BREAKING NEWS
Search

ಪಾಕಿಸ್ತಾನಕ್ಕೆ ಜೈ ಎಂದ ದೇಶದ್ರೋಹಿ ಯುವತಿ-ಸಿ.ಎ.ಎ ಹೋರಾಟ ದೇಶದ್ರೋಹಿ ಹೋರಾಟ-ಸಂಸದ ಅನಂತಕುಮಾರ್ ಹೆಗಡೆ ಕಿಡಿ.

970

ಬೆಂಗಳೂರು:- ನಗರದ ಫ್ರೀಡಂ ಪಾರ್ಕ್​ನಲ್ಲಿ ಸಂಜೆ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಡೆದ ಹೋರಾಟದಲ್ಲಿ ಯುವತಿಯೊಬ್ಬಳು ಪಾಕ್​ ಪರ ಘೋಷಣೆ ಕೂಗಿದ್ದಾಳೆ.

ಅಮೂಲ್ಯ ಲಿಯೋನಾ ಎಂಬ ಯುವತಿ ಪಾಕಿಸ್ತಾನ್​ ಜಿಂದಾಬಾದ್​ ಎಂದು ಘೋಷಣೆ ಕೂಗಿದಳು. ಕೂಡಲೇ ವೇದಿಕೆಯಲ್ಲಿದ್ದ ಎಐಎಂಐಎಂ ಮುಖ್ಯಸ್ಥ ಸಂಸದ ಅಸಾದುದ್ದೀನ್ ಓವೈಸಿ ಯುವತಿಯಿಂದ ಮೈಕ್​ ಕಿತ್ತುಕೊಳ್ಳಲು ಯತ್ನಿಸಿದರು. ಅಲ್ಲದೆ ಕಾರ್ಯಕ್ರಮ ಸಂಘಟಕರು ಯುವತಿಯನ್ನು ಘೋಷಣೆ ಕೂಗದಂತೆ ಎಚ್ಚರಿಸಿದರು. ನಂತರ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.

ವೇದಿಕೆಯಿಂದ ಹೊರ ನಡೆದ ಓವೈಸಿ!

ಯುವತಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಂತೆ ಕೋಪಗೊಂಡ ಸಂಸದ ಅಸಾದುದ್ದೀನ್​ ಓವೈಸಿ ಕಾರ್ಯಕ್ರಮ ಬಹಿಷ್ಕರಿಸಿ ವೇದಿಕೆಯಿಂದ ಇಳಿದು ಹೊರ ನಡೆದರು. ಕೂಡಲೇ ಎಚ್ಚೆತ್ತ ಸಂಘಟಕರು ಕ್ಷಮೆ ಕೋರಿ ಅವರನ್ನು ಸಮಾಧಾನಪಡಿಸಿ ಮರಳಿ ವೇದಿಕೆಗೆ ಕರೆ ತಂದರು.

ಪಾಕ್​ ಪರ ಘೋಷಣೆ ಕೂಗಿದ ಯುವತಿ ಚಿಕ್ಕಮಗಳೂರಿನವಳು!

ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆದ ಹೋರಾಟದಲ್ಲಿ ಪಾಕ್​ ಪರ ಘೋಷಣೆ ಕೂಗಿದ ಯುವತಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದವಳು. ಈಕೆ ಗೌರಿ ಲಂಕೇಶ್​ ಹತ್ಯೆಯಾದ ಬಳಿಕ ಕೂಡ ಪ್ರತಿಭಟನೆಯಲ್ಲಿ ತೊಡಗಿದ್ದಳು ಎಂದು ತಿಳಿದು ಬಂದಿದೆ.

ಪ್ರತಿಭಟನೆಗೆ ಯುವತಿ ಅಮೂಲ್ಯ ಲಿಯೋನಾಳನ್ನು ಆಹ್ವಾನಿಸಿಲ್ಲ ಎಂದು ಸಂಸದ ಓವೈಸಿ ಹೇಳಿದ್ದಾರೆ. ಪ್ರತಿಭಟನೆಯನ್ನು ದಾರಿ ತಪ್ಪಿಸಲು ಕೆಲವರು ಷಡ್ಯಂತರ ನಡೆಸಿದ್ದಾರೆ ಎಂದು ಅವರು ದೂರಿದ್ದಾರೆ.

ವೇದಿಕೆ ಮೇಲಿದ್ದವರನ್ನು ಬಂಧಿಸಿ- ಸಂಸದ ಅನಂತಕುಮಾರ್ ಹೆಗಡೆ.


ಬೆಂಗಳೂರು/ಕಾರವಾರ :-ಬೆಂಗಳೂರಿನ ಪ್ರೀಡಂ ಪಾರ್ಕ ಬಳಿ ಸಿ.ಎ.ಎ ಹೋರಾಟ ಸಭೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಚಿಕ್ಕಮಗಳೂರು ಮೂಲದ ಅಮುಲ್ಯ ಲಿಯೋನ ಜೊತೆಗೆ ವೇದಿಕೆ ಮೇಲಿರುವ ಎಲ್ಲರ ವಿರುದ್ಧ ದೇಶ ದ್ರೋಹದ ವಿರುದ್ಧ ಕೇಸು ದಾಖಲಿಸುವಂತೆ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಸಂಸದ ಅನಂತಕುಮಾರ್ ಹೆಗಡೆ ಎಡಪಂತೀಯ ವಿಚಾರ ದೇಶದ್ರೋಹಿ ವಿಚಾರವಾಗಿ ಮಾರ್ಪಟ್ಟಿದೆ.
ಸಿ.ಎ.ಎ ಹೋರಾಟ ದೇಶದ್ರೋಹಿ ಹೋರಾಟವಾಗಿ ,ದೇಶದ್ರೋಹಿ ಚಟುವಟಿಕೆಯಾಗಿ ಹಿಂದು ವಿರೋಧಿ ಹೋರಾಟವಾಗಿ ಮಾರ್ಪಟ್ಟಿದೆ.
ವೇದಿಕೆ ಮೇಲಿರುವ ಎಲ್ಲರ ಮೇಲೆ ದೇಶದ್ರೋಹದ ಕೇಸು ದಾಖಲಿಸಬೇಕು,ದೇಶದ್ರೋಹಿಗಳನ್ನು ತಕ್ಷಣ ಬಂಧಿಸಬೇಕು,ದೇಶದ್ರೋಹಿಗಳ ಆಡಂಬರ ಆಗಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಎಲ್ಲರನ್ನೂ ದೇಶದ್ರೋಹದ ಪ್ರಕರಣದಲ್ಲಿ ಬಂಧಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಅನಂತಕುಮಾರ್ ಹೆಗಡೆ ಹೇಳಿಕೆ ವಿಡಿಯೋ ನೋಡಿ:-




Leave a Reply

Your email address will not be published. Required fields are marked *