BREAKING NEWS
Search

ಡಿಕೆ ಶಿವಕುಮಾರ್ ಬಂಧಿಸದಂತೆ ಮಧ್ಯಂತರ ರಕ್ಷಣೆ ಅರ್ಜಿ ವಜಾ..!

416

ಬೆಂಗಳೂರು:- ಇಡಿಯಿಂದ ಡಿಕೆಶಿ ಬಂಧಿಸದಂತೆ ಮಧ್ಯಂತರ ರಕ್ಷಣೆ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ‌ ನ್ಯಾಯಪೀಠ ವಜಾಗೊಳಿಸಿದೆ. ಆದೇಶದಲ್ಲಿ ಏನಾದ್ರೂ ತಾಂತ್ರಿಕ ದೋಷಗಳು ಇದ್ದರೆ ಸರಿಪಡಿಸಬಹುದು. ಆದರೆ ಆದೇಶವನ್ನ ಬದಲಾಯಿಸಲು ಸಾಧ್ಯವಿಲ್ಲ. ಸದ್ಯ ಮಧ್ಯಂತರ ರಕ್ಷಣೆ ನೀಡಲು ಸಾಧ್ಯವಿಲ್ಲವೆಂದು ಹೇಳಿ ಅರ್ಜಿ ತಿರಸ್ಕಾರ ಮಾಡಿದೆ.

ವಾದ ಪ್ರತಿವಾದ ಹೀಗಿತ್ತು.:-

ಡಿಕೆ ಪರ ವಕೀಲರ ವಾದ:

ಡಿಕೆ ಶಿವಕುಮಾರ್ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ವಾದ ಮಂಡಿಸಿ, ಎರಡು ಮೂರು ದಿನ ರಜೆ ಇದೆ‌. ನಮಗೆ ಮೆಲ್ಮನವಿ ಸಲ್ಲಿಸಲು ಕಾಲವಾಕಾಶಬೇಕು. ಹಾಗಾಗಿ ಬಂಧನದಿಂದ ರಕ್ಷಣೆ ನೀಡಬೇಕಾಗಿ ಮನವಿ ಮಾಡುತ್ತೆನೆ. ನಿನ್ನೆ ನೊಟೀಸ್ ಕೊಟ್ಟು ಇಂದು ವಿಚಾರಣೆಗೆ ಹಾಜರಾಗಲು ಇಡಿ ಹೇಳಿದೆ. ಸದ್ಯಕ್ಕೆ ನಮಗೆ ವಿಚಾರಣೆಗೆ ಹಾಜರಾಗಲು‌ ಸಾಧ್ಯವಿಲ್ಲ. ಈ ನಡುವೆ ಇಡಿ ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡುವ ಅಧಿಕಾರ ಹೈ ಕೋರ್ಟ್ ಇದೆ. ಹಾಗಾಗಿ ನೀಡಬೇಕು ಎಂದು ವಾದಿಸಿದ್ರು.

ಜಡ್ಜ್ ಪ್ರತಿಕ್ರಿಯೆ:

ಸರಿ ಇದಕ್ಕೆ ಇಡಿ ಪರ ವಕೀಲರು ಏನ್ ಹೇಳ್ತಿರಾ..?
ಇಡಿ ಪರ ವಕೀಲರಿಗೆ ನ್ಯಾ. ಪ್ರಶ್ನೆ

ಇಡಿ ಪರ ವಕೀಲರ ವಾದ:

ಇದಕ್ಕೆ ಇಡಿ ಪರ ವಕೀಲ ಎಂ.ಬಿ ನರಗುಂದ
ತೀವ್ರ ಅಕ್ಷೇಪ. ಈ ಮೊದಲು ನೀಡಿರುವುದು ಮಧ್ಯಂತರ ರಕ್ಷಣೆ ಮಾತ್ರ. ಅದು ಕೇಸ್ ಮುಗಿಯುವವರೆಗೂ ಮಾತ್ರ ಇರುತ್ತೆ. ಈಗ ಅದನ್ನ ಮುಂದುವರೆಸುವುದು ಸರಿಯಲ್ಲ. ಕೇಸ್ ಮುಗಿದ ಮೇಲೆ ಮುಂದುವರೆಸುವಂತೆಯೇ ಇಲ್ಲ. ಹೀಗಾಗಿ ಯಾವುದೇ ಮಧ್ಯಂತರ ಆದೇಶ ನೀಡಬಾರದು

ಜಡ್ಜ್ ಪ್ರತಿಕ್ರಿಯೆ:

ಅಂದ್ರೆ ನೀವು ಯಾವಾಗ ವಿಚಾರಣೆಗೆ ಹಾಜರಾಗ್ತಿರಾ.. .? ಸರಿ ನೀವು ನಾಳೆ ಹಾಜರಾಗ್ತಿರಾ..? ಜಡ್ಜ್ ಡಿಕೆ ಪರ ವಕೀಲರಿಗೆ ಪ್ರಶ್ನೆ.

