ಶಿವಮೊಗ್ಗ : ಶಿವಮೊಗ್ಗ ನಗರದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದ ಜನತೆಗೆ ರೋಗ ನಿರೋಧಕ ಶಕ್ತಿ ವೃದ್ದಿಸುವ ಆಯುಷ್ ಕಿಟ್ ವಿತರಣೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮುಂದಾಗಿದ್ದಾರೆ.
ಆಯುಷ್ ಮಾತ್ರೆ ಕಷಾಯ ಖರೀದಿ ಮಾಡಿರುವ ಸಚಿವರು ತಮ್ಮ ಒಡೆತನದ ಫೇಸ್ ಕಾಲೇಜಿನಲ್ಲಿ ಆಯುಷ್ ಕಿಟ್ ಮನೆ ಮನೆಗೆ ತಲುಪಿಸುವ ಸಲುವಾಗಿ ಪ್ಯಾಕ್ ಮಾಡಿಸುತ್ತಿದ್ದಾರೆ.
ಆಯುಷ್ ಕಿಟ್ ತಯಾರಾಗುತ್ತಿರುವ ಸ್ಥಳಕ್ಕೆ ಸಚಿವ ಈಶ್ವರಪ್ಪ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಸಚಿವರು ಈಡಿ ದೇಶದಲ್ಲಿ ಶಿವಮೊಗ್ಗ ನಗರದಲ್ಲಿಯೇ ಮೊದಲ ಬಾರಿಗೆ ರೋಗ ನಿರೋಧಕ ಶಕ್ತಿ ವೃದ್ದಿಸುವ ಆಯುಷ್ ಕಿಟ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ನಗರದ ಪ್ರದೇಶದ ಸುಮಾರು 85 ಸಾವಿರ ಮನೆಗಳ 4 ಲಕ್ಷ ಮಂದಿಗೆ 3 ಹಂತದಲ್ಲಿ ಕಿಟ್ ವಿತರಣೆ ನಡೆಸಲಾಗುತ್ತದೆ. ಇದೇ 29 ರಂದು ಆಯುಷ್ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಆಯುಷ್ ತಜ್ಞ ಡಾ.ಗಿರಿಧರ್ ಕಜೆ ಚಾಲನೆ ನೀಡಲಿದ್ದಾರೆ.

ಈಗಾಗಲೇ ನಮ್ಮ ಕಾರ್ಯಕರ್ತರು ಸಹ ಮನೆ ಮನೆಗೆ ತೆರಳಿ ಸರ್ವೇ ನಡೆಸುತ್ತಿದ್ದಾರೆ ಎಂದರು.
ಪ್ರತಿಯೊಂದು ಆಯುಷ್ ಕಿಟ್ ಗೆ 380 ರೂ ದರ ಇದ್ದು, 4 ಕೋಟಿ ವೆಚ್ಚದಲ್ಲಿ ಖರೀದಿ ಮಾಡಲಾಗಿದೆ. ಆದರೆ ಇದನ್ನು ನಾಗರೀಕರ ಆರೋಗ್ಯದ ಹಿತದೃಷ್ಟಿಯಿಂದ ಉಚಿತವಾಗಿ ಹಂಚಿಕೆ ಮಾಡುತ್ತಿದ್ದೇವೆ. ಅಲ್ಲದೇ ಆಯುಷ್ ಕಿಟ್ ಖರೀದಿ ಮಾಡಲು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಉದ್ಯಮಿಗಳು ದೇಣಿಗೆ ಸಹ ನೀಡಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಕರೋನಾ ಪಾಸುಟಿವ್ ವಿವರ ಈ ಕೆಳಗಿನಂತಿದೆ:-
ಶಿವಮೊಗ್ಗ ಜಿಲ್ಲೆಯಲ್ಲಿ ಇಂದು 71 ಕೊರೊನಾ ಪಾಸಿಟಿವ್ ದೃಢಪಟ್ಟಿದೆ.ಜಿಲ್ಲೆಯಲ್ಲಿ ಒಟ್ಟು ಸೋಂಕಿತರು 1386 ಆಗಿದ್ದು
51 ಜನ ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಿಂದ ಇಂದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಇದುವರೆಗೆ 776 ಕೋವಿಡ್-19 ಮೆಗ್ಗಾನ್ ಆಸ್ಪತ್ರೆಯಿಂದ ಬಿಡುಗಡೆಯಾದವರಾಗಿದ್ದು
610 ಜಿಲ್ಲೆಯಲ್ಲಿ ಕೊರೊನಾ ಸಕ್ರಿಯ ಕೇಸ್ ಗಳಿದ್ದು 24 ಜನ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಇದುವರೆಗೆ ಮೃತಪಟ್ಟವರಾಗಿದ್ದಾರೆ.
ಜಿಲ್ಲೆಯಲ್ಲಿ ಇಂದಿನ ಪ್ರಕರಣ ತಾಲೊಕುವಾರು ಹೀಗಿದೆ:-
ಶಿವಮೊಗ್ಗ : 55
ಭದ್ರಾವತಿ : 09
ಶಿಕಾರಿಪುರ : 00
ಸೊರಬ : 00
ಸಾಗರ : 02
ಹೊಸನಗರ : 00
ತೀರ್ಥಹಳ್ಳಿ : 00
ಕುಸಿದು ಬಿದ್ದ ತೀರ್ಥಹಳ್ಳಿಯ ತಾಲೊಕು ಪಂಚಾಯ್ತಿ ಸಭಾಂಗಣದ ಮೇಲ್ಚಾವಣಿ!

ತಾಲೊಕು ಪಂಚಾಯ್ತಿ ಸಭಾಂಗಣದ ಮೇಲ್ಚಾವಣಿ ಕುಸಿದು ಬಿದ್ದ ಘಟನೆ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿಯ ತಾಲೊಕು ಪಂಚಾಯ್ತಿ ಸಭಾಂಗಣದ ಕಟ್ಟಡ ಹಲವು ವರ್ಷಗಳಿಂದ ಶಿಥಿಲಗೊಂಡಿತ್ತು. ಶಿಥಿಲಗೊಂಡಿದ್ದ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಸಹ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬೇಜವಾಬ್ದಾರಿ ತೋರಿದ್ದರು. ಅದರ ಪರಿಣಾಮ ಸಭಾಂಗಣದ ಮೇಲ್ಚಾವಣಿ ಇಂದು ಕುಸಿದು ಬಿದ್ದಿದೆ. ಆದರೆ ಸಭಾಂಗಣದಲ್ಲಿ ಯಾರೂ ಇಲ್ಲದಿದ್ದ ಕಾರಣ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.