲಿ ಸಾದಾ ಗೊಂದಲ ಚಿಂತೆ ಮಾಡುವಿರಿ, ಕೆಲಸಕಾರ್ಯಗಳಲ್ಲಿ ಕುಂಟಿತ ಪ್ರಗತಿ, ಸಣ್ಣ ಪುಟ್ಟ ವಿಚಾರಗಳಿಂದ ಮನಃಸ್ತಾಪ, ಕೃಷಿಕರಿಗೆ ಲಾಭ, ಸ್ತ್ರೀಯರಿಗೆ ಸೌಖ್ಯ, ಇಲ್ಲ ಸಲ್ಲದ ಅಪವಾದ ನಿಮ್ಮ ಮೇಲೆ ಬರುವ ಸಾಧ್ಯತೆ ಎಚ್ಚರದಿಂದಿರಿ, ಸ್ಥಳ ಬದಲಾವಣೆ,ಆರೋಗ್ಯ ಮಧ್ಯಮ ವಾಯು ಹಾಗೂ ಉಷ್ಣಬಾಧೆ ಕಾಣಲಿದೆ.

ಕನ್ಯಾ: ಇಚ್ಚಿಕ ಕೆಲಸಗಳಲ್ಲಿ ಮಂದ ಗತಿಯ ಪ್ರಗತಿ, ಹಣದ ಕರ್ಚು ಅಧಿಕ , ವಾಹನಗಳಿಂದ ನಷ್ಟ , ಕೆಲಸ ಕಾರ್ಯಗಳಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳಿ, ಮಕ್ಕಳಿಂದ ಶುಭ ಸುದ್ದಿ, ಶತ್ರುಗಳ ಬಾಧೆ, ಶೀತ ಸಂಬಂಧಿತ ರೋಗ ಬಾಧೆ.

ತುಲಾ: ಈ ದಿನ ಅಷ್ಟೊಂದು ಶುಭವಾಗಿಲ್ಲ ,ಕೆಲಸ ಕಾರ್ಯದಲ್ಲಿ ಒತ್ತಡ , ಕೋರ್ಟ ಕಚೇರಿ ಅಲದಾಟ, ಅಧಿಕವಾದ ತಿರುಗಾಟ, ತಾಳ್ಮೆ ಅತ್ಯಗತ್ಯ, ಮಾತೃವಿನಿಂದ ಸಹಾಯ, ಗುರು ಹಿರಿಯರಲ್ಲಿ ಭಕ್ತಿ ಇರಲಿ , ಆರೋಗ್ಯ ಮಧ್ಯಮ, ಹಣಕಾಸಿನ ಪ್ರಗತಿ ಕುಂಟಿತ.

ವೃಶ್ಚಿಕ:ಕೆಲಸ ಕಾರ್ಯದಲ್ಲಿ ಪ್ರಗತಿ , ಮನೋ ವೇದನೆ ಯಿಂದ ಹೊರಬರುವಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಬಡ ವಿದ್ಯಾರ್ಥಿಗಳಿಗೆ ಅರ್ಥಿಕ ನೆರವು, ಈ ದಿನ ಶುಭ ಫಲ.

ಧನಸ್ಸು: ಇಂದು ನಿಮ್ಮ ಇಚ್ಚೆಗೆ ತಕ್ಕ ಕೆಲಸ ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಅಧಿಕವಾದ ಖರ್ಚು, ಆತ್ಮೀಯರ ಭೇಟಿ.

ಮಕರ:ಈ ದಿನ ಶುಭಕರವಾಗಿಲ್ಲ , ಚಂಚಲ ಮನಸ್ಸು, ವಿಪರೀತ ವ್ಯಸನ, ಕೋರ್ಟ್ ಕೇಸ್‍ಗಳಲ್ಲಿ ಅಡೆತಡೆ, ವಿರೋಧಿಗಳಿಂದ ತೊಂದರೆ, ಕಾರ್ಯ ಹಾನಿ.

ಕುಂಭ: ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸಾಧಾರಣ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ, ಮಾನಸಿಕ ವ್ಯಥೆ, ಆರ್ಥಿಕ ಪ್ರಗತಿ ಕುಂಟಿತ, ಹೊಸ ಕೆಲಸಗಳಲ್ಲಿ ನಿಧಾನ ಗತಿಯ ಪ್ರಗತಿ‌

ಮೀನ: ಕೆಲಸ ಕಾರ್ಯಗಳು ನಿಧಾನ ಗತಿಯಲ್ಲಿ ಸಾಗುವುದು ,ಆರೋಗ್ಯ ಮಧ್ಯಮ , ದುಡುಕು ಸ್ವಭಾವ, ದೂರದ ಆಲೋಚನೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಹಿರಿಯರಿಂದ ಉಪದೇಶ-ಸಲಹೆ, ಈ ದಿನ ಮಿಶ್ರಫಲ.

ಜ್ಯೋತಿಷ್ಯ ಆಧಾರದಲ್ಲಿ ಎಲ್ಲೆಲ್ಲಿ ಮಳೆಯಾಗಲಿದೆ :-

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಧ್ಯಾನದ ನಂತರ ಗಾಳಿ ಸಮೇತ ಮಳೆಯಾಗಲಿದೆ, ಉಡುಪಿ ಮಂಗಳೂರಿನಲ್ಲಿ ಬೆಳಗ್ಗೆಯಿಂದಲೂ ಮಳೆ ಏರಿಳಿತವಿದ್ದು ಗಾಳಿಯ ಅಬ್ಬರ ಹೆಚ್ಚಲಿದೆ.

ಮಲೆನಾಡು ಭಾಗದ ಶಿರಸಿ ,ಶಿವಮೊಗ್ಗ ಜಿಲ್ಲೆಯ ಭಾಗದಲ್ಲಿ ಮಳೆ ಅಲ್ಪವಿದ್ದು ಅಲ್ಪ ಗಾಳಿ ಸಿಡಿಲು ಬರುವ ಸಾಧ್ಯತೆಗಳಿವೆ
Leave a Reply

Your email address will not be published. Required fields are marked *

error: Content is protected !!