ಡಿಕೆ ಪರ ವಕೀಲರ ವಾದ:

ಇಲ್ಲ ಸ್ವಾಮಿ‌ ನೀವು ಬಂಧಿಸದಂತೆ ರಕ್ಷಣೆ ನೀಡುವ ತನಕ ವಿಚಾರಣೆಗೆ ಹಾಜರಾಗಲ್ಲ. ನಾವು ಬೇಕಾದ್ರೆ 6 ಇಲ್ಲ 7 ರಂದು ಹಾಜರಾಗುತ್ತೆವೆ

ಜಡ್ಜ್ ಪ್ರತಿಕ್ರಿಯೆ:

ನೀವು ಇಂದೇ ಮೇಲ್ಮನವಿ ಸಲ್ಲಿಸಬಹುದಲ್ವಾ.? ಡಿಕೆ ವಕೀಲರಿಗೆ ಜಡ್ಜ್ ಪ್ರಶ್ನೆ..

ಡಿಕೆ ಟೀಂ ಇತರ ಅರೋಪಿ ಪರ ವಕೀಲ ಉತ್ತರ:

ಈ ವೇಳೆ ಡಿ ಕೆ ಟೀಂ ಬೇರೆ ಅರೋಪಿ‌ಪರ ವಕೀಲ ಶಶಿಕಿರಣ್ ಶೆಟ್ಟಿ ಉತ್ತರಿಸಿ, ಇಂದು ಮೇಲ್ಮನವಿ ಸಲ್ಲಿಸಲು ಕಷ್ಟವಿದೆ. ಹಾಗಾಗಿ ಕಾಲವಾಕಾಶ ಬೇಕಾಗಿದೆ

ಜಡ್ಜ್ ಆದೇಶ:

ಇಷ್ಟು ವಾದ ಪ್ರತಿವಾದ ಆಲಿಸಿದ ನ್ಯಾಯಾಮೂರ್ತಿ ಅರವಿಂದ ಕುಮಾರ್ ಆದೇಶ ಬರೆಸಿದ್ರು. ಈ ಹಿಂದೆ ಇದೇ ಪೀಠ ನೀಡಿದ್ದ ಮಧ್ಯಂತರ ರಕ್ಷಣೆಯನ್ನು ಮುಂದುವರೆಸಿ, ಹಳೇ ಆದೇಶ ಮುಂದೂಡಿಕೆ ಮಾಡಲು ಮನವಿ ಮಾಡಿದ್ದಾರೆ. ನಾಲ್ಕು ವಾರ ಆದೇಶ ಮುಂದುವರಿಸಿ ಜಾರಿಗೆ ಮನವಿ ಮಾಡಿದ್ದಾರೆ.

ಇಂದು ಅರ್ಜಿದಾರರ ಪರ ವಕೀಲರಾದ ಬಿ.ವಿ ಆಚಾರ್ಯ, ನಂಜುಂಡಸ್ವಾಮಿ, ಶಶಕಿರಣ್ ಶೆಟ್ಟಿ ವಾದ ಮಾಡಿದ್ದಾರೆ. ಇದಕ್ಕೆ ಪ್ರತಿವಾದವಾಗಿ ಇಡಿ ಪರ ನರಗುಂದ್,ಉನ್ಬಿಕೃಷ್ಣನ್ ಮತ್ತಿತರು ವಾದ ಮಾಡಿದ್ದಾರೆ .

ಅರ್ಜಿದಾರರು ತೀರ್ಪು ಪ್ರಶ್ನಿಸಿ ಮೇಲ್ಮನವಿಗೆ ಟೈಂ ಕೇಳಿದ್ದಾರೆ. ಬಂಧಿಸದಿದ್ದರೆ ವಿಚಾರಣೆ ಎದುರಿಸುವುದಾಗಿ, ತನಿಖಾಧಿಜಾರಿ ಮುಂದೆ ಹಾಜರಾಗುವುದಾಗಿ ಹೇಳಿದ್ದಾರೆ.

