ಶಿರಸಿ:ಠಾಣೆ ಮೆಟ್ಟಿಲೇರಿದ ಫೇಸ್ ಬುಕ್ ಪ್ರೀತಿ:ಹೊಡಿ,ಬಡಿ,ಕಡಿಯಲ್ಲಿ ಅಂತ್ಯ !

1156

ಕಾರವಾರ:- ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ದಲಿತ ಯುವಕನಿಂದ ಯುವತಿಯನ್ನು ಬೇರ್ಪಡಿಸಲು ಎರಡೂ ಕುಟುಂಬಗಳು ಬಡಿದಾಡಿಕೊಂಡು ಎರಡೂ ಕುಟುಂಬದ ಆರು ಜನರು ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ಯುವಕನ ಸಹೋದರ

ಕೃಷ್ಣ ಚೆನ್ನಯ್ಯ ಎಂಬ ಬನವಾಸಿಯ ಯುವಕ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಕುನವಳ್ಳಿಯ ಮಡಿವಾಳ ಜನಾಂಗದ ಹೋಮ್ ನರ್ಸ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಯುವತಿಯನ್ನು ಎಂಟು ದಿನದ ಹಿಂದೆ ಬೆಂಗಳೂರಿನಲ್ಲಿ ಮದುವೆಯಾಗಿದ್ದ.

ಪ್ರೀತಿಸಿ ವಿವಾಹವಾದ ಯುವಕನ ಚಿತ್ರ

ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯ ಕುಟುಂಬದವರು ವಿರೋಧವ್ಯಕ್ತಪಡಿಸಿದ್ದರು .

ಇನ್ನು ಇವರಿಬ್ಬರೂ ಮದುವೆಯಾಗಿರುವುದಕ್ಕೆ ಯಾವುದೇ ಅಧಿಕೃತ ದಾಖಲೆ ಇರದ ಹಿನ್ನೆಲೆ ಯಲ್ಲಿ ಯುವತಿ ಕುಟಂಬದವರು ಮದುವೆಯಾಗಿ ಬನವಾಸಿಯ ತಮ್ಮ ಮನೆಗೆ ಯುವತಿಯೊಂದಿಗೆ ಬಂದಿದ್ದ ವಿಷಯವನ್ನು ಅರಿತು ಯುವತಿಯ ಚಿಕ್ಕಪ್ಪ ಹೊಳಿಯಪ್ಪ ಶಾನವಳ್ಳಿ ಎನ್ನುವರು ತನ್ನ ಕುಟುಂಬ ಹಾಗೂ ಸಂಬಂಧಿಗಳೊಂದಿಗೆ ಬನವಾಸಿಗೆ ತೆರಳಿ ಯುವತಿಯನ್ನು ಅಪಹರಿಸಿ ತರುವ ಪ್ರಯತ್ನ ಮಾಡಿದ್ದಾರೆ.

ಪ್ರೀತಿಸಿ ಮದುವೆಯಾದ ಯುವತಿ

ಈ ವೇಳೆ ನವಜೋಡಿಗಳು ಮನೆಯಲ್ಲಿಲ್ಲದ ಕಾರಣ ಯುವಕನ ಸಹೋದರ ಹಾಗೂ ಮಾವನಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ .
ಈ ವೇಳೆ ಎರಡೂ ಕುಟುಂಬದವರು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ.
ಘಟನೆಯಲ್ಲಿ ಯುವಕನ ಸಹೋದರ ಹಾಗೂ ಮಾವನಿಗೆ ಮಚ್ಚಿನಿಂದ ಹೊಡೆದಿದ್ದು ಬೆರಳುಗಳು ತುಂಡಾಗಿವೆ ,ಒಟ್ಟು ಆರು ಜನರಿಗೆ ಗಂಭೀರ ಗಾಯವಾಗಿತ್ತು. ಗಾಯಾಳುಗಳನ್ನು ಬನವಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಎರಡೂ ಕುಟುಂಬದ ವಿರುದ್ಧ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಇವರ ಪ್ರೀತಿಗೆ ದಾಖಲೆ ಇಲ್ಲದೇ ಇರುವುದು ಅಡ್ಡಿಯಾಗಿದ್ದರಿಂದ ಊರಿನವರೇ ಇಂದು ಮತ್ತೊಮ್ಮೆ ಮದುವೆ ಮಾಡಿಸಿದ್ದಾರೆ.

ಕಳೆದ ಕೆಲವು ದಿನದ ಹಿಂದಷ್ಟೇ ಯುವತಿ ಕಡೆಯವರು ಯುವಕನ ವಿರುದ್ಧ ಬನವಾಸಿ ಠಾಣೆಯಲ್ಲಿ ದೂರು ನೀಡಿದ್ದರು. ಇಬ್ಬರೂ ವಯಸ್ಕರಾದ್ಧರಿಂದ ರಾಜಿ ಮಾಡಿಸಿ ಇಬ್ಬರ ಕುಟುಂಬದವರನ್ನು ಕಳುಹಿಸಲಾಗಿತ್ತು. ಆದರೇ ಹುಡುಗಿಯ ಕುಟುಂಬದವರು ದಲಿತ ಜಾತಿಯ ಯುವಕ ಎನ್ನುವ ಕಾರಣಕ್ಕೆ ಯುವತಿಯನ್ನು ಬೇರ್ಪಡಿಸಿಲು ಪ್ರಯತ್ನಿಸಿದ್ರು .ಆದ್ರೆ ಇದೇ ವಿಷಯ ಇಬ್ಬರು ಕುಟುಂಬದಲ್ಲಿ ಗಲಾಟೆಗೆ ಕಾರಣವಾಗಿತ್ತು.




Leave a Reply

Your email address will not be published. Required fields are marked *

error: Content is protected !!