BREAKING NEWS
Search

ಬಾಬರಿ ಮಸೀದಿ ಧ್ವಂಸ ಪ್ರಕರಣ – ನ್ಯಾಯಂಗ ನಿಂಧನೆ ಪ್ರಕರಣ ಕೈಬಿಟ್ಟ ಸುಪ್ರೀಂ ಕೋರ್ಟ

526

ನವದೆಹಲಿ : 1992ರ ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನ್ಯಾಯಂಗ ನಿಂಧನೆಯ ಎಲ್ಲ ಅರ್ಜಿಗಳನ್ನು ವಿಚಾರಣೆಯಿಂದ ಸುಪ್ರೀಂಕೋರ್ಟ್ ಕೈಬಿಟ್ಟಿದೆ. ಇಂದು ಈ ಬಗ್ಗೆ ಮಹತ್ವದ ತೀರ್ಪು ನೀಡಿದ ನ್ಯಾಯಾಲಯ ರಾಮ ಮಂದಿರಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಪ್ರಕಟವಾಗಿರುವ ಹಿನ್ನಲೆ ಈ ಎಲ್ಲ ಅರ್ಜಿಗಳು ಅ ಪ್ರಸುತ್ತ ಎಂದು ಹೇಳಿದೆ.

ಬಾಬರಿ ಮಸೀದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು, ಅದನ್ನು ನೆಲಸಮಗೊಳಿಸಬೇಡಿ ಎಂದು 1991ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶ ರಾಜ್ಯ ಸರ್ಕಾರ, ಅಧಿಕಾರಿಗಳು, ರಾಜಕಾರಣಿಗಳು ಎಲ್ಲರಿಗೂ ಅನ್ವಯ ಆಗಿತ್ತು. ಈ ಆದೇಶ ಬಳಿಕ 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು.

ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆ ಹಿನ್ನಲೆ ಮುಹಮ್ಮದ್ ಅಸ್ಲಾಮ್ ಭುರೆ ನ್ಯಾಯಂಗ ನಿಂಧನೆ ಅರ್ಜಿ ಸಲ್ಲಿಸಿದ್ದರು. ಮಾಜಿ ಸಿಎಂ ಕಲ್ಯಾಣ ಸಿಂಗ್, ಬಿಜೆಪಿ ನಾಯಕರಾದ ಎಲ್‌.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಹಲವು ನಾಯಕರ ವಿರುದ್ಧ ನ್ಯಾಯಂಗ ನಿಂಧನೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರ ಮಹಮ್ಮದ್ ಅಸ್ಲಾಮ್ 2010ರಲ್ಲಿ ಮೃತಪಟ್ಟ ಹಿನ್ನಲೆ ಈ ಅರ್ಜಿ ಹೆಚ್ಚು ವಿಚಾರಣೆಗೆ ಬಂದಿರಲಿಲ್ಲ. 2019ರಲ್ಲಿ ಅಯೋಧ್ಯೆ ವಿವಾದಿತ ಜಮೀನಿನ ಮೇಲೆ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಇಂದು ಈ ಅರ್ಜಿ ಇತ್ಯರ್ಥ ಪಡಿಸಿದ ಕೋರ್ಟ್, ಪ್ರಕರಣ ಸಂಪೂರ್ಣ ಇತ್ಯರ್ಥವಾಗಿರುವ ಹಿನ್ನಲೆ ವಿಚಾರಣೆ ಅಗತ್ಯವಿಲ್ಲ, ಮುಖ್ಯ ಅರ್ಜಿ ವಿಚಾರಣೆ ವೇಳೆ ಈ ಬಗ್ಗೆ ಪ್ರಸ್ತಾಪಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿತು‌.

ಈಗ ಈ ಕೇಸುಗಳ ಪ್ರಸ್ತುತತೆ ಇಲ್ಲದ ಕಾರಣ ಹೀಗಾಗಿ ಎಲ್ಲ ನ್ಯಾಯಾಂಗ ನಿಂದನೆ ಕೇಸುಗಳನ್ನು ಕೈಬಿಡುತ್ತಿದ್ದೇವೆ ಎಂದು ಕೋರ್ಟ್ ಆದೇಶಿಸಿತು. ಸುಪ್ರೀಂಕೋರ್ಟ್ ಈ ಆದೇಶದಿಂದಾಗಿ ಎಲ್‌.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಬಿಜೆಪಿಯ ಹಲವು ನಾಯಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!