ಇದಕ್ಕೆ ಇಡಿ ಪರ ವಕೀಲರು ಅಕ್ಷೇಪ ವ್ಯಕ್ತಪಡಿಸಿ, ಸಿಆರ್ಪಿಸಿ 482 ಆಡಿಯೋ ಕೋರ್ಟ್ ಈ ಹಿಂದೆ ತೀರ್ಪು ನೀಡಿದೆ.ಆದೇಶ ಮಾಡಿರುವ ನ್ಯಾಯಪೀಠಕ್ಕೆ ತಾಂತ್ರಿಕ ದೋಷ ‌ಮಾರ್ಪಡಿಸುವ ಅಧಿಕಾರ ಇದೆ. ಅದು ಕೇವಲ ಕಾಗುಣಿತದ ರೀತಿ ಬದಲಿಸುವ ಅಧಿಕಾರವಿದೆ.ಆದರೆ ಕೊಟ್ಟ ಆದೇಶವನ್ನೇ ಮಾರ್ಪಾಡು‌ಮಾಡುವ ಅಧಿಕಾರವಿಲ್ಲ ಎಂದಿದ್ದಾರೆ.

ಇನ್ನೂ ಈ ನ್ಯಾಯಪೀಠದಲ್ಲಿ 7/3/19 ಕಪಿಲ್ ಸಿಬಲ್ ವಾದ ಮಾಡಿದ್ದರು. ಆಗ ಕೋರ್ಟ್ ಕನ್ಸಿಡರ್ ಮಾಡಿ ಮಧ್ಯಂತರ ರಕ್ಷಣೆ ನೀಡಿತ್ತು. ಆಗ ಕೋರ್ಟ್ ಇಡಿ ಸಮನ್ಸ್ ನೀಡಿದ್ರೆ ಅರ್ಜಿ ಸಲ್ಲಿಸಲು ಅರ್ಜಿದಾರರಿಗೆ ಹೇಳಿತ್ತು. ಹಾಜರಾಗಲು ಕಾಲವಾಕಾಶ ಕೇಳಿ ಅರ್ಜಿ ಹಾಕಲು ಹೇಳಿತ್ತು.ಆಗ ಅರ್ಜಿದಾರರು ಹಾಕಿದ್ದ ಅರ್ಜಿ ಪರಿಗಣಿಸಲು ಹೇಳಿದ್ದೆವು. ಆದರಂತೆ ಕೇಸ್ ಇತ್ಯರ್ಥ ಆಗುವತನಕ‌ ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿತ್ತು.

ಆದರಂತೆ ಕೇಸ್ ನಲ್ಲಿ ಇಡಿ ಕೇವಲ 226, 227 ಅಡಿ ಮಾತ್ರ ಅರ್ಜಿ ಸಲ್ಲಿಸಿಲ್ಲ.‌ಪ್ರಕರಣದ ಎಲ್ಲಾ ಆಂಶಗಳ ಪರಿಗಣಿಸಿ ಅದರಂತೆ ವಾದ ಪ್ರತಿವಾದ ಆಲಿಸಿದ ನಿನ್ನೆ ಹೈ ಕೋರ್ಟ್ ಸಮನ್ಸ್ ರದ್ದು ಅರ್ಜಿಯನ್ನು ಡಿಸ್ಮಿಸ್ ಮಾಡಿತ್ತು.

ಇಂದಿನ ಫೈನಲ್ ಆದೇಶ:

ಈ ಎಲ್ಲಾ ಅಂಶಗಳನ್ನ ಪರಿಗಣನೆಗೆ ತೆಗೆದುಕೊಂಡು, ಯಾವುದೇ ನ್ಯಾಯಪೀಠಕ್ಕೆ ತಾಂತ್ರಿಕ ದೋಷಗಳು ಇದ್ದರೆ ಸರಿಪಡಿಸಬಹುದಾಗಿದ್ದು, ಆದರೆ ಆದೇಶವನ್ನ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ತೀರ್ಪು ತಡೆ ಸಾಧ್ಯವಿಲ್ಲ. ಹಾಗೂ ಯಾವುದೇ ಮಧ್ಯಂತರ ರಕ್ಷಣೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನ ತಿರಸ್ಕರಿಸುತ್ತಿದೆ.




Leave a Reply

Your email address will not be published. Required fields are marked *